ಹಳ್ಳಿಮೈಸೂರು ನಾಡಕಚೇರಿ ವಿಎ ಲೋಕಾಯುಕ್ತ ಬಲೆಗೆ

| Published : Sep 19 2025, 01:00 AM IST

ಸಾರಾಂಶ

ಹಳ್ಳಿಮೈಸೂರು ಗ್ರಾಮದ ನಾಡ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ(ವಿಎ) ರಮೇಶ್ ಗುರುವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ರಮೇಶ್ ಅವರು ಮುದ್ದೇಗೌಡ ಎಂಬುವವರ ಪೌತಿ ಖಾತೆ ಮಾಡಿ ಕೊಡುವ ಸಂಬಂಧ ಒಟ್ಟು ೪ ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈಗಾಗಲೇ ೧ ಸಾವಿರ ರು. ಹಣವನ್ನು ಪಡೆದಿದ್ದ ಅವರು, ನಾಡ ಕಚೇರಿಯಲ್ಲೇ ಗುರುವಾರ ಬಾಕಿ ೩ ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಹಳ್ಳಿಮೈಸೂರು ಗ್ರಾಮದ ನಾಡ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ(ವಿಎ) ರಮೇಶ್ ಗುರುವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ರಮೇಶ್ ಅವರು ಮುದ್ದೇಗೌಡ ಎಂಬುವವರ ಪೌತಿ ಖಾತೆ ಮಾಡಿ ಕೊಡುವ ಸಂಬಂಧ ಒಟ್ಟು ೪ ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈಗಾಗಲೇ ೧ ಸಾವಿರ ರು. ಹಣವನ್ನು ಪಡೆದಿದ್ದ ಅವರು, ನಾಡ ಕಚೇರಿಯಲ್ಲೇ ಗುರುವಾರ ಬಾಕಿ ೩ ಸಾವಿರ ರು. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಲುಕಿದ್ದಾರೆ. ಲಂಚದ ಹಣದ ಸಮೇತ ವಿಎ ರಮೇಶ್ ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಶಿಲ್ಪಾ ಹಾಗೂ ಚಂದ್ರಶೇಖರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.