ಸಾರಾಂಶ
ದಾಬಸ್‌ಪೇಟೆ: ಸಾರ್ವಜನಿಕರ ಅನುಕೂಲಕ್ಕಾಗಿ ಪೋಲೀಸ್ ಇಲಾಖೆಯವರು ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲು ನೆರವಾಗುವ ಉದ್ದೇಶದಿಂದ ರಾಮ್ಕೋ ಕಂಪನಿಯವರು ಬ್ಯಾರಿಕೇಡ್‌ಗಳನ್ನು ನೀಡುತ್ತಿದ್ದು ಶ್ಲಾಘನೀಯ ಎಂದು ಎಸ್.ಎಲ್.ಎನ್ ಟ್ರೇಡರ್ಸ್ ಮಾಲೀಕ ಸುರೇಶ್ ತಿಳಿಸಿದರು.

ದಾಬಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗ ರಾಮ್ಕೋ ಕಂಪನಿ ವತಿಯಿಂದ 25 ಬ್ಯಾರಿಕೇಡ್‌ಗಳನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಮಾತನಾಡಿದರು.ಬೆಳೆಯುತ್ತಿರುವ ದಾಬಸ್‌ಪೇಟೆ ಪಟ್ಟಣದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ, ಒಂದು ರಾಜ್ಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಹಾದುಹೋಗಿದ್ದು ಅಧಿಕ ಟ್ರಾಫಿಕ್ ಒತ್ತಡ ನಿವಾರಣೆ ಮುಖೇನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬ್ಯಾರಿಕೇಡ್‌ಗಳು ಸಹಕಾರಿಯಾಗಲಿವೆ. ಈ ಹಿನ್ನೆಲೆಯಲ್ಲಿ ರಾಮ್ಕೋ ಕಂಪನಿಗೆ ತಿಳಿಸಿ ಠಾಣೆಗೆ ಸಿಎಸ್‌ಆರ್ ನಿಧಿಯಡಿ 25 ಬ್ಯಾರಿಕೇಡ್‌ಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಕಂಪನಿ ವತಿಯಿಂದ ಇನ್ನಷ್ಟು ಸಾರ್ವಜನಿಕ ಕಾರ್ಯಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಾಬಸ್‌ಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜು, ರಾಮ್ಕೋ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಸಿದ್ದರಾಮು, ನಾಗರಾಜು, ವಿಘ್ನೇಶ್ವರ ಎಂಟರ್ ಪ್ರೈಸಸ್ ನ ರಮೇಶ್, ಎಸ್.ಎಲ್.ಎನ್ ಟ್ರೇಡರ್ಸ್ ಮಾಲೀಕ ಸುರೇಶ್ ಪಿ. ಆರ್, ಶಂಕರ್ ಟ್ರೇಡರ್ಸ್ ಪರಮೇಶ್, ಎಸ್.ಎಲ್.ವಿ ಟ್ರೇಡಸ್ರ್ ಗೋವರ್ದನ್ ಇತರರಿದ್ದರು.ಪೋಟೋ 9:ದಾಬಸ್‌ಪೇಟೆ ಪೊಲೀಸ್ ಠಾಣೆಗೆ ರಾಮ್ಕೋ ಕಂಪನಿಯವರು 25 ಬ್ಯಾರಿಕೇಟ್‌ಗಳನ್ನು ಹಸ್ತಾಂತರಿಸಿದರು.