ಸಾರಾಂಶ
ಕೊಡಗಿನ ಕ್ರೀಡಾಪಟು ಕೆ.ಬಿ. ಹರ್ಷಿತಾ ಬೋಪಯ್ಯ ಸೀನಿಯರ್ ಇಂಟರ್‌ನ್ಯಾಷನಲ್ ಬಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗಿನ ಕ್ರೀಡಾಪಟು ಕೆ.ಬಿ. ಹರ್ಷಿತಾ ಬೋಪಯ್ಯ ಸೀನಿಯರ್ ಇಂಟರ್ ನ್ಯಾ ಷನಲ್ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.ದೆಹಲಿಯಲ್ಲಿ ಫೆ. 23 ರಿಂದ 26ರ ವರೆಗೆ ನಡೆಯಲಿರುವ ಟೂರ್ನಮೆಂಟ್ ನಲ್ಲಿ ಕೆ.ಬಿ.ಹರ್ಷಿತಾ ಬೋಪಯ್ಯ ಪಾಲ್ಗೊಳ್ಳಲಿದ್ದಾರೆ.
ಇವರು ಮಡಿಕೇರಿ ತಾಲೂಕು. ನಾಪೋಕ್ಲು ಗ್ರಾಮದ ಕೆಲೇಟಿರ ಬೋಪಯ್ಯ(ದೊರೆ) ಮತ್ತು ಮಾಲಾ ಮುತ್ತಮ್ಮ ದಂಪತಿಗಳ ಪುತ್ರಿ . ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ ಬಳಿಕ ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್ ನಲ್ಲಿ ಶಿಕ್ಷಣ ಪೂರೈಸಿದರು. ಪ್ರಸ್ತುತ ಹೈದರಾಬಾದ್ ದಕ್ಷಿಣ ಕೇಂದ್ರ ರೈಲ್ವೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.----------------
23ರಂದು ಪಾದಯಾತ್ರೆಸೋಮವಾರಪೇಟೆ: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆ. 23ರಂದು 36ನೇ ವರ್ಷದ ಪಾದಯಾತ್ರೆ ಕೈಗೊಳ್ಳಲಾಗಿದೆ.
ಅಂದು ಬೆಳಗ್ಗೆ 5 ಗಂಟೆಗೆ ಶ್ರೀ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಶಾಂತಳ್ಳಿ ಮಾರ್ಗವಾಗಿ ತೆರಳಲಿರುವುದಾಗಿ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.