ನಾಳೆ ಹಾಸನ ಚಲೋ: ಹೊ.ನ.ಪುರದಿಂದ ಎರಡು ಸಾವಿರ ಜನ ಭಾಗಿ

| Published : May 29 2024, 12:51 AM IST

ನಾಳೆ ಹಾಸನ ಚಲೋ: ಹೊ.ನ.ಪುರದಿಂದ ಎರಡು ಸಾವಿರ ಜನ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ದಿನದಂದು ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತ ಮಹಿಳೆಯರ ಮೇಲೆ ನಡೆದಿರುವ ಅನ್ಯಾಯದ ವಿರುದ್ಧ ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ನೌಕರರು, ಸಾಹಿತಿಗಳು, ಲೇಖಕರು ಹಾಗೂ ಇತರೆ ಸಂಘಟನೆಗಳ ಸಹಕಾರದಲ್ಲಿ ಪ್ರತಿಭಟನೆಯಲ್ಲಿ ಜಿಲ್ಲೆಗೆ ಅಂಟಿರುವ ಕಳಂಕ ನಿವಾರಣೆ ಮಾಡಬೇಕು.

‘ಅಶ್ಲೀಲ ವಿಡಿಯೋ’ ಪ್ರಕರಣದ ಸಂಸದ ಪ್ರಜ್ವಲ್ ಹಾಗೂ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬೃಹತ್ ಧರಣಿ । ನೌಕರರು, ಸಾಹಿತಿಗಳು, ಜನಸಾಮಾನ್ಯರು ಎಲ್ಲರೂ ಪ್ರತಿಭಟನೆಯಲ್ಲಿ ಭಾಗಿಯಾಗಿ, ಜಿಲ್ಲೆಗಂಟಿದ ಕಳಂಕ ನಿವಾರಿಸಲು ಕರೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಹಾಸನದಲ್ಲಿ ಮೇ ೩೦ರಂದು ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ಒಕ್ಕೂಟದ ‘ನಮ್ಮೆಲ್ಲರ ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ, ಪ್ರಜ್ವಲ್ ರೇವಣ್ಣನ ಬಂಧನಕ್ಕೆ ಒತ್ತಾಯಿಸುವ ಜತೆಗೆ ಸಂತ್ರಸ್ತ ಮಹಿಳೆಯರ ಮಾನಹಾನಿಗೆ ಕಾರಣೀಕರ್ತರಾದ ಪೆನ್‌ಡ್ರೈವ್ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಮತ್ತು ಸಂತ್ರಸ್ತೆ ಮಹಿಳೆಯರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ ಎಂದು ದಸಸಂ ತಾಲೂಕು ಅಧ್ಯಕ್ಷ ಚಿನ್ನಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಪ್ರಧಾನಮಂತ್ರಿಗಳು ಸಂಸದ ಪ್ರಜ್ವಲ್ ಅವರನ್ನು ಏಕೆ ಬಂಧಿಸಿಲ್ಲ ಎಂಬುದೇ ತಿಳಿಯುತ್ತಿಲ್ಲ. ಆದರೆ ಅವರಿಗೆ ಎಲ್ಲವೂ ತಿಳಿದಿಲ್ಲವೆಂದು ಹೇಳಲು ಆಗಲ್ಲ, ಆದ್ದರಿಂದ ಮೊದಲಿಗೆ ಪ್ರಜ್ವಲ್ ಅವರನ್ನು ಬಂಧಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ನಮ್ಮ ಸಂಘಟನೆಗಳ ಹೋರಾಟವಿರುತ್ತದೆ ಎಂದರು.

ಡಿಎಸ್‌ಎಸ್ ಮುಖಂಡ ಗೋವಿಂದರಾಜು ಮಾತನಾಡಿ, ಗುರುವಾರ ದಿನದಂದು ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತ ಮಹಿಳೆಯರ ಮೇಲೆ ನಡೆದಿರುವ ಅನ್ಯಾಯದ ವಿರುದ್ಧ ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ನೌಕರರು, ಸಾಹಿತಿಗಳು, ಲೇಖಕರು ಹಾಗೂ ಇತರೆ ಸಂಘಟನೆಗಳ ಸಹಕಾರದಲ್ಲಿ ಪ್ರತಿಭಟನೆಯಲ್ಲಿ ಜಿಲ್ಲೆಗೆ ಅಂಟಿರುವ ಕಳಂಕ ನಿವಾರಣೆ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವು ನಿಜವಾದ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಬೇಕು ಮತ್ತು ವಿಡಿಯೋ ಹಂಚುವ ಮೂಲಕ ಹೆಣ್ಣು ಮಕ್ಕಳ ಮಾನಹಾನಿ ಮಾಡಿದ ಆರೋಪಿಗಳನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು. ಪ್ರತಿಭಟನೆಯಲ್ಲಿ ಭಾಗಿಯಾಗುವ ಹೋರಾಟಗಾರರಿಗೆ ವಾಹನದ ವ್ಯವಸ್ಥೆ ಮತ್ತು ಮಧ್ಯಾಹ್ನದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಡಿಎಸ್‌ಎಸ್ ಮುಖಂಡರಾದ ರವಿಕುಮಾರ್, ಚಂದ್ರಶೇಖರ್, ಬೈರಯ್ಯ ನಗರ್‍ತಿ , ಆನಂದ ಇದ್ದರು.