ಸಾರಾಂಶ
ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಕುಮಾರ ವಿರೂಪಾಕ್ಷ ಸ್ವಾಮಿಗಳು, ಉಪ್ಪಿನ ಬೆಟಗೇರಿ ಅವರನ್ನು ಹಾರಕೂಡ ಮಠದ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರು ಗೌರವಿಸಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಬಡ ಹಾಗೂ ನೀರ್ಗತಿಕ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುತ್ತಿರುವ ಹಾರಕೂಡ ಶ್ರೀಗಳ ಕಾರ್ಯ ದೊಡ್ಡದಾಗಿದೆ. ಅವರ ಸಾಮಾಜಿಕ ಕಳಕಳಿಯೇ ದೊಡ್ಡ ನಿದರ್ಶನವಾಗಿದೆ ಎಂದು ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ನುಡಿದರು.ಅವರು ತಾಲೂಕಿನ ಹಾರಕೂಡ ಮಠದಲ್ಲಿ ಜರುಗಿದ ಡಾ.ಚನ್ನವೀರ ಶಿವಾಚಾರ್ಯರ 624ನೇ ತುಲಾಭಾರ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಹಾರಕೂಡ ಶ್ರೀಗಳಲ್ಲಿನ ಮಾತೃ ವಾತ್ಸಲ್ಯ ಅನುಕರಣೀಯವಾದದ್ದು ಹಣಕ್ಕಾಗಿ ಶಾಲೆ ಕಾಲೇಜುಗಳು ನಡೆಸುವ ಈ ದಿನಗಳಲ್ಲಿ ಇವರು ಉಚಿತವಾಗಿ ನಡೆಸುತಿದ್ದಾರೆ. ಪೂಜ್ಯ ಚನ್ನವೀರ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿ ಮಾಡುವ ಕೆಲಸ ಶ್ಲಾಘನೀಯವಾಗಿದೆ ಎಂದರು.
ವರ್ಷದ 12 ತಿಂಗಳು ಜನ ಜಾಗೃತಿ, ಜಾತ್ರೆ ನಡೆಯುವಂತಹ ಪುಣ್ಯ ಕ್ಷೇತ್ರವನ್ನು ಬಸವಕಲ್ಯಾಣದ ಪರಿಸರದಲ್ಲಿ ಕಾಣುವುದಾದರೆ ಅದು ಹಾರಕೂಡ ಸುಕ್ಷೇತ್ರ. ಜ್ಞಾನ, ಧ್ಯಾನ, ಜಪ-ತಪ, ಪ್ರಶಸ್ತಿ ಪ್ರದಾನ, ಪುರಸ್ಕಾರ, ಸತ್ಕಾರ, ಆಶೀರ್ವಾದ, ಶಿವಾನುಭವ ಮತ್ತು ಸಾಹಿತ್ಯ ಸಂಸ್ಕೃತಿ ಸಮ್ಮೇಳನಗಳು ನೂರಾರು ಸಮಾಜಮುಖಿ ಕಾರ್ಯಗಳು ನಿತ್ಯ ನಿರಂತರವಾಗಿ ನಡೆಯುವ ಕ್ರಿಯಾಶೀಲ ಮಠವೊಂದು ಕಾಣುವುದಾದರೆ ಅದು ಹಾರಕೂಡ ಮಠವಾಗಿದೆ ಎಂದರು.ಹಾರಕೂಡ ಮಠದಲ್ಲಿ ಪೂಜ್ಯರಿಂದ ಪಡೆದ ದರ್ಶನ ಆಶೀರ್ವಾದ ಅವಿಸ್ಮರಣೀಯ ಗಳಿಗೆಯಾಗಿ ಉಳಿಯಲಿದೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದು ನುಡಿದು,
ಡಾ.ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸೂರ್ಯಕಾಂತ ಮಠ ಸ್ವಾಗತಿಸಿ, ಪೂಜ್ಯ ಬಸವಲಿಂಗ ದೇವರು ನಿರೂಪಿಸಿ, ಸಂಗೀತ ಕಲಾವಿದರಾದ ದೇವರಾಜ ಹಾಗೂ ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ವಿಠಲ ಹೂಗಾರ ವಂದಿಸಿದರು. ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕರಾದ ಶಿವಾನಂದ ದೇವರು, ಸೂರ್ಯಕಾಂತ ಮಠ, ಅಪ್ಪಣ್ಣ ಜನವಾಡ, ವಿಠ್ಠಲ ಹೂಗಾರ ಮುಂತಾದವರು ಉಪಸ್ಥಿತರಿದ್ದರು.