ಸಾರಾಂಶ
ವಿದ್ಯಾರ್ಥಿಗಳು ರ್‍ಯಾಂಕಿನ ಹಿಂದೆ ಬೀಳಬಾರದು, ಜ್ಞಾನದ ಹಿಂದೆ ಬೀಳಬೇಕು, ಆಗ ರ್‍ಯಾಂಕ್ ತಾನಾಗೇ ಲಭಿಸುತ್ತದೆ. ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ತಯಾರಿಸಿದ ವಿಜ್ಞಾನ ಮಾದರಿಗಳು ಸಂತಸ ತಂದಿದೆ.
ಕುಮಟಾ:
ವೇಗದ ಜೀವನಶೈಲಿಯಲ್ಲಿ ಸಾಧನೆ ಸುಲಭವಲ್ಲ. ಹೀಗಾಗಿ ಕಠಿಣ ಪರಿಶ್ರಮದಿಂದ ಸಾಧನೆಯೆಡೆಗೆ ಮುನ್ನಡೆಯಬೇಕು ಎಂದು ಪಿಯು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ದೇವಾನಂದ ಗಾಂವ್ಕರ್ ಹೇಳಿದರು.ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಎಲ್ಲ ಶಿಕ್ಷಣ ಸಂಸ್ಥೆಗಳ ವತಿಯಿಂದ ದ್ವೈವಾರ್ಷಿಕವಾಗಿ ಏರ್ಪಡಿಸಿದ್ದ ಮೂರು ದಿನಗಳ ಸರಸ್ವತಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿದ ಇಸ್ರೋದ ವಿಜ್ಞಾನಿ ಶಾಂತಲಾ ಎಚ್.ಎಸ್. ಮಾತನಾಡಿ, ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ತಯಾರಿಸಿದ ವಿಜ್ಞಾನ ಮಾದರಿಗಳು ಸಂತಸ ತಂದಿದೆ. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಬಹುದು ಎಂಬುದಕ್ಕೆಮುನ್ನುಡಿಯಂತಿದೆ ಎಂದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿತರಾದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಚಲನಚಿತ್ರ ನಿರ್ದೇಶಕ ವಿಲಾಸ ಕ್ಷತ್ರಿಯ, ವಿದ್ಯಾರ್ಥಿಗಳು ರ್‍ಯಾಂಕಿನ ಹಿಂದೆ ಬೀಳಬಾರದು, ಜ್ಞಾನದ ಹಿಂದೆ ಬೀಳಬೇಕು, ಆಗ ರ್‍ಯಾಂಕ್ ತಾನಾಗೇ ಲಭಿಸುತ್ತದೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ವಿಠಲ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಸಹಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರು, ಶಿಕ್ಷಣ ಸಲಹೆಗಾರ ಆರ್.ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್, ಮುಖ್ಯ ಶಿಕ್ಷಕರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ಮಾತೃ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.ಶಿಕ್ಷಕ ಗಣೇಶ ಜೋಶಿ ಸ್ವಾಗತಿಸಿ ನಿರೂಪಿಸಿದರು. ಶಾಹಿದಾ ಶೆಟ್ಟಿ ನಿರ್ವಹಿಸಿದರು. ಮೂರು ದಿನ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ನಡೆದ ವಿವಿಧ ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಹತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.