ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಹರ್ ಘರ್ ತಿರಂಗ ಅಭಿಯಾನ ಅಂಗವಾಗಿ ಬಿಜೆಪಿ ಯುವಮೋರ್ಚಾ ಮಡಿಕೇರಿ ಮಂಡಲ ಹಾಗೂ ಗ್ರಾಮಾಂತರ ವತಿಯಿಂದ ಮಂಡಲದ ವತಿಯಿಂದ ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು.ಮಂಡಲ ಯುವಮೋರ್ಚಾ ಅಧ್ಯಕ್ಷ ಸಜನ್ ಪೂಣಚ್ಚ ಹಾಗೂ ಚೇತನ್ ಬಂಗೇರ ಉಪಸ್ಥಿತಿಯಲ್ಲಿ ನಗರದ ಬನ್ನಿ ಮಂಟಪದಿಂದ ಆರಂಭವಾದ ಜಾಥಾ ನಗರದ ಜನರಲ್ ತಿಮ್ಮಯ್ಯ ವೃತ್ತ, ಸುದರ್ಶನ ವೃತ್ತದ ಮೂಲಕ ಬಿಜೆಪಿ ಕಚೇರಿಯವರೆಗೆ ಸಾಗಿತು.
ಬೈಕ್ ಜಾಥಾಕ್ಕೆ ಮಾಜಿ ಶಾಸಕರಾದ ಕೆ. ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಚಾಲನೆ ನೀಡಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ರವಿ ಮೊಗೇರ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಕಾರ್ಯದರ್ಶಿಗಳಾದ ಪ್ರಶಾಂತ್ ಭೀಮಯ್ಯ ಹಾಗೂ ಕನ್ನಿಕೆ, ಜಿಲ್ಲಾ ವಕ್ತರರಾದ ಅರುಣ್ ಕುಮಾರ್, ನಗರ ಮಂಡಲದ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ, ಉಪಾಧ್ಯಕ್ಷರಾದ ಡಿಶು, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್. ಬಿ. ಕೆ ಹಾಗೂ ಕವನ್ ಕಾವೇರಪ್ಪ, ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೊನ್ನಚ್ಚೆಟಿರ ವಿನೋದ್,ನಗರ ಕಾರ್ಯದರ್ಶಿಗಳಾದ ಮನು ರೈ ಹಾಗೂ ವಿಘ್ನೇಶ್, ಗ್ರಾಮಾಂತರ ಮಂಡಲ ಪ್ರದಾನ ಕಾರ್ಯದರ್ಶಿ ದರ್ಶನ್ ದಂಬೆಕೋಡಿ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಚುನಾಯಿತ ಜನ ಪ್ರತಿನಿಧಿಗಳು, ಬೂತ್ ಮಟ್ಟದ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಕ್ಷದ ಕಚೇರಿ ಮುಂಭಾಗ ನಡೆದ ಜಾತದ ಸಮಾರೋಪದಲ್ಲಿ ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಚೇತನ್ ಬಂಗೇರ ವಂದಿಸಿದರು. ಜಾಥಾದಲ್ಲಿ 50 ಕ್ಕೂ ಹೆಚ್ಚು ಬೈಕ್ ಸವಾರರು ಭಾಗಿಯಾಗಿದ್ದರು.