ಸಾರಾಂಶ
ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಕಾರ್ಯದರ್ಶಿ ಹನುಮಂತೇಗೌಡರ ಮಗಳು ಕೆ.ಎಚ್. ಸಿಂಚನ ಡೆಹ್ರಾಡೂನ್ ಇಲ್ಲಿ ನಡೆದ ಏಷ್ಯನ್ ಸಬ್ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೊದಲ ಸುತ್ತಿನಲ್ಲಿ ೮೨.೫ ಕೇಜಿ ಬೆಂಚ್ ಫ್ರೆಸ್, ಎರಡನೇ ಸುತ್ತಿನಲ್ಲಿ ೫೦ ಕೇಜಿ ಡೆಡ್ಲಿಫ್ಟ್ ಹಾಗೂ ಅಂತಿಮ ಸುತ್ತಿನಲ್ಲಿ ೧೧೦ ಕೇಜಿ ಭಾರ ಎತ್ತುವ ಮೂಲಕ ಒಟ್ಟು ೨೪೨.೫ ಕೇಜಿ ಭಾರ ಎತ್ತಿ ಮೊದಲ ಸ್ಥಾನ ಪಡೆಯುವ ಮೂಲಕ ಕರ್ನಾಟಕ ಮತ್ತು ಹಾಸನ ಜಲ್ಲೆಗೆ ಕೀರ್ತಿ ತಂದಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ೨೦೨೫ರ ಮೇ ೫ರಿಂದ ಮೇ ೧೨ರವರೆಗೂ ನಡೆಯುವ ಏಷ್ಯನ್ ಪವರ್ ಲಿಫ್ಟಿಂಗ್ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಾಸನ ಜಿಲ್ಲೆಯ ಕೆ. ಎಚ್. ಸಿಂಚನ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಕಾರ್ಯದರ್ಶಿ ಹನುಮಂತೇಗೌಡರ ಮಗಳು ಕೆ.ಎಚ್. ಸಿಂಚನ ಡೆಹ್ರಾಡೂನ್ ಇಲ್ಲಿ ನಡೆದ ಏಷ್ಯನ್ ಸಬ್ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೊದಲ ಸುತ್ತಿನಲ್ಲಿ ೮೨.೫ ಕೇಜಿ ಬೆಂಚ್ ಫ್ರೆಸ್, ಎರಡನೇ ಸುತ್ತಿನಲ್ಲಿ ೫೦ ಕೇಜಿ ಡೆಡ್ಲಿಫ್ಟ್ ಹಾಗೂ ಅಂತಿಮ ಸುತ್ತಿನಲ್ಲಿ ೧೧೦ ಕೇಜಿ ಭಾರ ಎತ್ತುವ ಮೂಲಕ ಒಟ್ಟು ೨೪೨.೫ ಕೇಜಿ ಭಾರ ಎತ್ತಿ ಮೊದಲ ಸ್ಥಾನ ಪಡೆಯುವ ಮೂಲಕ ಕರ್ನಾಟಕ ಮತ್ತು ಹಾಸನ ಜಲ್ಲೆಗೆ ಕೀರ್ತಿ ತಂದಿದ್ದಾರೆ.