ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ನೀಡಿ

| Published : May 24 2024, 12:49 AM IST

ಸಾರಾಂಶ

ಇಳಕಲ್ಲ: ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಇಲ್ಲಿನ ಅಂಬಿಗೇರ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು.

ಇಳಕಲ್ಲ: ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಇಲ್ಲಿನ ಅಂಬಿಗೇರ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು.

ಸಮಾಜದ ಅಧ್ಯಕ್ಷ ಬಸವರಾಜ ಜುಮಲಾಪೂರ ನೇತೃತ್ವದಲ್ಲಿ ಹಿರಿಯರು ಮತ್ತು ಯುವಕರು ತಹಸೀಲ್ದಾರ್‌ ಕಚೇರಿಗೆ ತೆರಳಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಕೊಲೆ ಮಾಡಿದ ವ್ಯಕ್ತಿಗೆ ಗಲ್ಲು ಶಿಕ್ಷೆ ನೀಡಬೇಕು, ಮೃತ ಅಂಜಲಿ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಕೊಡಬೇಕು ಹಾಗೂ ಕುಟುಂಬದ ಓರ್ವ ವ್ಯಕ್ತಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಯಮನೂರ ಹಂಚಿನಾಳ ಆಗ್ರಹಿಸಿದರು.

ಗದ್ದೆಪ್ಪ ತಪ್ಪಲದಡ್ಡಿ, ಪುಲಕೇಶಿ ಸುಣಗಾರ, ಹುಲ್ಲಪ್ಪ ಕಿಡದೂರು, ಮಲ್ಲು ಐಹೊಳೆ, ಮಲ್ಲು ಕನಕೇರಿ, ಸುನೀಲ ತಪ್ಪಲದಡ್ಡಿ, ಶಶಿ ಅಡಿಹಾಳ, ಸಾಯಿನಾಥ ತಪಲ್ಲದಡ್ಡಿ ಮತ್ತಿತರರು ಉಪಸ್ಥಿತರಿದ್ದರು.