ಡಿಸೆಂಬರ್‌ ಒಳಗೆ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಕೆಲಸ ಮುಗಿಸಿ

| Published : Apr 24 2025, 12:02 AM IST

ಸಾರಾಂಶ

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರ ನಿಗದಿಪಡಿಸಿದ ಷರತ್ತುಗಳು ಹಾಗೂ ಗುಣಮಟ್ಟ ಪಾಲನೆಯ ಜತೆಗೆ ಡಿಸೆಂಬರ್ ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕಾದ್ದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಕಾರ್ಮಿಕರ ಕೊರತೆ ಅಥವಾ ವೈಯಕ್ತಿಕ ಕಾರಣಗಳಿಗೆ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ಕಾರ್ಯದಿಂದ ವೈಯಕ್ತಿಕವಾಗಿ ಬೇಸರವಾಗಿದ್ದು, ಮಳೆಗಾಲದ ಒಳಗೆ ಮೇಜರ್ ಕೆಲಸಗಳನ್ನು ಮುಗಿಸಲು ಸೂಚಿಸಿದ್ದೇವೆ ಎಂದ ಸಂಸದ ಶ್ರೇಯಸ್ ಎಂ.ಪಟೇಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಹಂಗರಹಳ್ಳಿ ಸಮೀಪ ಪುನರ್ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಸಾರ್ವಜನಿಕ ಹಿತಾಸಕ್ತಿಯಿಂದ ಯಾರೇ ಅನುದಾನ ತಂದರೂ ಸ್ವಗತಾರ್ಹ, ಜತೆಗೆ ಸಾರ್ವಜನಿಕರಿಗೆ ಉಪಯೋಗವಾಗುವ ಅನುದಾನ ತನ್ನಿ, ವೈಯಕ್ತಿಕವಾಗಿ ನನ್ನ ಕೆಲಸ ಬೇರೆಯವರ ಕೆಲಸಕ್ಕೆ ಯೋಜನೆ ತರುವುದಲ್ಲವೆಂದರು. ಹೊಳೆನರಸೀಪುರ ಉದ್ದ ಅಗಲ ಬೆಳೆದೇ ಇಲ್ಲ, ಇನ್ನೂ ಕಾಂಪ್ಯಾಕ್ಟ್ ಆಗಿದೆ, ಇನ್ನೂ ನೂರಾರು ಯೋಜನೆಗಳನ್ನು ತರಬಹುದಿತ್ತು, ಆದರೆ ವೈಯಕ್ತಿಕಕ್ಕಾಗಿ ರಸ್ತೆಗಳನ್ನು ತಂದರೇನು ಮಾಡಲಾಗುತ್ತೆ ಎಂದರು.

ಪ್ರಶ್ನೆಯೊಂದಕ್ಕೆ ಸಂಸದರು ಉತ್ತರಿಸಿ, ಲೋಕಸಭಾ ಸದಸ್ಯರಾಗಿ ಒಂದು ವರ್ಷವಾಗಿದ್ದು, ಕ್ಷೇತ್ರದ ಅಭಿವೃದ್ಧಿ ಸಂಬಂಧಿಸಿದಂತೆ ಹೊಸ ಅನುದಾನ ವಿಷಯದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು ಜತೆಗೆ ಹಲವಾರು ಕಾಮಗಾರಿ ವಿಷಯ ಪ್ರಸ್ತಾಪಿಸಿದ್ದು, ಅವುಗಳಿಗೆ ಅನುಮೋದನೆ ಸಹ ದೊರೆತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಕ್ಷೇತ್ರಕ್ಕೆ ಆಹ್ವಾನಿಸಿ, ದೊಡ್ಡ ಕಾರ್ಯಕ್ರಮ ಏರ್ಪಡಿಸಿ, ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ನಿಮಗೆ ತೋರಿಸುತ್ತೇವೆ ಎಂದರು.ರೈಲ್ವೆ ಇಲಾಖೆಯ ವಿಭಾಗೀಯ ಸಹಾಯಕ ಎಂಜಿನಿಯರ್ ಬಷೀರ್, ಕಾರ್ಯ ನಿರ್ವಾಹಕ ಎಂಜಿನಿಯರ್ ವಿನೋದ್, ಎಂ.ವಿ.ಕನ್ಸ್‌ಷ್ಟ್ರಕ್ಷನ್ಸ್ ಕಂಪನಿ ಮಾಲೀಕ ವೆಂಕಟೇಶ್, ಇತರರು ಇದ್ದರು.