ಸಾರಾಂಶ
- ಬಲಭೀಮರಾವ್ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಹಟ್ಟಿಚಿನ್ನದಗಣಿಎಲ್ಲೇ ಬೆಂಕಿ ಹತ್ತಲಿ, ಕೊಳವೆ ಬಾವಿಗಳ ಅನಾಹುತಗಳಾಗಲಿ, ಭೀಕರ ರಸ್ತೆ ಅಪಘಾತವಾಗಲಿ, ಸಿಲಿಂಡರ್ ಸ್ಫೋಟವಾಗಲಿ, ಭೂಕುಸಿತದಂಥ ಪರಿಣಾಮಗಳಾಗಲಿ ತಕ್ಷಣವೇ ನೆನಪಿಗೆ ಬರುವುದು ಹಟ್ಟಿ ಚಿನ್ನದಗಣಿ ಕಂಪನಿಯ ವಿಪತ್ತು ನಿರ್ವಹಣಾ ತಂಡ.
ಚಿನ್ನದ ಉತ್ಪಾದನೆಯಲ್ಲಿ ಏಕಸ್ವಾಮ್ಯ ಸಾಧಿಸಿದ ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಹಟ್ಟಿಚಿನ್ನದಗಣಿ ಕಂಪನಿಯು ಉತ್ಪಾದನೆ ಜೊತೆಗೆ ಗಣಿ ಕಂಪನಿ ಹಾಗೂ ಹೊರಗಡೆ ವಿಪತ್ತುಗಳಾದಾಗ ರಕ್ಷಣೆಗೆ ಧಾವಿಸಲು 48 ಜನರ ತಂಡವೊಂದು ಸೈನಿಕರೋಪಾದಿಯಲ್ಲಿ 24/7 ಸೇವೆ ಒದಗಿಸುತ್ತಿರುವ ರಾಜ್ಯದ ಏಕೈಕ ತಂಡವಾಗಿದೆ.ರಚನೆ-ನಿರ್ವಹಣೆ ಹೇಗೆ?:
ಗಣಿ ಕಂಪನಿಯ ಗಣಿ ತರಬೇತಿ ಕೇಂದ್ರದಲ್ಲಿ (ವಿಟಿಸಿಯಲ್ಲಿ) ಗಣಿ ವಿಪತ್ತು ನಿರ್ವಹಣೆ ವಿಭಾಗವಿದ್ದು, (ಪಾರುಗಾಣಿಕಾ ಕೊಠಡಿ) ಇದನ್ನು ನವೆಂಬರ್ 1975ರಲ್ಲಿ ಪ್ರಾರಂಭಿಸಲಾಯಿತು. ಗಣಿ ಕಂಪನಿಯ ಭೂ ಕೆಳಮೈನ ಅಧಿಕಾರಿ, ಫೋರಮೆನ್, ಚಾಲಕರು, ಆಪರೇಟರ್ಸ್, ಅಗ್ನಿ ಶಾಮಕ ತಜ್ಞರು ಸೇರಿದಂತೆ ನಾನಾ ವಿಭಾಗಗಳಿಂದ ಆಯ್ದ 28 ಕ್ರಿಯಾಶೀಲ ಪಾರುಗಾಣಿಕಾ ತಜ್ಞರನ್ನಾಗಿ ಆಯ್ಕೆ ಮಾಡಿಕೊಳ್ಳ ಲಾಗು ತ್ತಿತ್ತು. ನಿರಂತರ ಅಭಿವೃದ್ಧಿಯ ಪ್ರಕ್ರಿಯೆಗೆ ಒಳಪಟ್ಟು, ಸದ್ಯ ಪಾರುಗಾಣಿಕಾ ತಜ್ಞರ ಸಂಖ್ಯೆ 48ಕ್ಕೆ ಹೆಚ್ಚಿದೆ. ಸಿಬ್ಬಂದಿ ಜೊತೆ ಡ್ರಾಗರ್ ಬಿಜಿ174, ಡ್ರಾಗರ್ ಪಿಎಸ್ಎಸ್ ಬಿಜಿ 4 ಪ್ಲಸ್, ಫ್ರೆಶ್ ಏರ್ ಬ್ಲೋವರ್ ಹೋಸ್ ಆಪರೇಟರ್ಸ್, ರಿವೈವಿಂಗ್ ಆಪರೇಟರ್ಸ್, ಆಕ್ಸಿಜನ್ ಬೂಸ್ಟರ್ ಹೈಪ್ರಶರ್ ಪಂಪ್, ಗ್ಯಾಸ್ ಟೆಸ್ಟಿಂಗ್ ಉಪಕರಣಗಳು, ಗಾಳಿ ಮತ್ತು ತಾಪಮಾನ ಮಾಪಕ, ಅಪಾರೇಟಿಸ್ ಟೆಸ್ಟಿಂಗ್ ಉಪಕರಣಗಳು, ಅಗ್ನಿಶಾಮಕ ಉಪಕರಣಗಳು ಹಾಗೂ ಸಂವಹನ ಮತ್ತು ಸಿಗ್ನಲಿಂಗ್ ಸಲಕರಣೆಗಳು ಸೇರಿ 48 ಜನ ಶಸ್ತ್ರ ಸಜ್ಜಿತ ಪಾರುಗಾಣಿಕರು ನಾನಾ ಸಮಸ್ಯೆಗಳಿಗೆ ಸನ್ನದ್ಧರಾಗಿರುತ್ತಾರೆ.ಆಯ್ಕೆ-ತರಬೇತಿ:
ಗಣಿ ಕಂಪನಿಯ ನಾನಾ ವಿಭಾಗಗಳಿಂದ ದೈಹಿಕ, ಮಾನಸಿಕ, ಸಧೃಢತೆ ಹಾಗೂ ಪ್ರಥಮ ಚಿಕಿತ್ಸೆ ತರಬೇತಿಯಲ್ಲಿ ನಿಪುಣರಾದ 21ರಿಂದ 30 ವಯಸ್ಸಿನೊಳಗಿನ ಕ್ರಿಯಾಶೀಲ 48 ಜನರನ್ನು ಪಾರುಗಾಣಿಕರನ್ನಾಗಿ ಆಯ್ಕೆಗೊಳಿಸಿ, ಪ್ರಥಮ ಹಂತದಲ್ಲಿ ತೆಲಂಗಾಣ ರಾಜ್ಯದ ಭದ್ರಾದ್ರ ಜಿಲ್ಲೆಯ ಶಿಂಗ್ರಾಣಿ ಕಲ್ಲಿದ್ದಲು ಗಣಿಗೆ ತರಬೇತಿಗೆ ಕಳುಹಿಸಲಾಗುತ್ತದೆ. ನಂತರದಲ್ಲಿ ತಿಂಗಳಿಗೊಮ್ಮೆ ಗಣಿಯಲ್ಲಿ ತರಬೇತಿ ನೀಡಿ ಸನ್ನದ್ಧಗೊಳಿಸಲಾಗುತ್ತಿದೆ.ಎಲ್ಲೆಲ್ಲಿ ಸೇವೆ: ರಾಜ್ಯ ಸರ್ಕಾರ, ಜಿಲ್ಲಾಡಳಿತ ಮನವಿ ಮೇರೆಗೆ ಗಣಿ ಕಂಪನಿಯ ವಿಪತ್ತು ನಿರ್ವಹಣಾ ತಂಡವು ಮಾನವಿ ಮತ್ತು ಬಾಗಲಕೋಟೆಯ ಕೊಳವೆ ಬಾವಿ ಅನಾಹುತ, ಹಟ್ಟಿ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಉಂಟಾದ ಸಿಲಿಂಡರ್ ಸ್ಫೋಟ, ಅಪಘಾತಗಳು ನಡೆದಾಗ ಮತ್ತು ವಾಹನಗಳು, ವ್ಯಕ್ತಿಗಳು ಕಲ್ಲಿನಡಿ ಸಿಕ್ಕಿ ಬಿದ್ದಾಗ ಕಲ್ಲು ಕೊರೆಯುವ ಮಷಿನ್ನಿನಿಂದ ಕೊರೆದು ಜೀವದ ಹಂಗು ತೊರೆದು ಗಣಿ ಕಂಪನಿ ತನ್ನ ಸಾಮಾಜಿಕ ಜವಾಬ್ದಾರಿ ಅಡಿ ಕಾರ್ಯ ನಿರ್ವಹಿಸಿರುವುದು ಶ್ಲಾಘನಾರ್ಹವಾಗಿದೆ.
ಯೋಜನೆ ವಿಮರ್ಶೆ:ವಿಪತ್ತು ನಿರ್ವಹಣಾ ತಂಡವಿರುವುದು ರಾಜ್ಯದಲ್ಲಿ ಹಟ್ಟಿ ಗಣಿಯಲ್ಲಿ ಮಾತ್ರ, ಹಿಂದೆ ಕೆಜಿಎಫ್ ಗಣಿಯಲ್ಲಿದ್ದು, ಗಣಿ ಸ್ಥಗಿತಗೊಂಡ ನಂತರ ಈಗ ಹಟ್ಟಿಯಲ್ಲಿ ಮಾತ್ರವಿದೆ. ಆದರೆ ಸುರಕ್ಷಿತ ನಿರ್ವಹಣಾ ಯೋಜನೆಯ ವಿಮರ್ಷೆಗೆ ಒಳಪಟ್ಟ ಭಾರತದ ಮೊದಲ ಭೂಕೆಳಮೈ ಹಟ್ಟಿ ಗಣಿ ಎಂದು ಬಳ್ಳಾರಿಯ ಗಣಿ ಸುರಕ್ಷತೆ ನಿರ್ದೇಶಕ ಲಕ್ಷ್ಮೀ ನಾರಾಯಣ, ಉಪಗಣಿ ಸುರಕ್ಷತೆ ನಿರ್ದೇಶಕ ನಾಗೇಶ್ವರರಾವ್ ನಾಮ ನಿರ್ದೇಶನ ಮಾಡಿರುವುದು ಹಟ್ಟಿ ಗಣಿಯ ಹೆಗ್ಗಳಿಕೆ.
-------------ಬಾಕ್ಸ್
ರಾಷ್ಟ್ರೀಯ ಪ್ರಶಸ್ತಿ ಗರಿದೇಶದಲ್ಲಿರುವ ಗಣಿಗಳ ಬಗ್ಗೆ ಉನ್ನತ ಮಟ್ಟದ ಸುರಕ್ಷತೆ ಬಗ್ಗೆ ಅಧ್ಯಯನ ಮಾಡುವ ಕೇಂದ್ರ ಸರಕಾರದ (ಡಿಜಿಎಂಎಸ್) ಡೈರೆಕ್ಟರ್ ಜನರಲ್ ಆಫ್ ಮೈನ್ಸ್ ಆ್ಯಂಡ್ ಸೇಫ್ಟಿ ಸಂಸ್ಥೆಯ ಹೈಪವರ್ ಸಮಿತಿ, ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಉತ್ಪಾದನೆ, ಉತ್ಪಾದಕತೆ ಜತೆಗೆ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಿ, ಕಂಪನಿಯು ಭೂ ಕೆಳಮೈ ಗಣಿಗಾರಿಕೆಯಲ್ಲಿ ಅತ್ಯಂತ ಪರಿಣಾಮಕಾರಿಯಾದ ಸುರಕ್ಷತೆ ವಹಿಸಿದೆ ಎಂದು ತಿಳಿಸಿದೆ. 2017ರಲ್ಲಿ ಸುರಕ್ಷತೆ ಅನುಸರಿಸಿದ್ದರಿಂದ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ಗಣಿ ಸುರಕ್ಷಾ ಸಂಸ್ಥೆಯವರು ಒಡಿಶಾ ರಾಜ್ಯದ ಭ್ರಜಾರಾಜ ನಗರದಲ್ಲಿ 2019ರ ನವೆಂಬರ್‌ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಗಣಿ ಮತ್ತು ವಿಪತ್ತು ನಿರ್ವಹಣೆ ಕಾರ್ಯ ಕ್ರಮದಲ್ಲಿ ಪ್ರಥಮ ಸ್ಥಾನ ಒದಗಿ ಬಂದಿದೆ.
-------------ಕೋಟ್:
ಹಟ್ಟಿಗಣಿ ದೇಶದ ಮೊದಲ ಭೂಗತಗಣಿಯಾಗಿದೆ. ಒಬ್ಬ ಕಾರ್ಮಿಕನಿಗೆ ಅವಘಡವಾದರೆ ಗಣಿ, ದೇಶಕ್ಕೆ ನಷ್ಟವಾದಂತೆ. ಸುರಕ್ಷತೆ ನಮ್ಮ ಪ್ರಥಮ ಆದ್ಯತೆ, ಅವಘಡಗಳನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಗಣಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪನಿಯ ಪಾರುಗಾಣಿಕ ತಜ್ಞರು ಸೈನಿಕ ರೋಪಾದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗಣಿ ಕಂಪನಿಗೆ ರಾಷ್ಟಮಟ್ಟದಲ್ಲಿ ಪ್ರಶಸ್ತಿಗಳು ಸಿಕ್ಕಿವೆ. ಕೀರ್ತಿ ಅಧಿಕಾರಿ-ಕಾರ್ಮಿಕ ವರ್ಗಕ್ಕೆ ಸಲ್ಲುತ್ತದೆ.- ಪ್ರಕಾಶ ರಾಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು, ಹಚಿಗ ಕಂಪನಿ
-------------29ಹಟ್ಟಿಚಿನ್ನದಗಣಿ1 : ಪ್ರಥಮ ಚಿಕಿತ್ಸೆ ತರಬೇತಿಗೆ ಅವಶ್ಯವಾದ ಗಣಿ ಕಂಪನಿ ಕಾರ್ಮಿಕನ ಸಮವಸ್ತçಧಾರಿ ಗೊಂಬೆ.
29ಹಟ್ಟಿಚಿನ್ನದಗಣಿ2 :20ಲಕ್ಷ ಬೆಲೆಯ ಡ್ರಾಗರ್ ಬಿಜಿ 174 ಆಕ್ಸಿಜನ್ ಬೂಸ್ಟರ್ ಹೈಪ್ರಶರ್ ಪಂಪ್ಗಳು.29ಹಟ್ಟಿಚಿನ್ನದಗಣಿ 3: ಕಂಪನಿಯ ವಿಪತ್ತು ನಿರ್ವಹಣಾ ತಂಡಕ್ಕೆ ಓರಿಸ್ಸಾ ರಾಜ್ಯದಲ್ಲಿ ಕಳೆದ ತಿಂಗಳು ಪ್ರಥಮ ಚಿಕಿತ್ಸೆ ಹಾಗೂ ಪ್ರೆಸ್ ಏರ್ ಬೇಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡದವರು.
29ಹಟ್ಟಿಚಿನ್ನದಗಣಿ4: ಹಟ್ಟಿಚಿನ್ನದ ಗಣಿ ಕಂಪನಿಯ ಮೋನೋಗ್ರಾಂ.29ಹಟ್ಟಿಚಿನ್ನದಗಣಿ5:ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ರಾಯಮಾಜಿ.