ಸಾರಾಂಶ
ಚಾಮರಾಜನಗರಕ್ಕೆ ಆಗಮಿಸಿದ್ದ ಉಡುಪಿ ಶಿರೂರು ಮಠದ ಹಾಗೂ ಮುಂದಿನ ಪರ್ಯಾಯ ಪೂಜೆಗೆ ಕೂರುವ ಶ್ರೀ ವೇದವರ್ಧನ ತೀರ್ಥರಿಗೆ ನಗರದ ಜನಾರ್ಧನ ಪ್ರತಿಷ್ಠಾನದ ವತಿಯಿಂದ ಜನತೆಯ ಪರವಾಗಿ ಹರಿಸೇವಾ ಕೌಸ್ತುಭ ಬಿರುದು ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಕ್ಕೆ ಆಗಮಿಸಿದ್ದ ಉಡುಪಿ ಶಿರೂರು ಮಠದ ಹಾಗೂ ಮುಂದಿನ ಪರ್ಯಾಯ ಪೂಜೆಗೆ ಕೂರುವ ಶ್ರೀ ವೇದವರ್ಧನ ತೀರ್ಥರಿಗೆ ನಗರದ ಜನಾರ್ಧನ ಪ್ರತಿಷ್ಠಾನದ ವತಿಯಿಂದ ಜನತೆಯ ಪರವಾಗಿ "ಹರಿಸೇವಾ ಕೌಸ್ತುಭ " ಬಿರುದು ನೀಡಿ ಗೌರವಿಸಲಾಯಿತು.ಹರಳುಕೋಟೆ ಜನಾರ್ಧನಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಪೂಜ್ಯರು ಜನಾರ್ಧನಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ ದೇವಸ್ಥಾನದ ಬಗ್ಗೆ ಅನಂತಪ್ರಸಾದ್ ಅವರಿಂದ ಮಾಹಿತಿ ಪಡೆದುಕೊಂಡರು. ಜನಾರ್ಧನ ಪ್ರತಿಷ್ಠಾನದ ವತಿಯಿಂದ ಜನತೆಯ ಪರವಾಗಿ ಹರಿಸೇವಾ ಕೌಸ್ತುಭ ಬಿರುದು ನೀಡಿ ಫಲತಾಂಬೂಲ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ವೇದವರ್ಧನ ತೀರ್ಥರು ಭಗವಂತ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬರಹಗಾರ ಲಕ್ಷ್ಮೀನರಸಿಂಹ, ಪುರಾತನ ಪ್ರಸಿದ್ಧ ಜನಾರ್ಧನಸ್ವಾಮಿ ದೇವಸ್ಥಾನಕ್ಕೆ ಮಾಧ್ವ ಪರಂಪರೆಯ ಪೂಜ್ಯ ಗುರುಗಳು ಭೇಟಿ ಕೊಟ್ಟು ಜನಾರ್ಧನನ ಸೇವೆ ಮಾಡಿದ್ದಾರೆ. ಅದೇ ಪರಂಪರೆಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಆಗಮಿಸಿದ್ದಾರೆ. ಇವರ ಪಾದಸ್ಪರ್ಶದಿಂದ ಜಿಲ್ಲೆಯ ಜನತೆಗೆ ಒಳ್ಳೆಯದಾಗಿ ಮಳೆ ಬೆಳೆ ಆಗಿ ಜನ ಸಂತೃಪ್ತಿಯಿಂದ ಇರಲಿ ಎಂದರು. ಪೂಜ್ಯರ ಮುಂದಿನ ಶ್ರೀಕೃಷ್ಣನ ಪರ್ಯಾಯ ಪೂಜೆ ಯಶಸ್ವಿಯಾಗಿ ನಡೆಯಲಿ ಎಂದರು. ಜನಾರ್ಧನ ಪ್ರತಿಷ್ಠಾನದ ಅನಂತಪ್ರಸಾದ್, ರುದ್ರಭೂಮಿ ಸತೀಶ್, ನವೀನ್, ಜನಾರ್ಧನ, ವಾದಿರಾಜ, ಶ್ರೀಶಭಟ್ಟರು ಇದ್ದರು.