ಸಾರಾಂಶ
ರಾಮೇನಹಳ್ಳಿ ಜಾತ್ರೆಯಲ್ಲಿ ಆದಿ ಜಾಂಬವ ಜನಾಂಗದ ಮೂವರು ಯುವಕರು ಮತ್ತು ಒಬ್ಬ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣದ
ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನ ಹನಗೋಡು ಹೋಬಳಿ ರಾಮೇನಹಳ್ಳಿ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ದಿನದಂದು ನಿಲುವಾಗಿಲು ಗ್ರಾಮದ ನಾಲ್ವರು ಪ. ಜಾತಿಯ ಆದಿಜಾಂಬವ ಸಮುದಾಯದ ಯುವಕರ ಮೇಲೆ ನಡೆದಿರುವ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಬಿ. ಶಿವಣ್ಣ ಆಗ್ರಹಿಸಿದರು.ಶಿರಸ್ತೇದಾರ್ ಶ್ರೀಪಾದ ನಲವತ್ತ್ ವಾಡಕರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಮೇನಹಳ್ಳಿ ಜಾತ್ರೆಯಲ್ಲಿ ಆದಿ ಜಾಂಬವ ಜನಾಂಗದ ಮೂವರು ಯುವಕರು ಮತ್ತು ಒಬ್ಬ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣದ ನಡೆದಿದೆ. ಆರೋಪಿಗಳ ವಿರುದ್ಧ ದೌರ್ಜನ್ಯ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರೂ ಈವರೆಗೂ ಅವರನ್ನು ಬಂಧಿಸಿಲ್ಲ. ಕೇಸ್ ಮತ್ತು ಕೌಂಟರ್ ಕೇಸ್ ಮಾಡಿ ಪೊಲೀಸರು ಮೌನವಾಗಿರುವುದು ಸರಿಯಲ್ಲ. ಇದರಿಂದ ಆದಿಜಾಂಬವ ಸಮಾಜದ ಆತಂಕವನ್ನು ಎದುರಿಸುತ್ತಿದೆ. ಈ ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಕುಮಾರ್, ತಾಲೂಕು ಗೌರವಾಧ್ಯಕ್ಷ ರಾಚಯ್ಯ, ಜಿಲ್ಲಾಧ್ಯಕ್ಷೆ ಶಿವಮ್ಮ, ಚೇತನ್ ಕುಮಾರ್, ರಾಮು, ರಾಮಕೃಷ್ಣ, ಕುಮಾರ್, ಮಹದೇವ ಇದ್ದರು.