ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ವೈದ್ಯಕೀಯ ಪರೀಕ್ಷೆಗಳ ಪ್ರಕ್ರಿಯೆಗೆ ತೊಂದರೆಯಾಗದಂತೆ ಅಗತ್ಯ ವಿದ್ಯುತ್ ಬ್ಯಾಕಪ್ ಒದಗಿಸುವುದು ಈ ಕೊಡುಗೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಕ್ಲಿನಿಕ್‌ನಲ್ಲಿ ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಒದಗಿಸಲು ನೆರವಾಗಲಿದೆ. ಮಾಜಿ ಸೈನಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಸೇವೆ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನೆರವು ಮಹತ್ವ ಪಡೆದಿದೆ. ಇ.ಸಿ.ಹೆಚ್.ಎಸ್. ಕ್ಲಿನಿಕ್‌ನ ಉಸ್ತುವಾರಿ ಅಧಿಕಾರಿ ನಿವೃತ್ತ ವಿಂಗ್ ಕಮಾಂಡರ್ ರಾಜು ಹಾಗೂ ಕ್ಲಿನಿಕ್ ಪ್ರತಿನಿಧಿ ಸುಬೇದಾರ್ ಬಲರಾಮ್ ಅವರು ಯುಪಿಎಸ್ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಮಾನವೀಯ ಸೇವಾ ಕಾರ್ಯಕ್ಕೆ ಮುಂದಾಗಿದೆ. ನಗರದ ಮಾಜಿ ಸೈನಿಕರ ಆರೋಗ್ಯ ಸೇವಾ ಕೇಂದ್ರವಾದ ಇ.ಸಿ.ಹೆಚ್.ಎಸ್. ಕ್ಲಿನಿಕ್‌ಗೆ ರಕ್ತ ಪರೀಕ್ಷಾ ಉಪಕರಣಗಳ ನಿರಂತರ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ೧.೫ ಕೆವಿಎ ಸಾಮರ್ಥ್ಯದ ಆನ್‌ಲೈನ್ ಯುಪಿಎಸ್ ಅನ್ನು ಕೊಡುಗೆಯಾಗಿ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ವೈದ್ಯಕೀಯ ಪರೀಕ್ಷೆಗಳ ಪ್ರಕ್ರಿಯೆಗೆ ತೊಂದರೆಯಾಗದಂತೆ ಅಗತ್ಯ ವಿದ್ಯುತ್ ಬ್ಯಾಕಪ್ ಒದಗಿಸುವುದು ಈ ಕೊಡುಗೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಕ್ಲಿನಿಕ್‌ನಲ್ಲಿ ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಒದಗಿಸಲು ನೆರವಾಗಲಿದೆ. ಮಾಜಿ ಸೈನಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಸೇವೆ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನೆರವು ಮಹತ್ವ ಪಡೆದಿದೆ. ಇ.ಸಿ.ಹೆಚ್.ಎಸ್. ಕ್ಲಿನಿಕ್‌ನ ಉಸ್ತುವಾರಿ ಅಧಿಕಾರಿ ನಿವೃತ್ತ ವಿಂಗ್ ಕಮಾಂಡರ್ ರಾಜು ಹಾಗೂ ಕ್ಲಿನಿಕ್ ಪ್ರತಿನಿಧಿ ಸುಬೇದಾರ್ ಬಲರಾಮ್ ಅವರು ಯುಪಿಎಸ್ ಸ್ವೀಕರಿಸಿದರು. ಲಯನ್ಸ್ ಕ್ಲಬ್ ಹಾಸನ್ ಅಧ್ಯಕ್ಷ ವೆಂಕಟೇಶ್ ಜವರಪ್ಪ ಅವರ ನೇತೃತ್ವದಲ್ಲಿ ನಡೆದ ಈ ಸೇವಾ ಕಾರ್ಯದಲ್ಲಿ ಝೋನ್ ಚೇರ್‌ಪರ್ಸನ್ ರಮೇಶ್, ರೀಜನಲ್ ಚೇರ್‌ಮನ್ ನಾಗೇಶ್, ಎಚ್.ಆರ್. ಚಂದ್ರೇಗೌಡ, ಕಿರಣ್ ಕುಮಾರ್ ಸಿ.ಕೆ., ಅಶೋಕ್ ಕುಮಾರ್ ಎಚ್.ಪಿ., ಎಚ್.ಕೆ. ಮಂಜುನಾಥ್ ಹಾಗೂ ಕೆ.ಆರ್. ಮಲ್ಲೇಶ್ ಗೌಡ ಭಾಗವಹಿಸಿದ್ದರು. ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಕೈಗೊಂಡಿರುವ ಈ ಕಾರ್ಯವು ಮಾಜಿ ಸೈನಿಕರ ಆರೋಗ್ಯ ಮತ್ತು ಕಲ್ಯಾಣದ ಬಗ್ಗೆ ಲಯನ್ಸ್ ಕ್ಲಬ್ ಹೊಂದಿರುವ ಕಾಳಜಿಯನ್ನು ಪ್ರತಿಬಿಂಬಿಸಿದೆ. ದೇಶಸೇವೆಯಲ್ಲಿ ತೊಡಗಿದ್ದ ಯೋಧರಿಗೆ ಅಗತ್ಯ ಸೌಲಭ್ಯಗಳ ಮೂಲಕ ನೆರವಾಗುವುದು ಸಮಾಜದ ಜವಾಬ್ದಾರಿಯೂ ಆಗಿದ್ದು, ಇಂತಹ ಸೇವಾ ಕಾರ್ಯಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಪೂರಕವಾಗಿವೆ.