ಆಟೋ ನಿಲ್ದಾಣದ ಸಲಕರಣೆಗಳನ್ನು ನಗರಸಭೆ ಆಯುಕ್ತೆ ರಾಧಿಕಾ ವಶಪಡಿಸಿಕೊಂಡ ಸಮಯದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು-ಕಾರ್ಯಕರ್ತರು ಆ.೧೪ರಂದು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಸಾರಿಗೆ ಬಸ್‌ನಿಲ್ದಾಣದ ಬಳಿ ನಿರ್ಮಿಸಲುದ್ದೇಶಿಸಿದ್ದ ಆಟೋ ನಿಲ್ದಾಣದ ನಿರ್ಮಾಣ ಸಲಕರಣೆಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೆಹಲಿಯಿಂದಲೇ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಇಷ್ಟು ದಿನವಾದರೂ ಏನು ಮಾಡುತ್ತಿದ್ದೀರಿ. ಆಟೋ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡಿಲ್ಲವೇಕೆ ಎಂದು ಪ್ರಶ್ನಿಸಿದಾಗ, ಫುಟ್‌ಪಾತ್ ಪಾದಚಾರಿಗಳಿಗೆ ತೊಂದೆಯಾಗುತ್ತದೆಂಬ ಹಳೆಯ ವಾದವನ್ನು ಮುಂದಿಟ್ಟರು. ಆ ಸ್ಥಳಕ್ಕೆ ಬದಲಾಗಿ ಪರ್ಯಾಯ ಸ್ಥಳದಲ್ಲಿ ನಿರ್ಮಾಣ ಮಾಡುವಂತೆ ಪ್ರಸ್ತಾವನೆ ಮುಂದಿಟ್ಟರು.
ಇದರಿಂದ ಕೋಪಗೊಂಡ ಎಚ್.ಡಿ.ಕುಮಾರಸ್ವಾಮಿ ಅವರು, ನೀವೆಲ್ಲಾ ಜಿಲ್ಲಾ ಮಂತ್ರಿ, ಮದ್ದೂರಿನ ಶಾಸಕರ ಮಾತಿನಂತೆ ನಡೆಯುತ್ತಿದ್ದೀರಿ. ನನಗೂ ರಾಜಕೀಯ ಮಾಡಲು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.ಆಟೋ ನಿಲ್ದಾಣದ ಸಲಕರಣೆಗಳನ್ನು ನಗರಸಭೆ ಆಯುಕ್ತೆ ರಾಧಿಕಾ ವಶಪಡಿಸಿಕೊಂಡ ಸಮಯದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು-ಕಾರ್ಯಕರ್ತರು ಆ.೧೪ರಂದು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರು. ಹತ್ತು ದಿನದಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಭರವಸೆ ನೀಡಿದ್ದರು.
ಆ ನಂತರ ನಡೆದ ದಿಶಾ ಸಭೆಯಲ್ಲೂ ಆಟೋ ನಿಲ್ದಾಣ ವಿಚಾರ ಚರ್ಚೆಗೆ ಬಂದು ಅಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಪೌರಾಯುಕ್ತರ ವಿರುದ್ಧ ಹರಿಹಾಯ್ದಿದ್ದನ್ನು ಇಲ್ಲಿ ಸ್ಮರಿಸಬಹುದು.ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ‘ಹೈ’ ನೋಟಿಸ್
ಕನ್ನಡಪ್ರಭ ವಾರ್ತೆ ಮಂಡ್ಯಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮತ್ತು ಆರ್ಥಿಕ ಹೊಣೆಗಾರಿಕೆ ಮುಚ್ಚಿಟ್ಟ ಆರೋಪದಡಿ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.೨೦೨೩ರ ವಿಧಾನಸಭಾ ಚುನಾವಣೆಯ ಪ್ರಮಾಣಪತ್ರ ಪ್ರಶ್ನಿಸಿ, ಮೈಸೂರಿನ ನಿವಾಸಿ ಎಂ.ಡಿ.ಆದಿಶ್ ಸಾಗರ ಎಂಬುವವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜೆ ಸಲ್ಲಿಸಿದ್ದರು.ಗುರುವಾರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು, ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಮೈಸೂರು ತಾಲೂಕಿನ ಬೋಗಾದಿ ಗ್ರಾಮದ ಎರಡು ಜಮೀನುಗಳ ಮಾಲೀಕತ್ವ ಮುಚ್ಚಿಟ್ಟಾರೆ. ಸರ್ವೇ ನಂಬರ್ ೭೮/೪ ಮತ್ತು ೭೮/೫ರ ಜಮೀನುಗಳ ಮಾಹಿತಿ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದು ಆದಿಶ್ ಸಾಗರ್ ಆರೋಪ ಮಾಡಿದ್ದರು. ಅಲ್ಲದೇ, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದರು.
ವಾದ ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಪೀಠ ಕರ್ನಾಟಕ ಚುನಾವಣಾ ಆಯೋಗ ಹಾಗೂ ರಮೇಶ್ ಬಂಡಿಸಿದ್ದೇಗೌಡರಿಗೆ ತುರ್ತು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನ ಅ.೧೫ಕ್ಕೆ ಮುಂದೂಡಲಾಗಿದೆ.