ಸಾರಾಂಶ
ಕಂಪ್ಲಿ: ಈ ಬಾರಿಯೂ ಜ. 12, 13 ಮತ್ತು 14ರಂದು ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ ತಿಂಥಣಿ ಬ್ರಿಜ್‌ನ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದಲ್ಲಿ ನಡೆಯಲಿದ್ದು, ಪ್ರತಿಯೊಬ್ಬರೂ ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಂಪ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಿಂಡಿ ಮಹರ್ಷಿಗೌಡ್ರು ತಿಳಿಸಿದರು.
ತಾಲೂಕಿನ ದೇವಲಾಪುರ ಗ್ರಾಮದ ಕನಕದಾಸರ ವೃತ್ತದಲ್ಲಿ ಶುಕ್ರವಾರ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು.ಪವಿತ್ರ ಪ್ರಾಣಿ ಕುರಿ, ಪಂಚರತ್ನಗಳಾದ ಕಂಬಳಿ, ಭಂಡಾರ, ಡೊಳ್ಳು, ಪಲ್ಲಕ್ಕಿ, ಬೆತ್ತ ಪೂಜೆ ಮತ್ತು ಹಾಲುಮತ ಧರ್ಮದ ಧ್ವಜಾರೋಹಣದೊಂದಿಗೆ ಹಾಲುಮತ ಸಂಸ್ಕೃತಿ ವೈಭವ ಆರಂಭವಾಗಲಿದೆ. ಕೃಷ್ಣ ನದಿಯಲ್ಲಿ ಗಂಗೆ ಪೂಜೆ, ಕುಂಭ- ಕಳಸ, ಡೊಳ್ಳು ವಾದ್ಯಗಳೊಂದಿಗೆ ಬೀರದೇವರ ಪಲ್ಲಕ್ಕಿ ಮೆರವಣಿಗೆ, ಶಿವಸಿದ್ದಯೋಗ ವಿದ್ಯಾಮಂದಿರ ಶಿಲಾನ್ಯಾಸ ಮತ್ತು ಪೂಜಾರಿಗಳ ಸಮಾವೇಶ, ಟಗರುಗಳ ಕಾಳಗ ನಡೆಯಲಿದೆ. ಅಲ್ಲದೇ ಹಾಲುಮತ ಭಾಸ್ಕರ, ಕನಕರತ್ನ, ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಗೌಡ್ರು ನಾಗರಾಜ, ಉದಯಸ್ವಾಮಿ ಒಡೆಯರ, ಸಂಗಟಿ ಅಂಜಿನಪ್ಪ, ಗೌಡ್ರು ನಾಗರಾಜ, ಗೌಡ್ರು ಭೀಮನಗೌಡ, ಎರೆಯಪ್ಪ ಇತರರಿದ್ದರು.