ಸಾರಾಂಶ
ಮಾದೀಹಳ್ಳಿ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿನ ಪುರಾಣಪ್ರಸಿದ್ದ ಶ್ರೀ ಬಸವಣ್ಣದೇವರ ನೂತನ ದೇಗುಲ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಫೆ. 10ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಹಾರೋಹಳ್ಳಿ ಶ್ರೀ ಬಸವಣ್ಣ ದೇವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್.ಎಂ.ನಾಗೇಂದ್ರಪ್ಪ ಹಾಗೂ ಕಾರ್ಯದಶಿ ಎಚ್.ಪಿ.ಧರ್ಮಪ್ಪ ಹೇಳಿದರು. ಪುಷ್ಪಗಿರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಕಲಶ ಪ್ರತಿಷ್ಠಾಪನೆ ನಡೆಸಲಾಗುತ್ತದೆ. ಪುಷ್ಪಗಿರಿ ಜಗದ್ಗುರುಗಳು, ತಮ್ಮಡಿಹಳ್ಳಿ ಶ್ರೀಗಳು ಮತ್ತು ಕೋಳಗುಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಮಾದೀಹಳ್ಳಿ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿನ ಪುರಾಣಪ್ರಸಿದ್ದ ಶ್ರೀ ಬಸವಣ್ಣದೇವರ ನೂತನ ದೇಗುಲ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಫೆ. 10ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಹಾರೋಹಳ್ಳಿ ಶ್ರೀ ಬಸವಣ್ಣ ದೇವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್.ಎಂ.ನಾಗೇಂದ್ರಪ್ಪ ಹಾಗೂ ಕಾರ್ಯದಶಿ ಎಚ್.ಪಿ.ಧರ್ಮಪ್ಪ ಹೇಳಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅರೆಮಲೆನಾಡು ಪ್ರದೇಶದ ಹಾರೋಹಳ್ಳಿ ಗ್ರಾಮ ಕುಗ್ರಾಮವಾಗಿದೆ. ಇಲ್ಲಿನ ಪುರಾಣಪ್ರಸಿದ್ದ ಶ್ರೀ ಬಸವಣ್ಣ ದೇವರ ದೇಗುಲ ತೀವ್ರ ಶಿಥಿಲವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ಸುಂದರ ದೇಗುಲ ನಿರ್ಮಾಣವಾಗಿದೆ. ಇದೇ ಫೆಬ್ರವರಿ ೯ರಂದು ಧಾರ್ಮಿಕ ಕಾರ್ಯಕ್ರಮಗಳಾದ ಗಂಗಾಪೂಜೆ, ರುದ್ರಹೋಮ, ಗಣಪತಿಹೋಮ ಸೇರಿದಂತೆ ವಿವಿಧ ಕಾರ್ಯಗಳ ಬಳಿಕ ಸೋಮವಾರ ಬೆಳಿಗ್ಗೆ ಪುಷ್ಪಗಿರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಕಲಶ ಪ್ರತಿಷ್ಠಾಪನೆ ನಡೆಸಲಾಗುತ್ತದೆ. ಬೆಳಿಗ್ಗೆ ೧೧ ಗಂಟೆಗೆ ಪುಷ್ಪಗಿರಿ ಜಗದ್ಗುರುಗಳು, ತಮ್ಮಡಿಹಳ್ಳಿ ಶ್ರೀಗಳು ಮತ್ತು ಕೋಳಗುಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಹಾರೋಹಳ್ಳಿ ಗ್ರಾಮದ ಮುಖಂಡರಾದ ಚಂದ್ರಶೇಖರ್(ಪಾಪಣ್ಣ) ಹಾಗೂ ಸಿದ್ದೇಶಪ್ಪ ಮಾತನಾಡಿ, ಸುಮಾರು ೧೫೦ ವರ್ಷಗಳ ಇತಿಹಾಸವನ್ನು ತಿಳಿಸುವ ಇಲ್ಲಿನ ಶ್ರೀ ಬಸವಣ್ಣ ದೇವರ ದೇಗುಲಕ್ಕೆ ತನ್ನದೇ ಆದ ಮಹತ್ವವಿದೆ. ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸಿ ಅವರಿಗೆ ಆರೋಗ್ಯ ಐಶ್ವರ್ಯ ನೀಡುವ ಶ್ರೀ ಬಸವಣ್ಣ ದೇವರ ದೇಗುಲ ಇದೇ ಫೆಬ್ರವರಿ ೯ ಮತ್ತು ೧೦ರಂದು ಉದ್ಘಾಟನೆಗೊಳ್ಳುತ್ತಿದ್ದು, ಕಾರ್ಯಕ್ರಮಕ್ಕೆ ಸುಮಾರು ನಾಲ್ಕ ಸಾವಿರ ಜನಸ್ತೋಮ ಸೇರಲಿದೆ. ಬರುವ ಸಾವಿರಾರು ಭಕ್ತರಿಗೆ ನಿರಂತರ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಾರ್ಯಕ್ಕೆ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶನಾಗೇಂದ್ರರವರು ಹಾಗೂ ಸಭಾ ಮಂಟಪ ಮತ್ತು ಗ್ರಾನೈಟ್ ಸೇವೆಯನ್ನು ಉದ್ಯಮಿ ಹಾಘೂ ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಸಹಕಾರ ನೀಡಿದ್ದಾರೆ. ಹಾಗೆಯೇ ಬೇಲೂರಿನ ಶಾಸಕ ಸುರೇಶ್ ಅವರು ದೇಗುಲದ ಸುತ್ತು ತಡೆಗೋಡೆ ನಿರ್ಮಾಣಕ್ಕೆ ಮತ್ತು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ, ಉಳಿದಂತೆ ಹಾರೋಹಳ್ಳಿ ಗ್ರಾಮಸ್ಥರು, ಬೇಕರಿ ಮಾಲೀಕರು, ಉದ್ಯೋಗಸ್ಥರು ಸೇರಿದಂತೆ ಸರ್ವ ನೀಡಿದ ನೆರವು ಅನನ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಹಾರೋಹಳ್ಳಿಯ ಎಚ್.ಪಿ.ಚಂದ್ರಶೇಖರ್, ವಿಜಯಕುಮಾರ್, ಎಚ್.ಜಿ.ಚಂದ್ರಶೇಖರ್ ಮೊದಲಾದವರಿದ್ದರು.