ಹ್ಯಾಂಡ್ ಬಾಲ್ ಪಂದ್ಯಾವಳಿ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

| Published : Nov 15 2024, 12:33 AM IST

ಸಾರಾಂಶ

ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದ ಶ್ರೀವಿದ್ಯಾಗಣಪತಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿತು.

ಕನ್ನಡಪ್ರಭ ವಾರ್ತೆ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ಕೊತ್ತತ್ತಿ ಗ್ರಾಮದ ಶ್ರೀವಿದ್ಯಾಗಣಪತಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದೇ ತಿಂಗಳು ಚತ್ತೀಸ್ ಗಡದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದ ವಿದ್ಯಾರ್ಥಿನಿಯರನ್ನು ಶಾಲೆ ಅಧ್ಯಕ್ಷ ಕೆ.ಜವರೇಗೌಡ, ಆಡಳಿತ ಮಂಡಳಿ, ದೈಹಿಕ ಶಿಕ್ಷಣ ಶಿಕ್ಷಕ ಇ.ಪ್ರಕಾಶ್ , ಶಿಕ್ಷಕರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.ಚೆಲುವನಾರಾಯಣಸ್ವಾಮಿಗೆ ರಾಜಮುಡಿ ಕಿರೀಟಧಾರಣೆ ಸಂಪನ್ನ

ಮೇಲುಕೋಟೆ:

ಶ್ರೀಚೆಲುವನಾರಾಯಣಸ್ವಾಮಿಗೆ ಗುರುವಾರ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಹೋತ್ಸವ ಶಾಸ್ತ್ರೋಕ್ತವಾಗಿ ನೆರವೇರವ ಮೂಲಕ ಕಾರ್ತಿಕ ಬ್ರಹ್ಮೋತ್ಸವದಲ್ಲಿ ರಾಜಮುಡಿ ಕಿರೀಟಧಾರಣೆ ಸಂಪನ್ನಗೊಂಡಿದೆ.

ಬ್ರಹ್ಮೋತ್ಸವದ 9ನೇ ತಿರುನಾಳ್ ಅಂಗವಾಗಿ ಬೆಳಗ್ಗೆ ಸಂಧಾನಸೇವೆ ನಡೆದ ನಂತರ ರಾಜಮುಡಿ ಧರಿಸಿದ ಚೆಲುವನಾರಾಯಣ ಸ್ವಾಮಿ ಉತ್ಸವ ನೆರವೇರಿತು. ಕಲ್ಯಾಣಿಯಲ್ಲಿ ಸ್ನಪನಶಲ್ವರಿಗೆ ತೀರ್ಥಸ್ನಾನ ನಡೆದು ವೇದಾಂತ ದೇಶಿಕರ ಸನ್ನಿಧಿ ನಂತರ ಮನವಾಳಮಾಮುನಿ ಜೀಯರ್ ಸನ್ನಿಧಿಗೆ ಉತ್ಸವ ನೆರವೇರಿತು.

ಚೆಲುವನಾಯಣಸ್ವಾಮಿಗೆ ಆಗಮೋಕ್ತವಾಗಿ ಬ್ರಹ್ಮೋತ್ಸವದ ಪ್ರಮುಖಕಾರ್ಯಕ್ರಮಗಳಾದ ಪಡಿಮಾಲೆ, ಚೂರ್ಣಾಭಿಷೇಕ, ಪೂರ್ಣಾಹುತಿ ನಡೆದು ಬ್ರಹ್ಮೋತ್ಸವಕ್ಕೆ ಶ್ರಮಿಸಿದ ದೇವಾಲಯದ ಸ್ಥಾನೀಕರಿಗೆ ಅನೂಚಾನ ಪರಂಪರೆಯಂತೆ ಮಾಲೆಮರ್ಯಾದೆ ನೆರವೇರಿದವು.

ಈ ವರ್ಷ ಸ್ಥಾನೀಕಂ ಶ್ರೀನಿವಾಸನರಸಿಂಹನ್‌ಗುರೂಜಿ, ಕರಗಂರಾಮಪ್ರಿಯ, ಕೋವಿಲ್‌ನಂಬಿ ಮುಕುಂದನ್ ಭಗವಂತನ ಮಾಲೆ ಮರ್ಯಾದೆ ಸ್ವೀಕರಿಸಿದರು. ಶುಕ್ರವಾರ ಬ್ರಹ್ಮೋತ್ಸವದ 10 ದಿನದ ಕಾರ್ಯಕ್ರಮದ ನಿಮಿತ್ತ ಪುಷ್ಪಯಾಗ ಮಹೋತ್ಸವ ನೆರವೇರಲಿದೆ. ದೇಗುಲದ ಇಒ ಎನ್.ಎಸ್. ಶೀಲ ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಭಾಗಿಯಾಗಿದ್ದರು.