ಹರಪನಹಳ್ಳಿ ಪಿಕಾರ್ಡ್ ಬ್ಯಾಂಕ್ ಆಡಳಿತ ಕಾಂಗ್ರೆಸ್ ತೆಕ್ಕೆಗೆ

| Published : Jan 20 2025, 01:32 AM IST

ಹರಪನಹಳ್ಳಿ ಪಿಕಾರ್ಡ್ ಬ್ಯಾಂಕ್ ಆಡಳಿತ ಕಾಂಗ್ರೆಸ್ ತೆಕ್ಕೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಗೆದ್ದ ಅಭ್ಯರ್ಥಿಗಳಿಗೆ ಚುನವಣಾಧಿಕಾರಿ ಬಿ.ವಿ.ಗಿರೀಶಬಾಬು ಪ್ರಮಾಣ ಪತ್ರ ವಿತರಿಸಿದರು.

ಹರಪನಹಳ್ಳಿ: ಇಲ್ಲಿಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ ಭಾನುವಾರ ಅಪ್ಪರ ಮೇಗಳಪೇಟೆ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರಿಂದ ಬ್ಯಾಂಕಿನ ಆಡಳಿತ ಮಂಡಳಿ ಕಾಂಗ್ರೆಸ್ ತೆಕ್ಕೆಗೆ ಬಂದಂತಾಗಿದೆ.

ಬ್ಯಾಂಕಿನ ಒಟ್ಟು 14 ಕ್ಷೇತ್ರಗಳ ಪೈಕಿ ಈಗಾಗಲೇ 8 ಕ್ಷೇತ್ರಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಉಳಿದ 6 ಕ್ಷೇತ್ರಕ್ಕೆ ಮತದಾನ ಜರುಗಿತು. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ತೆರಳಿ ಉತ್ಸಾಹದಿಂದ ಮತ ಚಲಾಯಿಸಿದರು. ಗೆದ್ದ ಅಭ್ಯರ್ಥಿಗಳಿಗೆ ಚುನವಣಾಧಿಕಾರಿ ಬಿ.ವಿ.ಗಿರೀಶಬಾಬು ಪ್ರಮಾಣ ಪತ್ರ ವಿತರಿಸಿದರು.

ವಿಜೇತರ ವಿವರ:ಸಾಲಗಾರರ ಕ್ಷೇತ್ರಗಳಾದ ಹರಪನಹಳ್ಳಿ ಭಾಗ-1ರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೊಂಗಡಿ ನಾಗರಾಜ 141 ಮತಗಳನ್ನು ಪಡೆಯುವ ಮೂಲಕ ಜಯಸಾಧಿಸಿದರು, ಪ್ರತಿಸ್ಪರ್ಧಿ ಹೆಚ್.ದೇವರಾಜ 100 ಮತಗಳನ್ನು ಪಡೆದು ಪರಾಭವಗೊಂಡರು.

ಬಾಗಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಕೆ.ಭರಮನಗೌಡ 73 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಣಜಿ ಗುರುಬಸವರಾಜ 52 ಮತಗಳನ್ನು ಪಡೆದು ಪರಾಭವಗೊಂಡರು.

ಚಿಗಟೇರಿ ಹಿಂದುಳಿದ ‘ಅ’ ವರ್ಗ ಕ್ಷೇತ್ರದಿಂದ ಸಾಬಳ್ಳಿ ಜಂಬಣ್ಣ 210ಮತಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಮಂಜುನಾಥ ಚಿಗಟೇರಿ ಇವರು, 182 ಮತಗಳನ್ನು ಪಡೆದು ಸೋತರು.

ಮತ್ತಿಹಳ್ಳಿ ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಶ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಕಮ್ಮಾರ ರವರು 82 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಎಸ್.ಉಮೇಶರವರು 75 ಮತ ಪಡೆದು ಪರಾಭವಗೊಂಡರು. ತೊಗರಿಕಟ್ಟಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಶಕುಂತಲಾರವರು 109ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದರೆ, ಸುಶಿಲಮ್ಮ ಮಹಾಜನದಹಳ್ಳಿ 40 ಮತಗಳ ಗಳಿಸಿ ಪರಾಭವಗೊಂಡರು.

ಹಲುವಾಗಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮೂರು ಜನ ಸ್ಪರ್ಧಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಶಿನಾಥ ಡಿ, ಇವರು 76ಮತಗಳನ್ನು ಪಡೆದು ಆಯ್ಕೆಯಾದರೆ, ಮಂಜಪ್ಪ ಕುಸಂಬಿ 44 ಹಾಗೂ ರಾಘವೇಂದ್ರ ನುಪ್ಪಜ್ಜಿ 1ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಅವಿರೋಧ ಆಯ್ಕೆಯಾದವರು:

ಹರಪನಹಳ್ಳಿ ಸಾಮಾನ್ಯ ಕ್ಷೇತ್ರ-ಪಿ.ಬಿ.ಗೌಡ, ತೆಲಿಗಿ ಸಾಮಾನ್ಯ ಕ್ಷೇತ್ರ-ಎಸ್.ಎಂ.ಚಿದಾನಂದಸ್ವಾಮಿ, ನೀಲಗುಂದ ಸಾಮಾನ್ಯ ಕ್ಷೇತ್ರ-ಬೇಲೂರು ಸಿದ್ದೇಶ್, ಕಂಚಿಕೇರಿ ಸಾಮಾನ್ಯ ಕ್ಷೇತ್ರ-ಶಾಂತಕುಮಾರರೆಡ್ಡಿ, ಅರಸೀಕೆರೆ ಸಾಮಾನ್ಯ ಮಹಿಳೆ ಕ್ಷೇತ್ರ-ಸೌಭಾಗ್ಯಮ್ಮ, ಉಚ್ಚಂಗಿದುರ್ಗ ಸಾಮಾನ್ಯ ಕ್ಷೇತ್ರ-ರಾಜಕುಮಾರ, ಲಕ್ಷ್ಮಿಪುರ ಸಾಮಾನ್ಯ ಕ್ಷೇತ್ರ-ಪಿ.ಎಲ್.ಪೋಮ್ಯನಾಯ್ಕ್, ಸಾಲ ಪಡೆಯದೇ ಇರುವ ಸದಸ್ಯರ ಕ್ಷೇತ್ರದಿಂದ ಲಾಟಿ ದಾದಾಪೀರ.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಗಿರಜ್ಜಿ ಮಂಜುನಾಥ, ಹೆಚ್.ಸಲೀಂ, ಮತ ಎಣಿಕೆ ಸಿಬ್ಬಂಧಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ.ಅಂಜಿನಪ್ಪ, ಕುಬೇರಪ್ಪ, ಎಸ್.ಮಂಜುನಾಥ ಇದ್ದರು.