ಸಾರಾಂಶ
ಗಜೇಂದ್ರಗಡ: ಬಿಜೆಪಿ ರೋಣ ಮಂಡಲ ಯುವ ಮೋರ್ಚಾ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು.
ಬೈಕ್ ಜಾಥಾಗೆ ಚಾಲನೆ ನೀಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ‍್ಯ ಸಂಭ್ರಮೋತ್ಸವ ಅಂದು ಅನೇಕ ವ್ಯಕ್ತಿಗಳ ತ್ಯಾಗ ಬಲಿದಾನಗಳ ಮೂಲಕ ನಮಗೆ ದೊರತಿದೆ. ಅಂದಿನ ಕಹಿ ಘಟನೆಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡುವುದು ಇಂದು ಅವಶ್ಯವಾಗಿದೆ ಎಂದರು. ಸ್ಥಳೀಯ ಬಿಜೆಪಿ ಕಚೇರಿಯಿಂದ ಪ್ರಾರಂಭಗೊಂಡ ಬೈಕ್ ರ‍್ಯಾಲಿಯು ಬಿಜೆಪಿ ಕಾರ್ಯಕರ್ತರು ಹಾಗೂ ಯುವಕರುದ್ವಿಚಕ್ರ ವಾಹನದಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದು ಪಟ್ಟಣದ ಕೆ.ಕೆ.ವೃತ್ತದ ಜೋಡುರಸ್ತೆ ಮಾರ್ಗವಾಗಿ ಇಲ್ಲಿನ ದುರ್ಗಾವೃತ್ತ ಬಸವೇಶ್ವರ ವೃತ್ತ, ಭಜರಂಗದಳ ವೃತ್ತ, ವಿರೂಪಾಕ್ಷೇಶ್ವರ ದೇವಾಸ್ಥಾನ ಸೇರಿ ಮತ್ತಿತರ ಕಡೆಗಳಲ್ಲಿ ರ‍್ಯಾಲಿ ನಡೆಸಿದರು ರ‍್ಯಾಲಿಯುದ್ಧಕ್ಕೂ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಾತ್ತಾ ಬೈಕ್ ಮೂಲಕ ಸಾಗಿ ಕೊನೆಗೆ ಕೆ.ಕೆ. ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು.
ಈ ವೇಳೆಯಲ್ಲಿ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ, ಪ್ರಧಾನ ಕಾರ್ಯದರ್ಶಿಗಳಾದರಮೇಶ ವಕ್ಕರ್, ಬಾಲಾಜಿರಾವ ಭೋಸ್ಲೆ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಯುವ ಮೋರ್ಚಾ ಅಧ್ಯಕ್ಷ ಹುಲ್ಲಪ್ಪ ಕೆಂಗಾರ ಮುಖಂಡರಾದ ಅಶೋಕ ವನ್ನಾಲ, ಬುಡ್ಡಪ್ಪ ಮೂಲಿಮನಿ, ಅಶೋಕ ನವಲಗುಂದ, ವೀರಪ್ಪ ಪಟ್ಟಣಶೆಟ್ಟಿ, ಯು.ಆರ್. ಚನ್ನಮ್ಮನವರ, ದಾನು ರಾಥೋಡ, ಶಂಕರ ಇಟಗಿ, ರಂಗನಾಥ ಮೇಟಿ, ಮಹಾಂತೇಶ ಪೂಜಾರ, ಸೂಗುರೇಶ ಕಾಜಗಾರ, ಭದರಿನಾಥ ಜೋಶಿ, ದುರ್ಗಪ್ಪ ಕಟ್ಟಿಮನಿ, ಶಿವಕುಮಾರ್ ಜಾಧವ, ಮುದಿಯಪ್ಪ ಮುಧೋಳ, ಭೀಮಪ್ಪ ಮಾದರ, ಸಲೀಂ ಕಲಾದಗಿ ಸೇರಿ ಇತರರು ಇದ್ದರು.