ಹಾವೇರಿ ಲೋಕಸಭಾ ಕ್ಷೇತ್ರ: ಶೇ.೭೭.೫೭ರಷ್ಟು ಮತದಾನ

| Published : May 08 2024, 01:02 AM IST

ಹಾವೇರಿ ಲೋಕಸಭಾ ಕ್ಷೇತ್ರ: ಶೇ.೭೭.೫೭ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರದಾದ್ಯಂತ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಅಂದಾಜು ಶೇ. ೭೭.೫೭ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಾದ್ಯಂತ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಅಂದಾಜು ಶೇ. ೭೭.೫೭ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.ಕಳೆದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಶೇ.೭೧.೫೯ರಷ್ಟು ಹಾಗೂ ೨೦೧೯ರ ಚುನಾವಣೆಯಲ್ಲಿ ಶೇ. ೭೪.೦೧ರಷ್ಟು ಮತದಾನವಾಗಿತ್ತು. ಪ್ರಸಕ್ತ ತೀವ್ರ ಬೇಸಿಗೆಯ ಬಿಸಿಲ ತಾಪದ ನಡೆಯೂ ಶೇ. ೭೭.೫೭ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.೩.೫೬ರಷ್ಟು ಮತದಾನ ಹೆಚ್ಚಳವಾಗಿದೆ. ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೯.೭೭ರಷ್ಟು ಮತದಾನವಾಗಿದೆ. ಶೇ.೪.೨೨ರಷ್ಟು ಹೆಚ್ಚಳವಾಗಿದೆ. ಕಳೆದ ಚುನಾವಣೆಗಿಂತ ಶೇ.೬ರಷ್ಟು ಹೆಚ್ಚಳ ಗುರಿಯೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿತ್ತು.ಬೆಳಗ್ಗೆ ೭ರಿಂದ ೯ ಗಂಟೆ ಅವಧಿಯಲ್ಲಿ ಶೇ.೮.೬೨, ಬೆಳಗ್ಗೆ ೯ರಿಂದ ೧೧ ಗಂಟೆಗೆವರೆಗೆ ಶೇ.೨೪.೨೪ರಷ್ಟು, ಮಧ್ಯಾಹ್ನ ೧ ಗಂಟೆಗೆವರೆಗೆ ಶೇ.೪೩.೨೬, ಮಧ್ಯಾಹ್ನ ೩ ಗಂಟೆಗೆ ಶೇ. ೫೮.೪೫ರಷ್ಟು , ಸಂಜೆ ೫ ಗಂಟೆಗೆ ವೇಳೆಗೆ ಶೇ.೭೧.೯ ರಷ್ಟು ಮತದಾನವಾಗಿದ್ದು, ಸತತ ಏರಿಕೆ ಕ್ರಮದಲ್ಲಿ ಮತದಾನದ ಪ್ರಗತಿ ಕಂಡುಬಂದಿತು.ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೭೨.೦೨, ಗದಗ ಕ್ಷೇತ್ರದಲ್ಲಿ ಶೇ.೭೪.೨೫, ರೋಣ ಕ್ಷೇತ್ರದಲ್ಲಿ ಶೇ.೭೩.೧೩, ಹಾನಗಲ್ಲ ಕ್ಷೇತ್ರದಲ್ಲಿ ಅಂದಾಜು ಶೇ.೮೨.೩೫, ಹಾವೇರಿ ಕ್ಷೇತ್ರದಲ್ಲಿ ಶೇ.೭೭.೨೪, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೮೧.೯೭, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮೨.೬೨ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೭೮.೪೮ ರಷ್ಟು ಮತದಾನವಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮೨.೬೭ರಷ್ಟು ಹೆಚ್ಚು ಮತದಾನವಾದರೆ ಶಿರಹಟ್ಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.೭೨.೦೨ ರಷ್ಟು ಮತದಾನ ದಾಖಲಾಗಿದೆ.