ಎಲ್ಲೆಡೆ ಸಂಭ್ರಮದಿಂದ ಹನುಮ ಜಯಂತಿ ಆಚರಣೆ

| Published : Apr 13 2025, 02:01 AM IST

ಸಾರಾಂಶ

ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

- ಹನುಮ ಜಯಂತಿ: ಆಂಜನೇಯಗೆ ವಿಶೇಷ ಅಭಿಷೇಕ, ಪೂಜೆ, ಮೆರವಣಿಗೆ । ಕೋಸಂಬರಿ, ಪಾನಕ ವಿತರಣೆ, ಅನ್ನ ಸಂತರ್ಪಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ದೇವಾಲಯಗಳಲ್ಲಿ ಸ್ವಾಮಿಯ ಮೂರ್ತಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರದೊಂದಿಗೆ ತೊಟ್ಟಿಲು ಕಾರ್ಯಕ್ರಮ, ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕೆಲವೆಡೆ ಸ್ವಾಮಿಯ ಮೆರವಣಿಗೆ ನಡೆಯಿತು. ಭಕ್ತರು ಸ್ವಾಮಿಯ ತೊಟ್ಟಿಲು ತೂಗಿ ಪುನೀತರಾದರು.

ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ:

ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್‌ನಿಂದ ಎಸ್.ನಿಜಲಿಂಗಪ್ಪ ಬಡಾವಣೆ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿ ಹಾಗೂ 18ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ತೊಟ್ಟಿಲು ಕಾರ್ಯಕ್ರಮ, ನವಗ್ರಹ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಪ್ರಧಾನ ಅರ್ಚಕ ಬಸಯ್ಯ ಶಾಸ್ತ್ರಿ ಹಿರೇಮಠ ನೇತೃತ್ವದಲ್ಲಿ ಶನಿವಾರ ಬೆಳಗಿನ ಜಾವ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಮಹಾ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಕಾರ್ಯಕ್ರಮಗಳು ನಡೆದವು. 11.30ಕ್ಕೆ ಸ್ವಾಮಿಯ ತೊಟ್ಟಿಲು ಶಾಸ್ತ್ರ ನಡೆಯಿತು. ಸತ್ಯನಾರಾಯಣ ಪೂಜಾ ಕಾರ್ಯಕ್ರಮ, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು. ಪಾಲಿಕೆ ಮಾಜಿ ಸದಸ್ಯ, ಟ್ರಸ್ಟ್ ಅಧ್ಯಕ್ಷ ಎ.ನಾಗರಾಜ, ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ದುಗ್ಗಪ್ಪ ಸೇರಿದಂತೆ ಅನೇಕ ಗಣ್ಯರು, ಭಕ್ತರು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಪದ್ಮಾಸನ ಆಂಜನೇಯ ದೇವಸ್ಥಾನ:

ಶ್ರೀ ನಾಟ್ಯ ಗಣಪತಿ ಸೇವಾ ಸಮಿತಿ ಮತ್ತು ಭಕ್ತ ಮಂಡಳಿ ಟ್ರಸ್ಟ್ ವತಿಯಿಂದ ದೇವಸ್ಥಾನ ಆವರಣದಲ್ಲಿ ಪದ್ಮಾಸನ ಹನುಮ ಜಯಂತಿ ಆಚರಿಸಿ, ತೊಟ್ಟಿಲು ಕಾರ್ಯಕ್ರಮ ನೆರವೇರಿಸಿ, ಪದ್ಮಾಸನ ಆಂಜನೇಯ ಸ್ವಾಮಿ ಎಂದು ಹೆಸರಿಡಲಾಯಿತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ಬಾಬು, ಕಾರ್ಯದರ್ಶಿ ಡಾ. ಕೆ.ಎಸ್. ಗಂಗಾಧರ, ಖಜಾಂಚಿ ಬಿ.ವಿ. ರಾಜಶೇಖರ, ಸಾಗರ್ ಪಿ. ತೌಡೂರು, ಮಾಧುರಿ ವ್ಯಾಸರಾಜ್, ನಂಜುಂಡಮ್ಮ ವೀರಾಚಾರ್, ಕೆ.ಎಂ.ವೀರೇಶ್, ಗೋಪಿ ಚಂದ್ರು, ಪೈಂಟರ್ ಮೇಸ್ತ್ರಿ ನಾಗರಾಜ್, ಆರ್ಚಕರಾದ ನಾಗಲಿಂಗಯ್ಯ ಹಿರೇಮಠ್, ರಾಜಣ್ಣ ಮತ್ತಿತರ ಮುಖಂಡಿದ್ದರು.

- - -

(ಬಾಕ್ಸ್‌) * ವಾಸವಿ ಯುವಜನ ಸಂಘದಿಂದ ಕೋಸಂಬರಿ, ಪಾನಕ ವಿತರಣೆ ಡಿಸಿಎಂ ಟೌನ್‌ಶಿಪ್‌ನ ಶ್ರೀ ವಾಸವಿ ಯುವಜನ ಸಂಘದಿಂದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಜಯದೇವ ವೃತ್ತದಲ್ಲಿ ಸಾರ್ವಜನಿಕರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ವಿ. ಸುಧೀಂದ್ರ ಗುಪ್ತ, ಅಧ್ಯಕ್ಷ ಎಚ್.ವಿ. ಶ್ರೀನಿವಾಸ, ಪಿ.ಅನಿಲ್ ಕುಮಾರ, ಜೆ.ಪಿ. ಪ್ರದೀಪಕುಮಾರ, ಪಿ.ಎಲ್. ತಿಲಕ್, ಜೆ.ಬಿ. ಮಾಲತೇಶ, ಡಿ.ಎಂ.ರಾಕೇಶ ಗುಪ್ತ, ಜೆ.ಆರ್.ರಾಕೇಶ ಕುಮಾರ, ಬಿ.ಆರ್. ಯಶವಂತಕುಮಾರ್, ಕೆ.ಪಿ. ನಾಗರಾಜ, ಜಿ.ಸುಬ್ರಹ್ಮಣ್ಯ, ಎಸ್.ಬಾಲಚಂದ್ರ, ಪದಾಧಿಕಾರಿಗಳು, ಸದಸ್ಯರು ಇದ್ದರು. ವಿವಿಧೆಡೆ ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ, ಮಜ್ಜಿಗೆ, ಕೋಸಂಬರಿ, ಪಾನಕ ವಿತರಣಾ ಕಾರ್ಯಕ್ರಮಗಳು ನಡೆದವು.

ಎಲೆಬೇತೂರು:

ದಾವಣಗೆರೆ ತಾಲೂಕು ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ದವನ ಹುಣ್ಣಿಮೆ ಹಾಗೂ ಹನುಮ ಜಯಂತಿ ಪ್ರಯುಕ್ತ ಬೆಳಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಕುಂಕುಮಾರ್ಚನೆ, ವಸ್ತ್ರಾಲಂಕಾರ, ಪುಷ್ಪಾರ್ಚನೆ, ತುಳಸಿ ಹಾಗೂ ವಿಳೇದೆಲೆ ಹಾರ, ವಿವಿಧ ಹೂಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. - - -

-12ಕೆಡಿವಿಜಿ32: ಎಸ್.ನಿಜಲಿಂಗಪ್ಪ ಬಡಾವಣೆಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ.

-12ಕೆಡಿವಿಜಿ33: ಜಯದೇವ ವೃತ್ತ ದೇವಸ್ಥಾನದ ಶ್ರೀ ಆಂಜನೇಯ ಸ್ವಾಮಿ

-12ಕೆಡಿವಿಜಿ34: ಎಲೆಬೇತೂರು ಆಂಜನೇಯಗೆ ವಿಶೇಷ ಅಲಂಕಾರ.