ಹಿಂದೂಗಳ ಹತ್ಯೆಗೆ ಉಗ್ರ ಪ್ರತೀಕಾರ ಬೇಕಿದೆ: ಮಾದುಲಿಂಗ ಸ್ವಾಮೀಜಿ

| Published : Apr 25 2025, 11:51 PM IST

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡ ಖಂಡನೀಯ. ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಉಗ್ರರನ್ನು ಮಟ್ಟಹಾಕಬೇಕು ಎಂದು ಜಕನೂರಿನ ಮಾದುಲಿಂಗ ಸ್ವಾಮಿಗಳು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ದಕ್ಷಣ ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡ ಖಂಡನೀಯ. ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಉಗ್ರರನ್ನು ಮಟ್ಟಹಾಕಬೇಕು ಎಂದು ಜಕನೂರಿನ ಮಾದುಲಿಂಗ ಸ್ವಾಮಿಗಳು ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಜನಿವಾರಧಾರಿಗಳ ಸಮಾಜ, ವಿಶ್ವಹಿಂದು ಪರಷತ್‌, ವಿಶ್ವಕರ್ಮ ಸಮಾಜ, ವಿಪ್ರ ಮಹಿಳಾ ಮಂಡಲ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು, ಹಿಂದೂಗಳ ಮೇಲೆ ಇದೇ ರೀತಿ ದಾಳಿಗಳಾದರೆ ಆಶ್ಚರ್ಯ ಪಡುವಂಥ ಸ್ಥಿತಿ ಇಲ್ಲ, ಉಗ್ರರದಾಳಿಗಳು ನಡೆಯದಂತೆ ಸರ್ಕಾರಗಳು ಕಠಿಣ ಕಾನೂನು ಜಾರಿಗೆ ತರಬೇಕು. ಇಲ್ಲವಾದರೆ ಸಾಧು-ಸಂತರು, ಸಮಾಜವೇ ಸೂಕ್ತ ಉತ್ತರ ನೀಡಲು ಮುಂದಾಗಲಿದೆ ಎಂದು ಎಚ್ಚರಿಸಿದರು.

ಸನಾತನ ಹಿಂದೂಗಳ ಧಾರ್ಮಿಕ ಸಂಕೇತವಾಗಿರುವ ಜನಿವಾರ ತೆಗೆಯುಂತೆ ಒತ್ತಾಯಿಸಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿದ ಅವರು, ಧಾರ್ಮಿಕ ನಂಬಿಕೆಗೆ ಧಕ್ಕೆ ಬರುವಂತೆ ನಡೆದುಕೊಂಡ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿದರೆ ಸಾಲದು. ಶಾಶ್ವತವಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬ್ರಾಹ್ಮಣ ಸಮಾಜದ ಪಂ.ರಂಗಾಚಾರ್ಯ ಜೋಷಿ ಮಾತನಾಡಿ, ಸರ್ಕಾರದ ಕೆಲ ಅಧಿಕಾರಿಗಳು ಕುಮ್ಮಕ್ಕಿನಿಂದಾಗಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯಿಸುವ ಕೆಲಸ ಮಾಡಿದ್ದಾರೆ. ಅಂಥವರನ್ನು ಸೇವೆಯಿಂದ ವಜಾ ಗೊಳಿಸಬೇಕು. ಯಾರಿಗೂ ಹಾನಿ ಉಂಟು ಮಾಡದೇ ಬದಕುವ ಸಮಾಜವನ್ನು ಕೆಣಕುವ ಯತ್ನ ಮಾಡಬಾರದು ಎಂದು ಎಚ್ಚರಿಸಿದರು. ಮುಖಂಡ ರಾಜೇಂದ್ರ ಹುಲ್ಯಾಳಕರ ಮಾತನಾಡಿ, ಬ್ರಾಹ್ಮಣರ ಆಸ್ತಿ-ಪಾಸ್ತಿ ಕಸಿದು ಕೊಂಡಿದ್ದೀರಿ, ಸಮಾಜಕ್ಕೆ ಯಾವುದೇ ಮೀಸಲಾತಿ ಇಲ್ಲವಾದರೂ ಬುದ್ದಿವಂತಿಕೆಯಿಂದ ಬದುಕುತ್ತಿರುವ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ. ತಲೆ ಕತ್ತರಿಸುವ ಕೆಲಸ ಮಾಡಬೇಡಿ. ನಮ್ಮ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.

ರಾಘವೇಂದ್ರಾಚಾರ್ಯ ಜೋಷಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಉಮೇಶ ದೇಸಾಯಿ, ಬ್ಯಾಹ್ಮಣ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ನಿತಿನ ಹುಲ್ಯಾಳಕರ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಪುರೋಹಿತ, ಪಿ.ಪಿ. ಜೋಷಿ, ಸುಧೀರ ಕುಲಕರ್ಣಿ, ರಮೇಶ ಕನಕೇರಿ, ಶ್ರೀಧರ ಪಟವರ್ಧನ, ಎನ್‌.ಟಿ. ಜೋಷಿ, ರಾಧಾಕೃಷ್ಣ ಮೂರ್ತಿ, ಡಾ.ಅಭಯ ವಾಟವೆ, ಆಶಿಷ ವಾಟವೆ, ಪ್ರಹ್ಲಾದ ಕುಲಕರ್ಣಿ, ಶ್ರೀಕಾಂತ ಕುಲಕರ್ಣಿ, ನರಸಿಂಹ ನಾಯಕ, ಭೀಮ ಮೋಕಾಶಿ, ಸಂಜೀವ ದೇಶಪಾಂಡೆ, ಶಶಿಕಾಂತ ವಿಶ್ವಬ್ರಾಹ್ಮಣ. ಡಾ, ಬಸವರಾಜ ಮಠಪತಿ, ಶೀನಿವಾಸ ಬಾದರಾಣಿ, ಕೆ.ವಿ. ಕಪಿಲೇಶ್ವರ, ಪಂಢರಿನಾಥ ವೈದ್ಯ, ಮೂರ್ತಿ ಹೆಬ್ಬಾರ, ಅನಂತ ಹರೆಕಲ್‌, ಮುಕುಂದಾಚಾರ್ಯ ನ್ಯಾಮಣ್ಣವರ, ಅಶೋಕ ಹೂಗಾರ, ಕಲ್ಯಾಣಿ ಗೋಖಲೆ, ನಳನಿ ಹುಲ್ಯಾಳಕರ, ಪದ್ಮಾ ಕುಲಕರ್ಣಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ ಸದಾಶಿವ ಮಕ್ಕೊಜಿ ಅವರಿಗೆ ಮನವಿ ಸಲ್ಲಿಸಿದರು.