Hard work comes reward: principal Honnaia sugest to student

ಕನ್ನಡಪ್ರಭ ವಾರ್ತೆ ಯಾದಗಿರಿ

ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಶಿಸ್ತು, ಸಮಯಕ್ಕೆಆದ್ಯತೆ ನೀಡಬೇಕೆಂದು ಡಿ.ಡಿ.ಯು ಕಾಲೇಜಿನ ಪ್ರಾಂಶುಪಾಲ ಹೊನ್ನಯ್ಯ ಕೊಂಕಲ್ ಹೇಳಿದರು. ವಡಗೇರಾ ಡಿ.ಡಿ.ಯು ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಮಕ್ಕಳ ಭವಿಷ್ಯದ ಬದುಕಿಗೆ ಜ್ಞಾನದ ದೀವಿಗೆ ಹಚ್ಚೋಣ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರುವಂತೆ ಸಲಹೆ ನೀಡಿದರು. ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಎಸ್. ಏನ್. ಪಾಟೀಲ್ ಮತ್ತು ನಾಗರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಉಪನ್ಯಾಸಕರಾದ ಅಂಬರೀಶ್, ನರಸಪ್ಪ, ಬಸವರಾಜ , ನಿಂಗಪ್ಪ , ರೇಷ್ಮಾ, ಆರತಿ, ಮಾಳ್ವಿಕಾ, ಶ್ರೀನಿವಾಸ, ಮಾಂತೇಶ, ಖಂಡಪ್ಪ ಇದ್ದರು.

-----

ಫೋಟೊ: 24ವೈಡಿಆರ್4: ವಡಗೇರಾ ಡಿ.ಡಿ.ಯು ಶಿಕ್ಷಣ ಸಂಸ್ಥೆಯ ವತಿಯಿಂದ ಮಕ್ಕಳ ಭವಿಷ್ಯದ ಬದುಕಿಗೆ ಜ್ಞಾನದ ದೀವಿಗೆ ಹಚ್ಚೋಣ ಎಂಬ ವಿನೂತನ ಕಾರ್ಯಕ್ರಮ ನಡಡೆಯಿತು.

------