ತೆಗ್ಗಿನಮಠದ ಲಿಂ.ಚಂದ್ರಮೌಳೀಶ್ವರ ಸ್ವಾಮೀಜಿ ಅವರಿಂದ ಹರಪನಹಳ್ಳಿ ತಾಲೂಕು ಶಿಕ್ಷಣದ ಕಾಶಿಯಾಗಿದೆ

ಹರಪನಹಳ್ಳಿ: ಇಲ್ಲಿಯ ತೆಗ್ಗಿನಮಠದ ಲಿಂ.ಚಂದ್ರಮೌಳೀಶ್ವರ ಸ್ವಾಮೀಜಿ ಅವರಿಂದ ಹರಪನಹಳ್ಳಿ ತಾಲೂಕು ಶಿಕ್ಷಣದ ಕಾಶಿಯಾಗಿದೆ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ತೆಗ್ಗಿನಮಠದಲ್ಲಿ ಲಿ.ಚಂದ್ರಮೌಳೀಶ್ವರ ಸ್ವಾಮೀಜಿಯವರ 11ನೇ ವಾರ್ಷಿಕ ಪುಣ್ಯಾರಾದನೆ ಹಾಗು ಪ್ರಸ್ತುತ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿಗಳ ಪಟ್ಟಾಧಿಕಾರದ 10ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಂಗಳವಾರ ಮಾತನಾಡಿದರು.ಸಾವಿರಾರು ಜನರಿಗೆ ಆರ್ಥಿಕ, ಸಾಮಾಜಿಕ ಭದ್ರತೆಯನ್ನು ಚಂದ್ರಮೌಳೀಶ್ವರರು ಕೊಟ್ಟಿದ್ದಾರೆ. ತನಗಾಗಿ ಏನನ್ನು ಮಾಡಿಕೊಳ್ಳದ ಅವರು ಎಲ್ಲ ರೀತಿಯ ಶಿಕ್ಷಣ ಸಂಸ್ಥೆ ತೆರೆದು ಶೈಕ್ಷಣಿಕ, ಸಾಮಾಜಿಕ ಕಳಕಳಿ ಮೂಡಿಸಿದ್ದಾರೆ ಎಂದು ನುಡಿದರು.

ಈಗಿನ ವರಸದ್ಯೋಜಾತ ಸ್ವಾಮೀಜಿ ಸಹ ಚಂದ್ರಮೌಳೀಶ್ವರರು ಹಾಕಿ ಕೊಟ್ಟ ತಳಹದಿಯಲ್ಲಿ ತೆಗ್ಗಿನಮಠವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೆಗ್ಗಿನಮಠದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಸಾಧಕರು ಮಾತ್ರ ಇತಿಹಾಸ ಪುಟದಲ್ಲಿ ಇರುತ್ತಾರೆ. ಅಂತವರ ಸಾಲಿನಲ್ಲಿ ಚಂದ್ರಮೌಳೀಶ್ವರ ಸ್ವಾಮೀಜಿ ಇದ್ದಾರೆ. ತೆಗ್ಗಿನಮಠವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮರ್ಥವಾಗಿ ಬೆಳೆಸಿದ್ದಾರೆ ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ ಲಿ.ಚಂದ್ರಮೌಳೀಶ್ವರ ಹಾಗೂ ತಮ್ಮ ನಡುವಿನ ಒಡನಾಟ ಸ್ಮರಿಸಿ ತೆಗ್ಗಿನಮಠದ ಸರ್ವತೋಮುಖ ಅಭಿವೃದ್ದಿಗೆ ನನ್ನ ಸಹಕಾರ ಯಾವತ್ತು ಇರುತ್ತದೆ ಎಂದು ಹೇಳಿದರು.

ಉಜ್ಜಿಯಿನಿ ಪೀಠದ ಕಾರ್ಯದರ್ಶಿ ಎಂ.ಎಂ.ಜೆ ಹರ್ಷವರ್ದನ ಮಾತನಾಡಿ ಟಿಎಂಎಇ ಸಂಸ್ಥೆಯನ್ನು ಚಂದ್ರಮೌಳೀಶ್ವರ ಸ್ವಾಮೀಜಿ ಕಟ್ಟಿ ಬೆಳೆಸಿದರು, ಈಗಿನ ವರಸದ್ಯೋಜಾತ ಸ್ವಾಮೀಜಿ ಸಮರ್ಥವಾಗಿ ಮುನ್ನೆಡುಸುತ್ತಿದ್ದಾರೆ ಎಂದು ಹೇಳಿದರು.

ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿ, ಬಾಲ್ಯದಿಂದ ಕೊನೆ ತನಕ ಚಂದ್ರಮೌಳೀಶ್ವರ ಶಿವಾಚಾರ್ಯರು ಸನಾತನ ಧರ್ಮ ಹಾಗೂ ಯುವ ಜನತೆಯ ಅಭಿವೃದ್ದಿಗೆ ಹೋರಾಟ ನಡೆಸಿದರು, ಮದ್ಯ ಕರ್ನಾಟಕದ 8 ಜಿಲ್ಲೆಗಳಲ್ಲಿ ಶೈಕ್ಷಣಕ ಕ್ರಾಂತಿ ಕೈಗೊಂಡು ತೆಗ್ಗಿನಮಠವನ್ನು ಮಾದರಿಯನ್ನಾಗಿ ಮಾಡಿದರು ಎಂದರು.

ಸ್ತ್ರೀರೋಗ ತಜ್ಞ ಡಾ.ಎಸ್.ಎನ್.ಮಹೇಶ, ಬಿಜೆಪಿ ಮುಖಂಡ ಜಿ.ನಂಜನಗೌಡ, ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಮಾತನಾಡಿದರು.

ಕೂಡ್ಲಿಗಿಯ ಪ್ರಶಾಂತ ಸಾಗರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾನಿಹಳ್ಳಿ ಡಾ.ಮಳೆಯೋಗೀಶ್ವರ ಸ್ವಾಮೀಜಿ, ಶಿವಗಂಗೆ ಡಾ.ಮಲಯ ಶಾಂತಮುನಿ ಸ್ವಾಮೀಜಿ, ನಾಗನಗೌಡ್ರು, ಶಶಿದರ ಪೂಜಾರ, ಎ.ಎಂ.ಪದ್ಮಾವತಿ, ಡಾ.ಟಿ.ಎಂ.ಶಿವಶಂಕರ, ಟಿ.ಎಂ.ಪ್ರತೀಕ, ವಿದ್ಯುತ್‌ ಗುತ್ತಿಗೆದಾರ ಕರಿಬಸವರಾಜ, ಟಿ.ಎಂ.ಚೆನ್ನವೀರಸ್ವಾಮಿ ಉಪಸ್ಥಿತರಿದ್ದರು. ಬಿ.ಎಂ.ಉಮಾದೇವಿ ಸ್ವಾಗತಿಸಿದರೆ, ಸಿ.ಎಂ.ಕೊಟ್ರಯ್ಯ ನಿರೂಪಿಸಿದರು.