ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ಹೋಬಳಿ ವಲಯ ಮಟ್ಟದ ೧೭ ವರ್ಷ ಒಳಗಿನ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಹಳೇಬೀಡು ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯ ಬಾಲಕರ, ಬಾಲಕಿಯರ, ಶಾಲಾ ಸಮಗ್ರ ಪ್ರಶಸ್ತಿ ಹಾಗೂ ಬಾಲಕರ, ಬಾಲಕಿಯ ವೈಯಕ್ತಿಕ ಚಾಂಪಿಯನ್ ೧೦ನೇ ತರಗತಿಯ ವಿನಯ್, ಟಿ.ವಿ ಮತ್ತು ಬಾಂಧವ್ಯ ಸಿ.ಎಸ್ ಪಡೆದಿದ್ದಾರೆ ಎಂದು ಪ್ರಭಾರಿ ಪ್ರಾಂಶುಪಾಲ ಮೋಹನ್ ರಾಜು ತಿಳಿಸಿದ್ದಾರೆ.ಹಳೇಬೀಡು ಹೋಬಳಿಯ ಸಾಣೆನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದಂತಹ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ- ವಿನಯ್ ೧೦೦,೨೦೦ ಮೀಟರ್ ಓಟ, ಉದ್ದ ಜಿಗಿತ ಪ್ರಥಮ, ಹಂಸರಾಜ್ ೩೦೦೦ ಮೀಟರ್ ಪ್ರಥಮ, ೮೦೦ ಮೀಟರ್ ತೃತಿಯ. ಜೀವನ್ ೧೦೦,೨೦೦ ಮೀಟರ್ ದ್ವಿತೀಯ, ದರ್ಶನ್ ೧೫೦೦ ಮೀಟರ್ ಪ್ರಥಮ, ಯಶವಂತ್ ೮೦೦,೩೦೦೦ ಮೀಟರ್ ದ್ವೀತಿಯ, ಗೋಕುಲ್ ೪೦೦ ಮೀಟರ್ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ನಂದನ್ ಹ್ಯಾಮರ್ ಥ್ರೋ ಪ್ರಥಮ, ಗುಂಡು ಎಸೆತ ತೃತಿಯ, ಬಾಲಕರ ೪೦೦ ರಿಲೇ ಮೀಟರ್, ವಾಲಿಬಾಲ್, ಖೋ ಖೋ ಪ್ರಥಮ, ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ- ಬಾಂಧವ್ಯ ೧೦೦೦,೮೦೦೦ ಮೀಟರ್, ತ್ರಿವಿಧ ಜಿಗಿತ ಪ್ರಥಮ. ವಾಣಿಶ್ರೀ ೩೦೦೦ ಮೀಟರ್ ಪ್ರಥಮ, ತೃತೀಯ ಜಿಗಿತ. ರೇವತಿ ಜಾವೆಲಿನ್ ಪ್ರಥಮ. ಕಲ್ಪನಾ ೪೦೦ ಮೀಟರ್ ಪ್ರಥಮ ೧೦೦ ಮೀಟರ್ ತೃತೀಯ. ಹರ್ಷಿತ ೮೦೦ ದ್ವೀತಿಯ, ೧೫೦೦ ತೃತೀಯ. ಪ್ರೀತಿ ೨೦೦ಮಿ ದ್ವಿತೀಯ, ಭೂಮಿಕ ೩೦೦೦ ಮೀಟರ್ ದ್ವಿತೀಯ, ಸಂಧ್ಯಾ ೪೦೦ ಮೀಟರ್ ತೃತೀಯ, ಪವಿತ್ರ ಹ್ಯಾಮರ್ ಥ್ರೋಬಾಲ್ ತೃತೀಯ, ಬಾಲಕಿಯರ ವಿಭಾಗದಲ್ಲಿ ೪೦೦ ರಿಲೇ, ಖೊ,ಖೋ ಪ್ರಥಮ ಹಾಗೂ ಥ್ರೋಬಾಲ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ ಎಂದು ದೈಹಿಕ ಶಿಕ್ಷಕರಾದ ಪಿ.ಸಿ. ಮಹೇಶ್ ಹಾಗೂ ವಸಂತಕುಮಾರಿ ಮತ್ತು ತರಬೇತಿ ನೀಡಿದ ಎ.ವಿ.ಪುನೀತ್, ಮನು ಮತ್ತು ತಂಡದ ವ್ಯವಸ್ಥಾಪಕರಾದ ಸುರೇಶ್ ನಾಯಕ್, ಪ್ರಸನ್ನ ಕುಮಾರ್, ಶಶಿಧರ್, ಲಕ್ಷ್ಮಿ, ಮಂಜುಳರವರಿಗೆ ಶಾಲಾಭಿವೃದ್ಧಿಯ ಅಧ್ಯಕ್ಷ, ಕ್ಷೇತ್ರ ಶಾಸಕ ಎಚ್.ಕೆ ಸುರೇಶ್, ಕಾರ್ಯಾಧ್ಯಕ್ಷ ಸೋಮಶೇಖರ್ ಮತ್ತು ಸಮಿತಿಯ ಸದಸ್ಯರು ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.