ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಂತ್ರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಕಾರಿಯಾಗುವ ಉದ್ದೇಶದಿಂದ ಎಚ್‌ಡಿಎಫ್‌ಸಿ ಲೈಫ್‌ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ 40 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

ಉಡುಪಿ: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಂತ್ರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಕಾರಿಯಾಗುವ ಉದ್ದೇಶದಿಂದ ಎಚ್‌ಡಿಎಫ್‌ಸಿ ಲೈಫ್‌ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ 40 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎಚ್‌ಡಿಎಫ್‌ಸಿ ಲೈಫ್‌ ಸಂಸ್ಥೆಯ ಪ್ರತಿನಿಧಿಗಳು ಬ್ಯಾರಿಕೇಡ್‌ಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಹಸ್ತಾಂತರಿಸಿದರು. ಈ ಸಂದಭ೯ದಲ್ಲಿ ಮಲ್ಪೆ ಸಿಪಿಐ ರಾಮಚಂದ್ರ ನಾಯಕ್, ಟ್ರಾಫಿಕ್ ಪಿಎಸ್‌ಐ ಮಹೇಶ್, ಎಚ್‌ಡಿಎಫ್‌ಸಿ ಲೈಫ್‌ ಉಡುಪಿ ಶಾಖಾ ವ್ಯವಸ್ಥಾಪಕ ಭರತ್, ವ್ಯವಹಾರ ವ್ಯವಸ್ಥಾಪಕ ಸಂದೀಪ್ ನಾಯಕ್, ಮಾರಾಟ ವ್ಯವಸ್ಥಾಪಕರಾದ ನಂದಾ ದೀಪ, ಶೈಲೇಶ್ ಶೆಟ್ಟಿ, ಹಾಗೂ ಆಯೋಜಕರಾದ ಯೊಗೀಶ್ ಅವರು ಭಾಗವಹಿಸಿದ್ದರು.