ದಬ್ಬಾಳಿಕೆ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

| Published : Sep 26 2024, 10:24 AM IST

ದಬ್ಬಾಳಿಕೆ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲದ ಕಂತು ಪಡೆಯಲು ಮನೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು. ಮನೆಯಲ್ಲಿ ನೆಂಟರು ಅಥವಾ ಮಕ್ಕಳ ಮುಂದೆ ಸಾಲದ ಕಂತು ಮರುಪಾವತಿ ಮಾಡಿ ಎಂದು ಕೇಳಿದಾಗ ಸಾರ್ವಜನಿಕವಾಗಿ ಅವಮಾನವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ನೀಡಿದ ನಂತರ ಸಾಲದ ಕಂತು ಹಿಂಪಡೆಯಲು ಹೋಗುವ ಸಿಬ್ಬಂದಿ ಸಭ್ಯವಾಗಿ ವರ್ತಿಸಿ. ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಭೆ ನಡೆಸಿ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆಯುವವರು ಬಡ ಕುಟುಂಬದವರು ಹಾಗೂ ಅವರು ಸಾಲ ಪಡೆಯುವುದು ಕೇವಲ ಒಂದರಿಂದ ಎರಡು ಲಕ್ಷ ಆಗಿರುತ್ತದೆ. ಅವರು ಸಾಲದ ಕಂತು ಪಾವತಿ ಕೇವಲ ಸಾವಿರ ಇರುತ್ತದೆ. ಅವರನ್ನು ಸಾಲ ಮರುಪಾವತಿ ಮಾಡಿಲ್ಲ ಎಂದು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದನಿಂದನೆ ಮಾಡುವುದು, ದಬ್ಬಾಳಿಕೆ ಮಾಡುವುದರಿಂದ ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ಕೃತ್ಯ ಸಂಭವಿಸುತ್ತಿಸೆ. ಇದು ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿ ಮಾಡುತ್ತಿದೆ ಎಂದರು.

ಆರ್‌ಬಿಐ ನಿಯಮ ಪಾಲಿಸಿ ಆರ್‌ಬಿಐನಲ್ಲಿ ಸಾಲ ವಸೂಲಾತಿ ಮಾಡಲು ಸಮಯ ನಿಗದಿಯಾಗಿರುತ್ತದೆ. ನಿಗದಿ ಪಡಿಸಿರುವ ಸಮಯದಲ್ಲಿ ಮಾತ್ರ ಸಿಬ್ಬಂದಿ ಸಾಲದ ಕಂತು ಪಡೆಯಲು ಮನೆಗಳಿಗೆ ತೆರಳಬೇಕು ಎಂದು ಸೂಚಿಸಿದರು.

ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ:

ಸಾಲದ ಕಂತು ಪಡೆಯಲು ಮನೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು. ಮನೆಯಲ್ಲಿ ನೆಂಟರು ಅಥವಾ ಮಕ್ಕಳ ಮುಂದೆ ಸಾಲದ ಕಂತು ಮರುಪಾವತಿ ಮಾಡಿ ಎಂದು ಕೇಳಿದಾಗ ಸಾರ್ವಜನಿಕವಾಗಿ ಅವಮಾನವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಕಟುವಾಗಿ ಹೇಳಿದರು.

ಬಡ್ಡಿಯ ಬಗ್ಗೆ ಮಾಹಿತಿ ನೀಡಿ:

ಸಾಲದ ಮೇಲೆ ವಿಧಿಸುವ ಬಡ್ಡಿಯ ಬಗ್ಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಸಾಲವನ್ನು ಮಂಜೂರಾತಿ ಮಾಡುವಾಗ ಸಾಲದ ಮೇಲೆ ವಿಧಿಸುವ ಬಡ್ಡಿ, ಪ್ರೊಸೆಸಿಂಗ್ ಶುಲ್ಕದ ಬಗ್ಗೆ ಕನ್ನಡದಲ್ಲಿ ತಿಳಿಸಿ. ಸಾಲ ಮರುಪಾವತಿಗೆ ವಿಧಿಸಿರುವ ಷರತ್ತುಗಳನ್ನು ಕನ್ನಡದಲ್ಲಿ ತಿಳಿಸಬೇಕು ಎಂದರು.

ಸಾಲದ ಕಂತು ಮರುಪಾವತಿ ಮಾಡಲು ತಡ ಮಾಡಿದರೆ ಲಿಖಿತವಾಗಿ ನೊಟೀಸ್ ಜಾರಿ ಮಾಡಿ. ಅವರ ಕಷ್ಟಗಳ ಬಗ್ಗೆ ತಿಳಿದುಕೊಂಡು ಸಮಯಾವಕಾಶ ನೀಡುವಂತೆ ತಿಳಿಸಿದರು.

ದೂರು ಕೇಂದ್ರ ತೆರೆಯಿರಿ:

ಮೈಕ್ರೋ ಫೈನಾನ್ಸ್ ಕುರಿತು ಹಲವಾರು ದೂರುಗಳು ಜಿಲ್ಲಾಡಳಿತಕ್ಕೆ ಬರುತ್ತದೆ. ಅವುಗಳನ್ನು ‌ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಒಂದು ದೂರು ಕೇಂದ್ರ ಹಾಗೂ ತಾಲೂಕು ಮಟ್ಟದಲ್ಲಿ ಒಬ್ಬರು ನೋಡಲ್ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದರು.

ತರಬೇತಿ ನೀಡಿ ಹಾಗೂ ವರದಿ ಸಲ್ಲಿಸಿ ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್ ಗಳು ತಮ್ಮ ಸಿಬ್ಬಂದಿ

ಸಾಲ ವಸೂಲಾತಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಬಗ್ಗೆ ತರಬೇತಿ ನೀಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದರು.

ಮೈಕ್ರೋ ಫೈನಾನ್ಸ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಗುರುತಿನ ಚೀಟಿ ನೀಡಬೇಕು. ಅವರು ತಮ್ಮ ಸಂಸ್ಥೆಯ ಕಚೇರಿಯ ಮುಂದೆ ನಾಮಫಲಕ ಅಳವಡಿಸಬೇಕು‌ ಎಂದರು.

ಮುಖಂಡರಾದ ವೆಂಕಟಗಿರಿಯಯ್ಯ ಮಾತನಾಡಿ, ಸಾಲ ನೀಡುವಾಗ ಅವರಿಗೆ ಮರುಪಾವತಿ ಮಾಡುವ ಶಕ್ತಿಯನ್ನು ಪರಿಶೀಲಿಸದೆ ಸಾಲ ನೀಡುವುದು. 4-5 ಮೈಕ್ರೋ ಫೈನಾನ್ಸ್ ಗಳು ಒಬ್ಬರಿಗೆ ಸಾಲ ನೀಡುವುದು. ನಂತರ ದಬ್ಬಾಳಿಕೆಯ ಅಸ್ತ್ರ ಪ್ರಯೋಗಿಸುವುದು ಕಂಡುಬರುತ್ತಿದೆ. ಇವುಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಸಹಾಯಕವಾಗುವ ರೀತಿ ಕಾರ್ಯನಿರ್ವಹಿಸಿ ಎಂದರು‌.

ಸಭೆಯಲ್ಲಿ ಮಂಡ್ಯ ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್‌.ಅರುಣ್ ಕುಮಾರ್, ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಮಂಜುನಾಥ್, ಹೆಗಡೆ ಇತರರಿದ್ದರು.