ಸಾರಾಂಶ
ಕನ್ನಡಪ್ರಭ ವಾರ್ತೆ ಆನವಟ್ಟಿ
ಶಾಲಾ ಮಕ್ಕಳ ಕ್ರೀಡಾಕೂಟಗಳನ್ನು ನೋಡಿ ಸಂತಸ ಪಡಬೇಕು, ಅದನ್ನು ಬಿಟ್ಟು ಪೋಷಕರು ಹಾಗೂ ಗ್ರಾಮಸ್ಥರು ದ್ವೇಷ, ಕದನಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ನರೇಂದ್ರ ಒಡೆಯರ್ ಕಿವಿಮಾತು ಹೇಳಿದರು.ಮಂಗಳವಾರ ದೊಡ್ಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಅಗಸನಹಳ್ಳಿ ವಲಯದ 14 ವರ್ಷ ಒಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಟಗಳು ನಡೆಯುವಾಗ ತೀರ್ಪುಗಾರರ ನಿರ್ಣಯಕ್ಕೆ ಬದ್ಧವಾಗಬೇಕು. ಗ್ರಾಮಸ್ಥರು ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ತುಂಬುವ ಜೊತೆಗೆ, ನೋಡುಗರು ಕ್ರೀಡಾ ಮನೋಭಾವನೆಯಿಂದ ನೋಡಿ, ಯಾರೇ ಗೆದ್ದರೂ ನಮ್ಮ ಮಕ್ಕಳೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.ಮೂಡಿ-ದೊಡ್ಡಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಅತಿಥ್ ಒಡೆಯರ್ ಮಾತನಾಡಿ, ವರದಾ ನದಿಯ ನೆರೆ ಹಾವಳಿಯಿಂದ ನೆಲ್ಲಿಕೊಪ್ಪ ಗ್ರಾಮವೇ ಮುಳುಗಡೆಯಾಗುತ್ತಿದ್ದು, ಅಲ್ಲಿನ ಶಾಲೆ ಜಲಾವೃತವಾಗುತ್ತದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗಮನಕ್ಕೆ ತಂದ್ದಿದ್ದೇವೆ. ಶೀಘ್ರವೇ ನೇಲ್ಲಿಕೊಪ್ಪ ಶಾಲೆಯನ್ನು ಸ್ಥಳಾಂತರ ಮಾಡಲಾಗುವುದು. ಮತ್ತು ಈ ಭಾಗದಲ್ಲಿ ಅಗತ್ಯವಿರುವ ಕ್ರೀಡಾಂಗಣ ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ಮಾತನಾಡಿ, ಈ ಭಾಗದ ಮುಖಂಡರು, ಗ್ರಾಮಸ್ಥರು, ಮಕ್ಕಳ ಕ್ರೀಡೆ ನೋಡವ ಜೊತೆಗೆ ಪ್ರಕೃತಿ ಸೌದರ್ಯವನ್ನು ಆನಂದಿಸಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿ, ನೆರವು ನೀಡಿ ಎಲ್ಲರಿಗೂ ಅಭಿನಂದನೆ ತಿಳಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಕಜ್ಜೇರ್, ಕ್ರೀಡಾ ಸಂಚಾಲಕರಾದ ಕೆ.ರಾಜು, ಶಾಂತಕುಮಾರ್, ಸಿದ್ಧಾರೂಢ, ಅಂಜನಾ. ಶ್ವೇತಕುಮಾರಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಮಡ್ಲೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್, ನಿರ್ದೇಶಕ ಕೆ.ಸಿ ಶಿವ ಕುಮಾರ್, ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಶಿಕ್ಷಕ ಸಂಯೋಜಕರಾದ ಪ್ರೇಮ್ ಕುಮಾರ್, ಅರುಣಕುಮಾರ್, ಸಂಜೀವ್ ಕುಮಾರ್, ಸಿಆರ್‌ಪಿಗಳಾದ ಎಂ.ಎಸ್ ಮಂಜುನಾಥ, ವಿಜಯ ಕುಮಾರ್, ರಾಜು ಗಂಜೇರ್, ಸುಮತೇಂದ್ರ, ಮುಖಂಡ ಮಹೇಶ್ ಮೂಡಿ ಇದ್ದರು.