ಸಾರಾಂಶ
ನಗರದಲ್ಲಿ ನಡೆಯಲಿರುವ ಗ್ರಾಮದೇವತಾ ಜಾತ್ರೆ ಹಿನ್ನೆಲೆಯಲ್ಲಿ ನಗರದ ದೇವಸ್ಥಾನದ ರಸ್ತೆಯ ಎಸ್‍ಎಸ್‍ಕೆ ವೃತ್ತದ ಬಳಿ ಚೌಕಿಮನೆ ನಿರ್ಮಾಣಕ್ಕಾಗಿ ಶುಕ್ರವಾರ ಬೆಳಿಗ್ಗೆ ಹಂದರಗಂಬ ಪೂಜೆಯನ್ನು ಸಕಲ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
- ಮಾ.18ರಿಂದ 22ರವರೆಗೆ ಜಾತ್ರೆ । ಎಸ್‍ಎಸ್‍ಕೆ ವೃತ್ತ ಬಳಿ ಚೌಕಿಮನೆ ನಿರ್ಮಾಣಕ್ಕೆ ಚಾಲನೆ- - - ಹರಿಹರ: ನಗರದಲ್ಲಿ ನಡೆಯಲಿರುವ ಗ್ರಾಮದೇವತಾ ಜಾತ್ರೆ ಹಿನ್ನೆಲೆಯಲ್ಲಿ ನಗರದ ದೇವಸ್ಥಾನದ ರಸ್ತೆಯ ಎಸ್‍ಎಸ್‍ಕೆ ವೃತ್ತದ ಬಳಿ ಚೌಕಿಮನೆ ನಿರ್ಮಾಣಕ್ಕಾಗಿ ಶುಕ್ರವಾರ ಬೆಳಿಗ್ಗೆ ಹಂದರಗಂಬ ಪೂಜೆಯನ್ನು ಸಕಲ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ನಗರದಲ್ಲಿ ಮಾರ್ಚ್ 18 ರಿಂದ 22 ರವರೆಗೆ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆ ನಡೆಸಲು ಈಗಾಗಲೇ ತೀರ್ಮಾನವಾಗಿದ್ದು, ಚೌಕಿಮನೆ ನಿರ್ಮಣ ಇಂದಿನಿಂದ ಪ್ರಾರಂಭವಾಗಲಿದೆ. ಬೆಳಗ್ಗೆ ವಿಘ್ನೇಶ್ವರ ಸ್ವಾಮಿ ಹಾಗೂ ಊರಮ್ಮ ದೇವಿಯ ಫೋಟೋಗಳಿಗೆ ನಾರಾಯಣ ಜೋಯಿಸ್ ಹಾಗೂ ಹರಿಶಂಕರ್ ಜೋಯಿಸ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಹಂದರಕಂಬಕ್ಕೆ ಹಾಲು ಹಾಕಿ ಉಧೋ ಉಧೋ ಎಂಬ ಜೈಕಾರ ಹಾಕುತ್ತ ಊರಮ್ಮ ದೇವಿ ಚೌಕಿಮನೆ ನಿರ್ಮಾಣಕ್ಕೆ ಗಣ್ಯರಿಂದ ಚಾಲನೆ ನೀಡಲಾಯಿತು.
ಕಸಬಾ ಗೌಡರ ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡರ ಚನ್ನಬಸಪ್ಪ ಗೌಡ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಚ್. ಜಂಬಣ್ಣ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಕಸಬಾ ಬಣಕಾರ ಸಿದ್ದಪ್ಪ, ಮಾಜೇನಹಳ್ಳಿ ಬಣಕಾರ ಆಂಜನೇಯ, ಉತ್ಸವ ಸಮಿತಿಯ ಅಧ್ಯಕ್ಷ ಹಾರ್ನಳ್ಳಿ ಮಂಜುನಾಥ್ ಇತರರು ಹಾಜರಿದ್ದರು.- - - -14ಎಚ್‍ಆರ್‍ಆರ್01, 02:
ಹರಿಹರ ದೇವಸ್ಥಾನ ರಸ್ತೆಯಲ್ಲಿ ಗ್ರಾಮದೇವತಾ ಉತ್ಸವಕ್ಕಾಗಿ ಚೌಕಿಮನೆ ನಿರ್ಮಾಣಕ್ಕೆ ಹಂದರಗಂಬ ಪೂಜೆ ನಡೆಯಿತು.