ಸಾರಾಂಶ
ಹಳಿಯಾಳ: ಪಟ್ಟಣದ ಮಿಲಾಗ್ರಿಸ್ ಚರ್ಚಿನ ನೂತನ ಸಲಹಾ ಮಂಡಳಿ ಭಾನುವಾರ ಅಧಿಕೃತವಾಗಿ ಪದಗ್ರಹಣ ಮಾಡಿತು.ಭಾನುವಾರ ಚರ್ಚ್‌ನಲ್ಲಿ ನಡೆದ ಧಾರ್ಮಿಕ ಪೂಜಾ ವಿಧಿಯಲ್ಲಿ ಚರ್ಚಿನ ಪ್ರಧಾನ ಗುರು ವಂದನೀಯ ಫ್ರಾನ್ಸಿಸ್ ಮಿರಾಂಡಾ ಸಲಹಾ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗ ಹಾಗೂ ನಾಮನಿರ್ದೇಶಿತ ಸದಸ್ಯರನ್ನು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಸಲಹಾ ಮಂಡಳಿಯು ಮುಂಬರಲಿರುವ ಮೂರು ವರ್ಷಗಳ ಕಾಲಾವಧಿವರೆಗೆ ಅಧಿಕಾರದಲ್ಲಿರುತ್ತದೆ. ಸಲಹಾ ಮಂಡಳಿಯ ಸದಸ್ಯರಾಗಿ ಸಂತಾನ ಸಾವಂತ, ಓಲಂಪಿಯಾ ಅಲ್ಬುಕರ್ಕ್, ರಾಜೇಶ್ ಡಿಸೋಜ್, ಡಯಾನಾ ಬೃಗಾಂಜಾ, ಅನಿಲ್ ಫನಾಂಡೀಸ್, ಟ್ರಿಜಾ ಮಸ್ಕರೆನ್ಸ್, ಅಂತೋನಿ ನೊರೊನಾ, ರೀಟಾ ಮಸ್ಕರೆನ್ಸ್, ಓರ್ವೆಲ್ ಫರ್ನಾಂಡೀಸ್, ಸಂತಾನಿ ಸುನೀಲ ಡಿಸೋಜ ಆಯ್ಕೆಯಾಗಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿ ಕೈತಾನ ಮಸ್ಕರೆನ್ಸ್, ಜೇಮ್ಸ್ ಡಿಸೋಜ, ಸುನೀಲ ಲೋಪಿಸ್, ಮಾತೆಯಂದಿರ ಸಂಘದ ಪ್ರತಿನಿಧಿಯಾಗಿ ಆಯ್ಕೆಯಾದ ಬೃಗಾಂಜಾ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯದರ್ಶಿ ಆಯ್ಕೆ:ಪೂಜಾ ವಿಧಿಯ ನಂತರ ಹಳೆಯ ಮತ್ತು ನೂತನ ಸಲಹಾ ಮಂಡಳಿಯ ಸದಸ್ಯರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಗುರು ವಂದನೀಯ ಫ್ರಾನ್ಸಿಸ್ ಮಿರಾಂಡಾ ಮಾತನಾಡಿ, ಚರ್ಚ್ ಸಲಹಾ ಮಂಡಳಿಯ ಸದಸ್ಯರಾಗಿ ಉತ್ತಮವಾಗಿ ಜನಪರ ಸೇವೆ ಸಲ್ಲಿಸಿದ ನಿರ್ಗಮಿತ ಸದಸ್ಯರ ಸಹಕಾರ ಸ್ಮರಿಸಿದರು. ನೂತನ ಸಲಹಾ ಮಂಡಳಿಯ ಜವಾಬ್ದಾರಿಯನ್ನು ತಿಳಿ ಹೇಳಿ ಶುಭ ಹಾರೈಸಿದರು.
ಸಲಹಾ ಮಂಡಳಿಗೆ ಕಾರ್ಯದರ್ಶಿಯನ್ನಾಗಿ ಓರ್ವೆಲ್ ಫರ್ನಾಂಡೀಸ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಹಾಯಕ ಗುರು ಅರುಣ ಫರ್ನಾಂಡೀಸ್, ಕಾರ್ಮೆಲ್ ಕಾನ್ವೆಂಟಿನ ಮುಖ್ಯ ಭಗಿನಿ ರೋಜಿಮಾ ಇದ್ದರು.