ಹರಿಹರ: ರಾಜ್ಯಾದಂತ ವಿವಿಧ ತಾಲೂಕು ಜಿಲ್ಲೆಗಳಲ್ಲಿ ಹರಶ್ರಾವಣ ಕಾರ್ಯಕ್ರಮ

| Published : Jul 26 2025, 12:30 AM IST

ಹರಿಹರ: ರಾಜ್ಯಾದಂತ ವಿವಿಧ ತಾಲೂಕು ಜಿಲ್ಲೆಗಳಲ್ಲಿ ಹರಶ್ರಾವಣ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಹರಶ್ರಾವಣ ಹರಪೀಠಾಧ್ಯಕ್ಷ ಲಿಂಗೈಕ್ಯ ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಾದದೊಂದಿಗೆ ಹರ ಪೀಠಾಧ್ಯಕ್ಷ, ಪಂಚಮಸಾಲಿ ಶ್ರೀ ವಚನಾನಂದ ಸ್ವಾಮಿಜಿ ಸಾನ್ನಿಧ್ಯದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಹರ ಶ್ರಾವಣ ಕಾರ್ಯಕ್ರಮ ಆಯೋಜಿಸಲಾಗಿದೆ.

- ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಅಧ್ಯಕ್ಷತೆಯಲ್ಲಿ ಆಯೋಜನೆ

- - -

ಹರಿಹರ: ಹರಶ್ರಾವಣ ಹರಪೀಠಾಧ್ಯಕ್ಷ ಲಿಂಗೈಕ್ಯ ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಾದದೊಂದಿಗೆ ಹರ ಪೀಠಾಧ್ಯಕ್ಷ, ಪಂಚಮಸಾಲಿ ಶ್ರೀ ವಚನಾನಂದ ಸ್ವಾಮಿಜಿ ಸಾನ್ನಿಧ್ಯದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಹರ ಶ್ರಾವಣ ಕಾರ್ಯಕ್ರಮ ಆಯೋಜಿಸಲಾಗಿದೆ.

ಹರ ಶ್ರಾವಣ ಕಾರ್ಯಕ್ರಮಗಳ ಪ್ರವಾಸ ವೇಳಾಪಟ್ಟಿಯಂತೆ, ಜು.27ರಂದು ಚಿತ್ರದುರ್ಗ ಜಿಲ್ಲೆ, 28ರಂದು ಹರಿಹರ ಪೀಠ, 29ರಂದು ಚಿಕ್ಕೋಡಿ ಜಿಲ್ಲೆ, ಜು.30-31 ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ. ಆ.1 ರಂದು ಮೈಸೂರು ಜಿಲ್ಲೆ, ಆ. 2-3ಕ್ಕೆ ಚಾಮರಾಜನಗರ ಜಿಲ್ಲೆ, ಆ 4-5ಕ್ಕೆ ಗದಗ ಜಿಲ್ಲೆ, ಆ.6 -7ಕ್ಕೆ ಕೊಪ್ಪಳ ಜಿಲ್ಲೆ, ಆ. - 9ಕ್ಕೆ ಹಾವೇರಿ ಜಿಲ್ಲೆ, ಆ.10ರಂದು ಹರಪೀಠ ಹರಿಹರ, ಆ.11, 12ಕ್ಕೆ ಧಾರವಾಡ ಜಿಲ್ಲೆ, ಆ.13ರಂದು ಹರಿಹರದಲ್ಲಿ ತುಂಗಭದ್ರೆಗೆ ಬಾಗಿನ, ಆ.14, 15ರಂದು ಬೆಂಗಳೂರು, ಆ.16ರಂದು ಬಾಗಲಕೋಟೆ ಜಿಲ್ಲೆ, ಆ.17ರಂದು ವಿಜಯನಗರ ಜಿಲ್ಲೆ, ಆ.18ರಂದು ಯಾದಗಿರಿ ಜಿಲ್ಲೆ, ಆ.19ಕ್ಕೆ ರಾಯಚೂರು ಜಿಲ್ಲೆ, ಆ.20- ಬಳ್ಳಾರಿ ಜಿಲ್ಲೆ, ಆ. 21-22ಕ್ಕೆ ದಾವಣಗೆರೆ ಜಿಲ್ಲೆ, ಆ.23ರಂದು ಹರಪೀಠ- ಹರಿಹರ, ಆ.25ಕ್ಕೆ ಶಿವಮೊಗ್ಗ ಜಿಲ್ಲೆ, ಆ.26-27ರಂದು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿದೆ.

ಭಕ್ತರ ಗಮನಕ್ಕೆ:

ವಿವಿಧ ಹಳ್ಳಿ, ಹೋಬಳಿ, ತಾಲೂಕು ಹಾಗೂ ಜಿಲ್ಲೆಯ ಭಕ್ತರ ಮಹಾಮನೆಯಲ್ಲಿ ಇಷ್ಟಲಿಂಗ ಮಹಾಪೂಜೆ, ಇಷ್ಟಲಿಂಗ ದೀಕ್ಷೆ, ಪಾದಪೂಜೆ, ಸತ್ಸಂಗ, ಸಂಘಟನೆ ಹಾಗೂ ಚಿಂತನ ಮಂಥನ ನೆರವೇರಿಸಲಿದ್ದಾರೆ. ಆಸಕ್ತ ಭಕ್ತರು ಮುಂಚಿತವಾಗಿ ಜಿಲ್ಲಾಧ್ಯಕ್ಷರಿಗೆ ಸಂಪರ್ಕಿಸಿದರೆ ತಮ್ಮ ಮಹಾಮನೆಗೂ ಶ್ರೀಗಳು ಪಾದಾರ್ಪಣೆ ಮಾಡುವರು.

ಕಾರ್ಯಕ್ರಮವನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕು ಘಟಕ, ಗ್ರಾಮ ಘಟಕ, ಮಹಿಳಾ ಘಟಕ, ಯುವ ಘಟಕ, ನೌಕರರ ಘಟಕ, ಹರಸೇನೆ, ಹರ ಸೇವಾ ಸಂಘದಿಂದ ಆಯೋಜಿಸಲಾಗಿದೆ. ಪ್ರತಿಯೊಂದು ಜಿಲ್ಲೆಯ ಕಾರ್ಯಕ್ರಮಗಳ ವಿವರವನ್ನು ಸಿದ್ಧಪಡಿಸಿ, ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ.

- - -

-(ಸಾಂದರ್ಭಿಕ ಚಿತ್ರ).