ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ತೊಂದರೆಯಲ್ಲಿರುವವರಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಸ್ವಾರ್ಥ ಸೇವೆ ಎಂದು ಆರ್ಟ ಆಫ್ ಗಿವಿಂಗ್ ಫೌಂಡೇಶನ್‌ನ ರಾಷ್ಟ್ರೀಯ ರಾಯಭಾರಿ ಶಿಫಾ ಜಮಾದಾರ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ತೊಂದರೆಯಲ್ಲಿರುವವರಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಸ್ವಾರ್ಥ ಸೇವೆ ಎಂದು ಆರ್ಟ ಆಫ್ ಗಿವಿಂಗ್ ಫೌಂಡೇಶನ್‌ನ ರಾಷ್ಟ್ರೀಯ ರಾಯಭಾರಿ ಶಿಫಾ ಜಮಾದಾರ ಅಭಿಪ್ರಾಯಪಟ್ಟರು.ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಸಭಾಭವನದಲ್ಲಿ ಆರ್ಟ ಆಫ್ ಗಿವಿಂಗ್ ಫೌಂಡೇಶನ್ ಹಾಗೂ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ನೆರೆಯವರ ಉತ್ತಮ ಬಾಂಧವ್ಯ ಎಂಬ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಂದರ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಸೇವಾಮನೋಭಾವ, ನೆರೆಯವರ ಜೊತೆ ಸೌಹಾರ್ದತೆಯನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು. ಬಂದಾಗ ಚಿಕ್ಕ ಚಿಕ್ಕ ಆನಂದವನ್ನು ಸವಿಯಬೇಕು. ಸಹಾಯ ಮಾಡಿದಾಗ ಅದರ ಫಲ ನಮಗೆ ದ್ವಿಗುಣ ರೀತಿಯಲ್ಲಿ ಮರಳಿ ಸಿಗುತ್ತದೆ ಎಂದರು.
ಆರ್ಟ ಆಫ್ ಗಿವಿಂಗ್ ಫೌಂಡೇಶನ್‌ನ ರಾಷ್ಟ್ರೀಯ ಸಂಯೋಜಕ ಡಾ.ಜಾವೀದ ಜಾಮದಾರ ಮಾತನಾಡಿ, ಓಡಿಸ್ಸಾದ ಭುವನೇಶ್ವರ ನಗರದಲ್ಲಿ ಡಾ.ಅಚ್ಯುತಾ ಸಾಮಂತ ಎಂಬ ವ್ಯಕ್ತಿ ೪೦ ಸಾವಿರ ಮಕ್ಕಳಿಗೆ ದೇಶಾದ್ಯಾಂತ ೯೦ ಸಾವಿರ ಮಕ್ಕಳಿಗೆ ಕೆಜಿ ಯಿಂದ ಪಿಜಿ.ವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅದರಂತೆ ಆರ್ಟ ಆಫ್ ಗಿವಿಂಗ್ ಫೌಂಡೇಶದ್ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಒಬ್ಬರಿಗೊಬ್ಬರಿಗೆ ಸಹಾಯ ಮಾಡುವುದು ಅತ್ಯವಶ್ಯಕ ಸಮಾಜದಲ್ಲಿ ಬದುಕಲು ಪರಸ್ಪರ ಸಹಾಯ ಸಹಕಾರ ಅನಿವಾರ್ಯ. ನಾವು ಮಾಡುವ ಚಿಕ್ಕ ಸಹಾಯಗಳು ಕೂಡ ಬೇರೆಯವರ ಜೀವನವನ್ನು ಉತ್ತಮ ಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳು ಸ್ವಾವಲಂಬಿಗಳಾಗುವದರ ಜೊತೆಗೆ ಬೇರೆಯವರಿಗೆ ಸಹಾಯ ಮಾಡುವ ಸಂಸ್ಕೃತಿ ಮತ್ತು ಮನೋಭಾವ ಬೆಳೆಸಿಕೊಳ್ಳಬೇಕು. ಇರುವ ಅವಕಾಶಗಳನ್ನು ಬಳಸಿಕೊಂಡು ಸೇವೆಯೇ ನಮ್ಮ ಮಾನವ ಧರ್ಮ ಎಂದು ಅರ್ಥ ಮಾಡಿಕೊಳ್ಳಬೇಕು. ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆದರೆ ನಿಸ್ವಾರ್ಥ ಸಮಾಜ ಕಟ್ಟಬಹುದು ಎಂದರು.
ಪ್ರೊ.ಅಶೋಕ ಸುರಪೂರ, ಪ್ರೊ.ವಿಷ್ಣು ಶಿಂಧೆ, ಪ್ರೊ.ಕಲಾವತಿ ಕಾಂಬಳೆ ಮಾತನಾಡಿದರು. ಕಾರ್ಯನಿರ್ವಾಹಕ ಅಭಿಯಂತಕ ಎಂ.ಪಿ.ಕದಮ, ಡಾ.ಪ್ರಜಾಪತಿ, ಡಾ.ಗುಲಾಬ ರಾಠೋಡ, ಪ್ರೀತಿ ಪತ್ತಾರ, ಯುಸೂಫ ಕೊಟ್ಟಲ ಉಪಸ್ಥಿತರಿದ್ದರು. ಪೂಜಾ ಬಿರಾದಾರ ಸ್ವಾಗತಿಸಿದರು. ಭಾಗ್ಯಶ್ರೀ ಕೋಲಕಾರ ವಂದಿಸಿದರು. ಅರ್ಚನಾ ನಿರೂಪಿಸಿದರು.