ಸಾರಾಂಶ
ಕುಟುಂಬೋತ್ಸವ ಮತ್ತು ಲೀಡರ್ ಶಿಪ್ ತರಬೇತಿ ಕಾರ್ಯಕ್ರಮ ಸಿ.ಎಸ್.ಐ ಬಾಲಕರ ವಸತಿ ನಿಲಯದಲ್ಲಿ ನಡೆಯಿತು. ನಾಯಕತ್ವ ಜವಾಬ್ದಾರಿಯಾಗಿದೆ ಎಂದು ಗಣ್ಯರು ಈ ಸಂದರ್ಭ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಾಯಕತ್ವ ಎಂಬುದು ಒಂದು ಜವಾಬ್ದಾರಿಯಾಗಿದೆ, ಅದನ್ನು ಅಧಿಕಾರ ಎಂದು ತಿಳಿಯಬಾರದು, ಹೆಚ್ಚು ಕೆಲಸ, ಶಿಸ್ತು ಬದ್ಧ ಜೀವನ ನಾಯಕನ ಗುಣವಾಗಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಮಂಜ ಹೇಳಿದರು.ಅವರು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಸಿ.ಎಸ್.ಐ. ಬಾಲಕರ ವಸತಿ ನಿಲಯದಲ್ಲಿ ನಡೆದ ಕುಟುಂಬೋತ್ಸವ ಮತ್ತು ಲೀಡರ್ ಶಿಪ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಯಕತ್ವದ ಗುಣಗಳನ್ನು ನಾವೆಲ್ಲರೂ ರೂಢಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಡಾ. ಹರಿಣಾಕ್ಷಿ ಕರ್ಕೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷರಾದ ರಫೀಕ್ ಖಾನ್ ಮತ್ತು ಜಗದೀಶ್ ಶೆಟ್ಟಿ ಕೀಳಂಜೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಜೇಸಿ ಪದಾಧಿಕಾರಿಗಳಾದ ಪ್ರಕಾಶ್ ದೇವಾಡಿಗ, ಸಂಧ್ಯಾ ಕುಂದರ್, ವಸತಿ ನಿಲಯದ ವಾರ್ಡನ್ ಜಾನ್ ಸುದರ್ಶನ ಉಪಸ್ಥಿತರಿದ್ದರು.ಈ ಸಂದರ್ಭ ಜೇಸಿಯಿಂದ ನೀಡಲಾಗುವ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ’ವನ್ನು ಉದ್ಯಮಿ ದಿನೇಶ್ ಎಂ ಪೂಜಾರಿ ಮತ್ತು ಶಿಕ್ಷಕರಾದ ಚಂದ್ರ ಬಿ ಅಮೀನ್ ಅವರಿಗೆ ನೀಡಿ ಗೌರವಿಸಲಾಯಿತು. ವಲಯ ಮಟ್ಟದ ತರಬೇತಿಯಲ್ಲಿ ಭಾಗವಹಿಸಲಿರುವ ಬಾಸುಮ ಕೊಡಗು, ಉದಯ್ ನಾಯ್ಕ್ ಅವರನ್ನು ಗುರುತಿಸಿ ಅಭಿನಂದಿಸಲಾಯಿತು.