ರಾಮನಗರ: ಪ್ರಸಿದ್ದ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ (ಅಯ್ಯನಗುಡಿ) ದಲ್ಲಿ ಅಂಜನಾಪುರದ ಗುತ್ತಿಗೆದಾರ ದಿವಂಗತ ವೆಂಕಟವರದಯ್ಯ ನವರ ವಂಶಸ್ಥರು ಸಂಕ್ರಾಂತಿ ಹಬ್ಬದಂದು ಕೆಂಗಲ್ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಸಿಕೊಟ್ಟ ಹನುಮಂತೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ರಾಮನಗರ: ಪ್ರಸಿದ್ದ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ (ಅಯ್ಯನಗುಡಿ) ದಲ್ಲಿ ಅಂಜನಾಪುರದ ಗುತ್ತಿಗೆದಾರ ದಿವಂಗತ ವೆಂಕಟವರದಯ್ಯ ನವರ ವಂಶಸ್ಥರು ಸಂಕ್ರಾಂತಿ ಹಬ್ಬದಂದು ಕೆಂಗಲ್ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಸಿಕೊಟ್ಟ ಹನುಮಂತೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ವಿವಿಧ ಪುಷ್ಟಗಳಿಂದ ಅಲಂಕರಿಸಿದ್ದ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಪಟಾಕಿ ಸಿಡಿಸಿ, ಮಂಗಳವಾದ್ಯಗಳೊಂದಿಗೆ ದೇವಾಲಯದ ಸುತ್ತ ಪ್ರದಕ್ಷಿಣೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಭಕ್ತರು ಶ್ರೀರಾಮ, ಆಂಜನೇಯಸ್ವಾಮಿ ಸ್ಮರಣೆಗಳನ್ನು ಕೂಗುವ ಮೂಲಕ ಭಕ್ತಿ ಪರಾಕಾಷ್ಟೆ ಯನ್ನು ಮೆರೆದರು.

ಆಗಮಿಸಿದ್ದ ಎಲ್ಲ ಭಕ್ತರಿಗೂ ಮೋಹನ್ ವರದರಾಜು, ಗೋವಿಂದ ರಾಜು(ಜಿ.ಆರ್) ಕುಟುಂಬದವರು ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಿದರು.

ಈ ವೇಳೆ ಹನುಮಂತೋತ್ಸವ ಸೇವಾಕರ್ಥರಾದ ಹಾಗೂ ಕನ್ನಡಪರ ಹೋರಾಟಗಾರ ಅಂಜನಾಪುರ ಗೋವಿಂದ ರಾಜು (ಜಿ.ಆರ್) ಮಾತನಾಡಿ, ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಹನುಮಂತೋತ್ಸವ, ಬ್ರಹ್ಮ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರುತ್ತಿವೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನವರು ಮತ್ತು ನಮ್ಮ ತಾತ ವೆಂಕಟವರದಯ್ಯನವರು ಸ್ನೇಹಿತರಾಗಿದ್ದರು. ಅದರ ಫಲವಾಗಿ ನಮ್ಮ ವಂಶಸ್ಥರಿಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಂತೋತ್ಸವ ಧಾರ್ಮಿಕ ಪೂಜಾ ಕಾರ್ಯ ನೆರವೇರಿಸಲು ಹನುಮಂತಯ್ಯ ಅವರು ನಮ್ಮ ತಾತನವರಿಗೆ ಮುಜರಾಯಿ ಇಲಾಖೆಯಿಂದ ಅವಕಾಶ ಮಾಡಿಸಿಕೊಟ್ಟಿದ್ದು, ಆ ಸಂಪ್ರದಾಯವನ್ನು ನಮ್ಮ ವಂಶಸ್ಥರುಗಳು ನಮ್ಮ ತಾತನವರ ಕಾಲದಿಂದಲೂ ಮುಂದುವರೆಸುತ್ತಿರುವುದಾಗಿ ಹೇಳಿದರು.

ಹಿಂದಿನಿಂದಲೂ ಹನುಮಂತೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಅವರ ಮೊಮ್ಮಕ್ಕಳಾದ ನಾವುಗಳು ಧಾರ್ಮಿಕ ಪೂಜಾ ಕೈಂಕರ್ಯ ಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷ ಸಹ ಆಚರಣೆ ಮಾಡುತ್ತಿದ್ದು ದೇವರ ಕೃಪೆಯಿಂದ ಉತ್ತಮ ಮಳೆ ಬೆಳೆಯಾಗಿ ನಾಡಿನ ಜನರು ಸಮೃದ್ದಿ, ಸಂತೋಷದಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಈ ವೇಳೆ ಅಂಜನಾಪುರ ವೆಂಕಟವರದಯ್ಯನವರ ವಂಶಸ್ಥರಾದ ಚಿತ್ರಕಲಾ ಮೋಹನ್‌ವರದರಾಜು, ನೀಲಾಗೋವಿಂದ ರಾಜು, ಯಜಮಾನ್ ಆಂಜನೇಯ, ವೆಂಕಟಪ್ಪ, ವರದರಾಜು, ಕನ್ನಡ ರಾಜು, ಪೊಲೀಸ್ ವೆಂಕಟರಮಣಯ್ಯ, ಕೃಷ್ಣಯ್ಯ, ಅರಣ್ಯ ಇಲಾಖೆ ಮಂಜು, ಗ್ರಾ.ಪಂ ಸದಸ್ಯರಾದ ಜ್ಯೋತಿ ಬಾಲಕೃಷ್ಣ, ಇಂಜಿನಿಯರ್ ಅರುಣ್ ಕುಮಾರ್, ರಾಘವೇಂದ್ರ, ಕೇಬಲ್ ಶ್ರೀನಿವಾಸ್, ನವೀನ್‌ಗೌಡ ಸೇರಿದಂತೆ ವೆಂಕಟವರದಯ್ಯನವರ ಕುಟುಂಬಸ್ಥರು, ಊರಿನ ಗ್ರಾಮಸ್ಥರು, ರೆಡ್ಡಿ ಸಮುದಾಯದವರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

------------------------

16ಕೆಆರ್ ಎಂಎನ್ 13.ಜೆಪಿಜಿ

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮಂತೋತ್ಸವ ಕಾರ್ಯಕ್ರಮ ನೆರವೇರಿತು.

------------------------