ದುರ್ಗದಬೈಲ್‌ನಲ್ಲಿ ವ್ಯಾಪಾರಿಗಳಿಗೆ ಕಿರುಕುಳು: ವಾರದಲ್ಲಿ ಅಧಿಕಾರಿಗಳ ಸಭೆ

| Published : Sep 11 2025, 12:03 AM IST

ದುರ್ಗದಬೈಲ್‌ನಲ್ಲಿ ವ್ಯಾಪಾರಿಗಳಿಗೆ ಕಿರುಕುಳು: ವಾರದಲ್ಲಿ ಅಧಿಕಾರಿಗಳ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿ ಬದಿ ವ್ಯಾಪಾರಸ್ಥರಿಗೆ ಪಾಲಿಕೆಯಿಂದ ಯಾವುದೇ ರೀತಿ ತೊಂದರೆ ಕೊಟ್ಟಿಲ್ಲ. ರಸ್ತೆಯ ಮಧ್ಯದಲ್ಲಿ ಬಂದು ವ್ಯವಹಾರ ಮಾಡುವುದರಿಂದ ಟ್ರಾಫಿಕ್ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾರ್ಕಿಂಗ್‌ಗೆ ಒಂದು ಬದಿ ಅವಕಾಶ ಕೊಟ್ಟರೆ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಹುಬ್ಬಳ್ಳಿ: ದುರ್ಗದ ಬೈಲ್‌ನಲ್ಲಿ ಪಾರ್ಕಿಂಗ್‌ ಟೆಂಡರ್‌ ಪಡೆದವರು ಬೀದಿಬದಿ ವ್ಯಾಪಾರಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ಬೆದರಿಕೆ ಹಾಕಿದ್ದಲ್ಲದೇ ಪಾಲಿಕೆ ಸದಸ್ಯರಿಗೆ ಮತ್ತು ಆಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಮೇಯರ್ ಮತ್ತು ಆಯುಕ್ತರು, ಸ್ಥಳಕ್ಕೆ ಭೇಟಿ ನೀಡಿ ಬೀದಿ ವ್ಯಾಪಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಬೀದಿ ಬದಿ ವ್ಯಾಪಾರಸ್ಥರಿಗೆ ಪಾಲಿಕೆಯಿಂದ ಯಾವುದೇ ರೀತಿ ತೊಂದರೆ ಕೊಟ್ಟಿಲ್ಲ. ರಸ್ತೆಯ ಮಧ್ಯದಲ್ಲಿ ಬಂದು ವ್ಯವಹಾರ ಮಾಡುವುದರಿಂದ ಟ್ರಾಫಿಕ್ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾರ್ಕಿಂಗ್‌ಗೆ ಒಂದು ಬದಿ ಅವಕಾಶ ಕೊಟ್ಟರೆ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಟೆಂಡರ್‌ ಕೊಡಲಾಗಿದೆ ಎಂದು ತಿಳಿಸಿದರು.

ಆಗ ಮೇಯರ್ ಜ್ಯೋತಿ ಪಾಟೀಲ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು, ಅಂಗಡಿಕಾರರಿಗೆ ಮತ್ತು ಪೊಲೀಸ್ ಅಧಿಕಾರಿಗಳ ಜತೆ ಒಂದು ವಾರದಲ್ಲಿ ಸಭೆ ಕರೆದು ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಸಭೆಯಲ್ಲಿ ಇತ್ಯರ್ಥವಾಗುವ ವರೆಗೆ ಯಾವುದೇ ರೀತಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡದಂತೆ ಆದೇಶಿಸಿದರು.

ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ, ವಿನಾಯಕ ಲದವಾ, ಡಾ. ರವೀಂದ್ರ ಯಲಕಾನ, ಪ್ರವೀಣ ಕುಬಸದ, ಸುಭಾಸ ಅಥಣಿ, ರಾಜು ಕೋರ್ಯಾಣಮಠ, ಸಂಗಮ್ ಹಂಜಿ, ಗೋಪಾಲ್ ಕಲ್ಲೂರ, ಮಹೇಶ ಬಿಜಾಪುರ, ಕಾರ್ತಿಕ ಬಾಕಳೆ, ರಾಜು ಚುಘ್, ಮಕ್ಸೂದ ಸವಣೂರ, ಪಿಯೂಷ್ ಮಹಾಜನ, ಮೆಹಬೂಬ ಜಕಾತಿ ಹಾಗೂ ಬೀದಿ ಬದಿ ವ್ಯಾಪಾರಸ್ಥರು, ವ್ಯಾಪಾರಸ್ಥರು, ಪಾಲಿಕೆ ಅಧಿಕಾರಿಗಳು, ಪೊಲೀಸರು ಉಪಸ್ಥಿತರಿದ್ದರು.