ಸಾರಾಂಶ
ಹಾನಗಲ್ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್.ಐ.ಟಿ. ರಚಿಸುವಂತೆ ಒತ್ತಾಯಿಸಿದರೂ ಸರ್ಕಾರ ಕೇಳುತ್ತಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದೆ. ಇಂತಹ ಅದೆಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ ಎಂದು ಆರೋಪಿಸಿದರು.
ಹಾವೇರಿ: ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಹಾನಗಲ್ ಅತ್ಯಾಚಾರ ಪ್ರಕರಣದ ನಂತರ ಬ್ಯಾಡಗಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಇದೇ ರೀತಿ ಹಲವೆಡೆ ಪ್ರಕರಣಗಳು ನಡೆದಿದ್ದು, ಒಂದೊಂದಾಗಿ ಬೆಳಕಿಗೆ ಬರುತ್ತಿವೆ ಎಂದರು.
ಇಷ್ಟೆಲ್ಲ ಪ್ರಕರಣಗಳು ಹೊರಬರುತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಮಟಕಾ, ಜೂಜು, ಅಕ್ರಮ ಮದ್ಯ ಮಾರಾಟ ಮಾಡಲು ಅಪರಾಧಿಗಳಿಗೆ ಪೊಲೀಸರೇ ಕುಮ್ಮಕ್ಕು ನೀಡುತ್ತಿದ್ದಾರೆ. ಸರ್ಕಾರ ಹಣ ಪಡೆದು ಪೊಲೀಸರನ್ನು ವರ್ಗಾವಣೆ ಮಾಡಿದ್ದರ ಫಲವಾಗಿ ಇದು ನಡೆದಿದೆ ಎಂದು ಆರೋಪಿಸಿದರು.
ಹಾನಗಲ್ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್.ಐ.ಟಿ. ರಚಿಸುವಂತೆ ಒತ್ತಾಯಿಸಿದರೂ ಸರ್ಕಾರ ಕೇಳುತ್ತಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿದೆ. ಇಂತಹ ಅದೆಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಪರಾಧಿಗಳಿಗೆ, ಅತ್ಯಾಚಾರಿಗಳಿಗೆ ರಾಜ್ಯ ಸರ್ಕಾರದ ರಕ್ಷಣೆ ಇದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಈ ಪ್ರಕರಣವನ್ನು ತಾರ್ಕಿಕ ಅಂತ್ಯದ ವರೆಗೆ ಒಯ್ಯಲು ನಿರಂತರ ಪ್ರತಿಭಟನೆ ನಡೆಸುತ್ತೇವೆ. ಕಾನೂನು ಹೋರಾಟವನ್ನೂ ನಡೆಸಲಿದ್ದೇವೆ ಎಂದರು.
ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ನಾವು ಆರೋಪಿಸುವಂತೆ ಘಟನೆ ನಡೆದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇಬ್ಬರೂ ಪೊಲೀಸರನ್ನು ಅಮಾನತು ಮಾಡಿದ್ದೇಕೆ..? ಆ ಹೆಣ್ಣು ಮಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡುವುದು ಇವರಿಂದ ಆಗಿಲ್ಲ. ಇಂತಹ ಘಟನೆಯಾದಗ ಸರ್ಕಾರವೇ ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು ಎಂದರು.
ಹಾನಗಲ್ ರೇಪ್: ನಿಷೇಧಿತ ಪಿಎಫ್‌ಐ ಕಾರ್ಯಕರ್ತರು ಮಾಡಿರುವ ಕೃತ್ಯ- ಜೋಶಿ
ಹುಬ್ಬಳ್ಳಿ: ಹಾನಗಲ್‌ನಲ್ಲಿ ರೇಪ್ ಮಾಡಿದವರು ನಿಷೇಧಿತ ಪಿಎಫ್‌ಐನ ಕಾರ್ಯಕರ್ತರು ಎಂಬ ಮಾಹಿತಿ ಬಂದಿದೆ. ಆದರೆ ರಾಜ್ಯ ಸರ್ಕಾರ ಇವರನ್ನು ರಕ್ಷಿಸಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕನ ಜೊತೆಗೆ ಮುಸ್ಲಿಂ ಯುವತಿ ಇದ್ದಳು. ಈ ವಿಷಯ ತಿಳಿದು ಇವರು ಬಂದು ಹಲ್ಲೆ ನಡೆಸಿ ರೇಪ್ ಮಾಡಿ ಅದನ್ನು ವಿಡಿಯೋ ಮಾಡಿ ಹೆದರಿಸಿದ್ದಾರೆ. ಇವರು ನಿಷೇಧಿತ ಪಿಎಫ್‌ಐನ ಕಾರ್ಯಕರ್ತರಾಗಿದ್ದರು ಎಂಬ ಮಾಹಿತಿ ಇದೆ. ಈ ಸರ್ಕಾರ ಇಂಥವರನ್ನು ರಕ್ಷಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಎಸ್‌ಐಟಿ ಮಾಡಿ ತನಿಖೆ ಮಾಡಿ ಎಂದು ಅನೇಕ ಬಾರಿ ಹೇಳಿದ್ದೇವು. ಆದರೆ ಕೇಳುತ್ತಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸರ್ಕಾರ ಬರೀ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಹಬ್ಬದ ವಾತಾವರಣ: ರಾಮಮಂದಿರ ನಿರ್ಮಾಣದಿಂದ ದೇಶಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರಾಣ ಪ್ರತಿಷ್ಠಾಪನೆ ಕ್ಷಣ ಸಂಭ್ರಮಿಸಲು ದೇಶವೇ ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕೇಂದ್ರ ಸರ್ಕಾರ ಅರ್ಧ ದಿನ ರಜೆ ಕೊಟ್ಟಿದೆ, ಅದೇ ರೀತಿ ರಾಜ್ಯ ಸರ್ಕಾರವೂ ರಜೆ ನೀಡಲಿ ಎಂದು ಇದೇ ವೇಳೆ ಆಗ್ರಹಿಸಿದರು.
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪಕ್ಷದಿಂದ ದೂರ ಉಳಿದಿಲ್ಲ. ಜನವರಿ ಅಂತ್ಯದ ವೇಳೆಗೆ ನನ್ನನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.