ಸಾರಾಂಶ
- ಬೇಷರತ್ತಾಗಿ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಬೇಕು: ಕೆ.ವಿ.ಶ್ರೀಧರ್
- - - ಕನ್ನಡಪ್ರಭ ವಾರ್ತೆ ಹೊನ್ನಾಳಿಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿರುವ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಎ.ಬಿ.ಹನುಮಂತಪ್ಪ ನೀಡಿರುವ ಹೇಳಿಕೆ ಖಂಡನೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ವಿ.ಶ್ರೀಧರ್ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕ ಎಂ.ಪಿ. ರೇಣುಕಾಚಾರ್ಯರು ಕಾಂಗ್ರೆಸ್‍ನೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಂಡಿಲ್ಲ. ತಕ್ಷಣ ಎ.ಬಿ.ಹನುಮಂತಪ್ಪ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆದು, ಕ್ಷಮೆಯಾಚಿಸಬೇಕು ಎಂದರು.ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆಯಾದ ನಂತರ ನಮ್ಮ ನಾಯಕರು ಎಲ್ಲ ಬಿಜೆಪಿ 10 ಸದಸ್ಯರನ್ನು ಒಗ್ಗೂಡಿಸಿ ಸಭೆ ನಡೆಸಿ ಮಾತುಕತೆ ಮಾಡಿದ್ದರು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರಂಜಿತ ಚನ್ನಪ್ಪ ನಾಮಪತ್ರ ಸಲ್ಲಿಸಿದ್ದರು. ಕೊನೆ ಹಂತದಲ್ಲಿ ನಮ್ಮವರೇ ಆದ ಇಬ್ಬರು ಗೈರಾದ ಕಾರಣ ಒಗ್ಗಟ್ಟಾಗಿದ್ದ ನಾವು 8 ಜನರು ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಮಾಜಿ ಸಚಿವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಾಬು ಹೋಬಳದಾರ್ ಮಾತನಾಡಿ, ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಎ.ಬಿ.ಹನುಮಂತಪ್ಪ ಅವರಿಗೆ ಬಿಜೆಪಿ ಪುರಸಭೆ ಸದಸ್ಯರು ಯಾವ ವಾರ್ಡಿನಿಂದ ಯಾರು ಗೆಲುವು ಸಾಧಿಸಿದ್ದಾರೆ ಎನ್ನುವುದೇ ತಿಳಿದಿಲ್ಲ. ತಕ್ಷಣ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು ಎಂದರು.ಬಿಜೆಪಿ ಮುಖಂಡ ಪ್ರಶಾಂತ ಪೇಟೆ ಮಾತನಾಡಿ, ಎ.ಬಿ.ಹನುಮಂತಪ್ಪ 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿದ್ದರು? ಇದನ್ನು ಗಮನಿಸಿದ ಪಕ್ಷದ ವರಿಷ್ಠರು ಹನುಮಂತಪ್ಪ ಅವರನ್ನು ಅಮಾನತು ಮಾಡಿದ್ದರು. ಅನಂತರ ಅವರಿವರನ್ನು ಹಿಡಿದುಕೊಂಡು ಪಕ್ಷದೊಳಗೆ ನುಸುಳಿ, ಈಗ ಮೂಲ ಬಿಜೆಪಿಗ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಮುಖಂಡ ಮಹೇಶ್ ಹುಡೇದ್ ಮಾತನಾಡಿ, ರೇಣುಕಾಚಾರ್ಯರ ವಿರುದ್ಧ ಎ.ಬಿ.ಹನುಮಂತಪ್ಪ ಅವಹೇಳನಕಾರಿ ಹೇಳಿಕೆಗಳ ನೀಡದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಪುರಸಭೆ ಮಾಜಿ ಅಧ್ಯಕ್ಷ, ಹಾಗೂ ಸದಸ್ಯ ರಂಗನಾಥ್, ಬಿಜೆಪಿ ಮುಖಂಡರಾದ ಮುಂಜುನಾಥ್ ಇಂಚರ, ಕೋಳಿ ಸತೀಶ್ ಇತರರು ಇದ್ದರು.
- - - -10ಎಚ್.ಎಲ್.ಐ3:ಪುರಸಭೆ ಮಾಜಿ ಅಧ್ಯಕ್ಷರು, ಬಿಜೆಪಿ ಮುಂಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.