ಯಶಸ್ವಿಗೆ ಕಠಿಣ ಪರಿಶ್ರಮ ಮುಖ್ಯ

| Published : Mar 21 2024, 01:03 AM IST

ಸಾರಾಂಶ

ಜೀವನದಲ್ಲಿ ಹಣ ಮುಖ್ಯವಲ್ಲ, ಶಿಕ್ಷಣ ಮುಖ್ಯ. ಶಿಕ್ಷಣ ಪಡೆಯುವುದರೊಂದಿಗೆ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಮುಖ್ಯವಾಗಿ ವಿದ್ಯಾರ್ಥಿಗಳು ತಾಳ್ಮೆ, ಸಹನಾ ಗುಣ ಹಾಗೂ ಕಠಿಣ ಪರಿಶ್ರಮ ಇರಬೇಕು ಎಂದು ಬಳೂತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಎಸ್. ಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಜೀವನದಲ್ಲಿ ಹಣ ಮುಖ್ಯವಲ್ಲ, ಶಿಕ್ಷಣ ಮುಖ್ಯ. ಶಿಕ್ಷಣ ಪಡೆಯುವುದರೊಂದಿಗೆ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಮುಖ್ಯವಾಗಿ ವಿದ್ಯಾರ್ಥಿಗಳು ತಾಳ್ಮೆ, ಸಹನಾ ಗುಣ ಹಾಗೂ ಕಠಿಣ ಪರಿಶ್ರಮ ಇರಬೇಕು ಎಂದು ಬಳೂತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಎಸ್. ಗೌಡರ ಹೇಳಿದರು.

ತಾಲೂಕಿನ ಹಣಮಾಪೂರದ ಗ್ರಾಮೀಣ ವಿದ್ಯಾವರ್ದಕ ಸಂಘದ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಆರ್.ಎಸ್.ತುಂಗಳ ಮಾತನಾಡಿ, ಶಾಲೆಯು ಬೆಳೆದ ಬಂದ ಪ್ರಗತಿಯನ್ನು ತಿಳಿಸುತ್ತಾ, ವಿದ್ಯಾರ್ಥಿಗಳ ಫಲಿತಾಂಶ, ಶಾಲಾ ಅಭಿವೃದ್ಧಿ ಮತ್ತು ಶಿಕ್ಷಕರ ಪರಿಶ್ರಮದ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮಾದರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳೂತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಎಸ್.ಗೌಡರ, ಗ್ರಾಮದ ಗಣ್ಯರಾದ ನಾಗನಗೌಡ ಬಿರಾದಾರ, ಶಿಕ್ಷಣ ಪ್ರೇಮಿಗಳಾದ ಶರಣಗೌಡ ಪಾಟೀಲ, ಮುತ್ತುಸಾವುಕಾರ ಹಳ್ಳೂರ, ವಿಜಯನಗೌಡ ಪಾಟೀಲ, ಮಲ್ಲಪ್ಪ ಹೊನ್ಯಾಳ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಗಣಿ, ಸದಸ್ಯ ನಿಂಗಪ್ಪ ಹಳ್ಳೂರ, ಕಲಬಸಪ್ಪ ಹಳ್ಳೂರ, ಶ್ರೀಶೈಲ ನರಿಯವರ, ಸಂಗಮೇಶ ಕುಬಕಡ್ಡಿ, ಮಕಬೂಲ್ ಸಾಬ ಬಿದರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈ ವೇಳೆ ಶಾಲೆಯ ಶಿಕ್ಷಕರು, ಪಾಲಕರು, ಗ್ರಾಮಸ್ಥರು ಮತ್ತು ಮಕ್ಕಳು ಇದ್ದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶಿಕ್ಷಕ ಎಸ್ ಎಲ್ ಪವಾರ ನಡೆಸಿಕೊಟ್ಟರು. ಶಿಕ್ಷಕ ವಿಜಯ ಎಚ್ ನಿರೂಪಿಸಿದರು. ಶಿಕ್ಷಕ ಪ್ರಕಾಶ ಎನ್. ಕೂಡಗಿ ವಂದಿಸಿದರು.