ಸಾರಾಂಶ
ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸ್ವೀಪ್ ಕಾರ್ಯಕ್ರಮದ ಚುನಾವಣಾ ರಾಯಭಾರಿ ಆಗಿದ್ದ ಗಾಯಕ ಹನುಮಂತ ಲಮಾಣಿ ಈ ಬಾರಿಯ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಮತದಾನಕ್ಕೆ ಗೈರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹಾವೇರಿ (ಶಿಗ್ಗಾಂವಿ)
ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸ್ವೀಪ್ ಕಾರ್ಯಕ್ರಮದ ಚುನಾವಣಾ ರಾಯಭಾರಿ ಆಗಿದ್ದ ಗಾಯಕ ಹನುಮಂತ ಲಮಾಣಿ ಈ ಬಾರಿಯ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಮತದಾನಕ್ಕೆ ಗೈರಾಗಿದ್ದಾರೆ.ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅವರ ತಂದೆ-ತಾಯಿ ಚಿಲ್ಲೂರ ಬಡ್ನಿ ಗ್ರಾಮದ ಮತಗಟ್ಟೆಯಲ್ಲಿ ಬುಧವಾರ ಮತದಾನ ಮಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನುಮಂತ ಅವರು ಚುನಾವಣೆ ರಾಯಭಾರಿ ಆಗಿ ಮತದಾನ ಜಾಗೃತಿ ಮೂಡಿಸಿದ್ದರು. ಆದರೆ ಈ ಬಾರಿ ಗೈರು ಆಗಿದ್ದಾರೆ. ಸವಣೂರು ತಾಲೂಕಿನ ಚಿಲ್ಲೂರುಬಡ್ನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ ನಂ. 117ರಲ್ಲಿ ಹನುಮಂತನ ಮತ ಇದೆ. ಆದರೆ ಈ ಬಾರಿ ಅವರು ‘ಬಿಗ್‌ಬಾಸ್'''''''' ರಿಯಾಲಿಟಿ ಶೋ ಮನೆಯಲ್ಲಿದ್ದಾರೆ. ಹೀಗಾಗಿ ಮತದಾನ ಮಾಡಲು ಬಂದಿಲ್ಲ. ತಂದೆ ಮೇಘಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಅವರು ಮತಗಟ್ಟೆಗೆ ಬಂದು ಮತದಾನ ಮಾಡಿದರು. ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಇದ್ದಾನೆ. ಅವನನ್ನು ಸಂಪರ್ಕಿಸಲು ನಮಗೆ ಆಗುವುದಿಲ್ಲ. ನಾವಷ್ಟೇ ಬಂದು ಮತದಾನ ಮಾಡಿದ್ದೇವೆ ಎಂದು ಹನುಮಂತ ಅವರ ತಂದೆ ಮೇಘಪ್ಪ ಹೇಳಿದರು.ಕಳೆದ ಚುನಾವಣೆ ಮತದಾನದ ಜಾಗೃತಿ ಮೂಡಿಸಿದ್ದ ಹನುಮಂತ ಅವರನ್ನು ಜಿಲ್ಲಾಡಳಿತ ಕರೆಸಿಕೊಂಡು ಈ ಚುನಾವಣೆಯಲ್ಲೂ ಮತದಾನ ಮಾಡಿಸುವ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಬೇಕಿತ್ತು ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬಂದವು.ಕೋಟ್...ಗಾಯಕ ಹನುಮಂತ ಲಮಾಣಿಗೆ ಅಂಚೆ ಮತದಾನಕ್ಕೆ ಅವಕಾಶ ಇರುವುದಿಲ್ಲ. ಅವರನ್ನು ಮತದಾನ ಮಾಡಲು ಗ್ರಾಮಕ್ಕೆ ಕರೆಸುವ ಕುರಿತು ಯಾವುದೇ ಮನವಿ ಬಂದಿರಲಿಲ್ಲ. -ಭರತರಾಜ್ ಕೆ.ಎನ್. ಸವಣೂರ ತಹಸೀಲ್ದಾರ್