ಸಾರಾಂಶ
- ವಾಟರ್ ಸಪ್ಲೈ ಸಾಮಾನುಗಳ ಬಿಲ್ ಮಂಜೂರು ಮಾಡಲು ₹2 ಲಕ್ಷ ಲಂಚಕ್ಕೆ ಬೇಡಿಕೆ - - - - ದಾವಣಗೆರೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ ಮೆಟೀರಿಯಲ್ ಸಪ್ಲೈಯರ್ ಎಚ್.ಕರಿಬಸಪ್ಪ
- ನಗರಸಭೆ ವ್ಯಾಪ್ತಿಯಲ್ಲಿ ವಾಟರ್ ಸಪ್ಲೈಗೆ ಪೂರೈಸಿದ್ದ ಸಾಮಾನ್ಯಗಳ ಒಟ್ಟು ಮೊತ್ತ ₹25-₹30 ಲಕ್ಷ- ಹರಿಹರದ ಹರಿಹರೇಶ್ವರ ಬಡಾವಣೆಯ ಕೊಠಡಿಯಲ್ಲಿ ಲಂಚದ ಹಣ ಸ್ವೀಕರಿಸುವಾಗ ಬಂಧನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನೀರು ಪೂರೈಕೆಗೆ ಒದಗಿಸಿದ್ದ ಸಾಮಾನುಗಳ ಒಟ್ಟು ₹25-₹30 ಲಕ್ಷ ಬಿಲ್ ಮೊತ್ತ ಮಂಜೂರು ಮಾಡಲು ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಆ ಲಂಚದ ಹಣವನ್ನು ತನ್ನ ಕೊಠಡಿಯಲ್ಲಿ ಪಡೆಯುತ್ತಿದ್ದ ವೇಳೆಯೇ ಹರಿಹರ ನಗರಸಭೆ ಪೌರಾಯುಕ್ತ ಸೋಮವಾರ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಪೌರಾಯುಕ್ತ ಐ.ಬಸವರಾಜ ಬಂಧಿತ ಆರೋಪಿ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಕುಮಾರಪಟ್ಟಣಂನ ಪ್ರಭು ಟ್ರೇಡರ್ಸ್ ಮಾಲೀಕ, ಮೆಟೀರಿಯಲ್ ಸಪ್ಲೈಯರ್ ಎಚ್.ಕರಿಬಸಪ್ಪ ಎಂಬವರಿಗೆ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ವಾಟರ್ ಸಪ್ಲೈಗೆ ಪೂರೈಸಿದ್ದ ಸಾಮಾನ್ಯಗಳಿಗೆ ₹25-₹30 ಲಕ್ಷ ಬಿಲ್ ಮೊತ್ತ ಮಂಜೂರು ಮಾಡಬೇಕಾಗಿತ್ತು.
ಈ ಬಿಲ್‌ನ ಮೊತ್ತವನ್ನು ಮಂಜೂರು ಮಾಡಲು ಹರಿಹರ ನಗರಸಭೆ ಪೌರಾಯುಕ್ತ ಐ.ಬಸವರಾಜ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಾಮಾನು ಪೂರೈಕೆದಾರ ಎಚ್.ಕರಿಬಸಪ್ಪ ಈ ಬಗ್ಗೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹರಿಹರದ ಹರಿಹರೇಶ್ವರ ಬಡಾವಣೆಯ ತಮ್ಮ ಕೊಠಡಿಯಲ್ಲಿ ಐ.ಬಸವರಾಜ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿಬಿದ್ದಿದ್ದಾನೆ. ಲಂಚದ ಹಣದ ಸಮೇತ ಪೌರಾಯುಕ್ತರನ್ನು ಲೋಕಾಯುಕ್ತರು ಬಂಧಿಸಿದರು.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಸಿ.ಮಧುಸೂದನ್, ಎಚ್.ಎಸ್. ರಾಷ್ಟ್ರಪತಿ, ಸಿಎಚ್‌ಸಿಗಳಾದ ಆಂಜನೇಯ, ವೀರೇಶಯ್ಯ, ಸುಂದರೇಶ, ಸಿಪಿಸಿಗಳಾದ ಮಲ್ಲಿಕಾರ್ಜುನ, ಲಿಂಗೇಶ, ಧನರಾಜ, ಮಂಜುನಾಥ, ಗಿರೀಶ, ಚಾಲಕರಾದ ಕೋಟಿನಾಯ್ಕ, ಬಸವರಾಜ, ಮೋಹನ, ಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
- - - -8ಕೆಡಿವಿಜಿ8:ಐ.ಬಸವರಾಜ, ಪೌರಾಯುಕ್ತ