ಹಿಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಅಂದಿದ್ದರು: ಪ್ರೀತಂ ಗೌಡ

| Published : Feb 13 2024, 12:45 AM IST

ಹಿಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಅಂದಿದ್ದರು: ಪ್ರೀತಂ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ತಮ್ಮನ್ನು ಅವರ ತಮ್ಮ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿ ಎಂದು ಪ್ರಚಾರ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹಾಸನದಲ್ಲಿ ತಿರುಗೇಟು ನೀಡಿದರು.

ಸಹೋದರ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು । ಮುಂದೆ ಏನು ಹೇಳುತ್ತಾರೋ? ಗೊತ್ತಿಲ್ಲ

ಕನ್ನಡಪ್ರಭ ವಾರ್ತೆ ಹಾಸನ

ಇಂದು ತಮ್ಮನ್ನು ಅವರ ತಮ್ಮ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿ ಎಂದು ಪ್ರಚಾರ ಮಾಡಿದ್ದರು. ಇಂದು ತಮ್ಮ ಎನ್ನುವವರು ಮುಂದೆ ಏನನ್ನುತ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ತಿರುಗೇಟು ನೀಡಿದರು.

ನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ‘ನಾನು ಏನು ಮಾಡಬೇಕೆಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಅದನ್ನು ಬೇರೆ ಪಕ್ಷದವರು ಹೇಳವಂತಹ ಅವಶ್ಯಕತೆ ಇಲ್ಲ. ೨೦೨೩ ರಲ್ಲಿ ಪ್ರೀತಂಗೌಡರನ್ನು ಸೋಲಿಸಿ ಎಂದು ಹೇಳಿದಾಗಲೂ ಹಾಸನದ ಜನ ೭೮ ಸಾವಿರ ಮತ ಹಾಕಿದ್ದಾರೆ. ೭೮ ಸಾವಿರ ಮತಗಳು ಪ್ರೀತಂಗೌಡ ಪರವಾಗಿ, ಅವರ ವಿರುದ್ಧವಾಗಿ ಬಿದ್ದಿರುವ ಮತಗಳು ಎಂಬುದನ್ನು ಅವರ ನೆನಪಿನಲ್ಲಿ ಇಟ್ಟುಕೊಳ್ಳಲಿ. ೮೪ ಸಾವಿರ ಮತಗಳನ್ನು ಅವರ ಅಭ್ಯರ್ಥಿ ಪಡೆದಿದ್ದಾರೆ. ಅವರ ಪಕ್ಷದ ಅಭ್ಯರ್ಥಿ ಗೆದ್ದಿರೋದು, ಬಿಜೆಪಿ ಸೋಲುಬೇಕು ಎಂದು ಮತ ಹಾಕಿರುವುದರಿಂದ, ನನಗೆ ಬಂದಿರುವ ಮತಗಳು ಪ್ರೀತಂಗೌಡ ಗೆಲ್ಲಸಿಬೇಕು ಎಂದು ಬಂದಿವೆ’ ಎಂದು ಕುಹಕವಾಡಿದರು.

‘೨೦೨೩ರಲ್ಲಿ ಸೋಲಿಸಿ ಅಂದಿದ್ದಾರೆ, ಈಗ ತಮ್ಮ ಅಂತಿದ್ದಾರೆ. ೨೦೨೮ ರಲ್ಲಿ ಏನು ಅಂತಾರೆ ಗೊತ್ತಿಲ್ಲ. ರಾಜಕಾರಣದಲ್ಲಿ ಅಣ್ಣ ತಮ್ಮ ಆಗಲು ಆಗುವುದಿಲ್ಲ. ಅವರ ತಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡಿರುತ್ತಾರೆ, ಅವರ ತಮ್ಮನ ಹತ್ತಿರ ಮಾತನಾಡಿಕೊಳ್ಳಲಿ. ಅವರು ಶಕ್ತಿ ಏನಿದೆ ಅದನ್ನು ನೋಡಲಿ. ನಮ್ಮ ನಾಯಕರು ಏನು ಹೇಳ್ತಾರೆ, ಮಾರ್ಗದರ್ಶನ ಕೊಡ್ತಾರೆ ಆ ಕೆಲಸ ಮಾಡುತ್ತೇನೆ. ಯುವಕ ಅಂತಾರೆ, ಯುವಕ ಆಗಿರುವುದಕ್ಕೆ ೭೮ ಸಾವಿರ ಮತ ಬಂದಿವೆ. ಎಂಪಿ ಚುನಾವಣೆ ಆದ್ಮೇಲೆ ಬೂತ್ ತೆಗೆದು ನೋಡಿದ್ರೆ ಪ್ರತಿಯೊಬ್ಬರ ಶಕ್ತಿ ಏನು ಅನ್ನೋದು ಈಗಿರುವ ಶಾಸಕರಿಗೂ ಗೊತ್ತಾಗುತ್ತದೆ. ನನ್ನ ವಿರುದ್ಧ ಬಂದು ಚುನಾವಣೆ ಮಾಡಿದವರಿಗೂ ನನ್ನ ನೈಜ ಶಕ್ತಿ ಏನು ಅನ್ನೋದು ಗೊತ್ತಾಗುವುದು. ನಾನು ಯುವಕನಾಗಿ ಹುಮ್ಮಸ್ಸಿನಿಂದ, ಬಿರುಸಿನಿಂದ ಮಾತನಾಡಿದ್ರು ಅದರಲ್ಲಿ ಬದ್ಧತೆ ಇರುತ್ತದೆ. ಬದ್ದತೆ ಇದ್ದರೆ ಮಾತ್ರ ಮಾತನಾಡುತ್ತೇನೆ. ನಮ್ಮ ಪಕ್ಷ ಗೆಲ್ಲಬೇಕು, ನಮ್ಮ ಪಕ್ಷ ಗಟ್ಟಿಯಾಗುವುದು ಮುಖ್ಯ’ ಎಂದು ಹೇಳಿದರು.

ಕಳೆದ ಒಂದು ದಿನಗಳ ಹಿಂದೆ ನಡೆದ ಬಿಜೆಪಿ ಮುಖಂಡರ ಸಭೆಯು ಯಶಸ್ವಿಯಾಗಿ ನಡೆದಿದೆ. ಈ ಸಭೆಯಲ್ಲಿ ಚರ್ಚೆ ಮಾಡಿರುವುದನ್ನು ಏನನ್ನೂ ಹೇಳಬೇಡಿ ಎಂದು ನಿರ್ದೇಶನ ಇರುವುದರಿಂದ ಹೇಳುವುದಿಲ್ಲ ಎಂದು ಅಮಿತ್ ಶಾ ಜತೆ ನಡೆದ ಸಭೆಯ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರೀತಂಗೌಡ ಉತ್ತರಿಸಿದರು.

ಬಿಜೆಪಿ ಮುಖಂಡರಾದ ಕಿರಣ್, ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ ಇದ್ದರು.ಹಾಸನ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ.