ಸಾರಾಂಶ
ಜಿಲ್ಲೆಯ ಯಶಸ್ವಿ ಜನನಾಯಕರಾಗಿ ಜನಮಾನಸದಲ್ಲಿ ಉಳಿದಿರುವ ದಿ.ಕೆ.ವಿ.ಶಂಕರೇಗೌಡರು, ಜಿ.ಮಾದೇಗೌಡರು,ಎಚ್.ಕೆ.ವೀರಣ್ಣಗೌಡರು, ಅಂಬರೀಶ್, ಆತ್ಮೀಯರಾಗಿದ್ದ ಎಸ್.ಡಿ.ಜಯರಾಮು, ಕೆ.ಎಸ್.ಪುಟ್ಟಣ್ಣಯ್ಯ ಇವರ ಆದರ್ಶಗಳನ್ನು ನಾವೆಂದೂ ಮರೆಯುವುದಿಲ್ಲ. ನಿಮ್ಮ ಮೇಲೆ ಇಟ್ಟಿದ್ದ ಪ್ರೀತಿಯನ್ನು ನಾನು ಮುಂದುವರೆಸಿಕೊಂಡು ಹೋಗಲು ಇಚ್ಛಿಸಿದ್ದೇನೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರು ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದ ಶಾಂತಿಧಾಮದಲ್ಲಿರುವ ಕಾವೇರಿ ಹೋರಾಟಗಾರ ದಿ.ಜಿ.ಮಾದೇಗೌಡರ ಸ್ಮಾರಕ ಹಾಗೂ ಚಿತ್ರನಟ ಅಂಬಿ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ದಿ.ಅಂಬರೀಶ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಪೂಜಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಮಂಡ್ಯ ಜಿಲ್ಲೆ ನನ್ನ ಕರ್ಮಭೂಮಿ. ನಾನು ಹೊರಗಿನವನಲ್ಲ. ಮಂಡ್ಯ ಜಿಲ್ಲೆಯ ಮಗನಿದ್ದಂತೆ. ನಿಮ್ಮ ಸೇವೆಗೆ ಸದಾ ಬದ್ದನಾಗಿರುತ್ತೇನೆ ಎಂದು ಭರವಸೆ ನೀಡಿದರು.ಈಗಾಗಲೇ ನನ್ನ ಮೇಲೆ ವಿಪಕ್ಷಗಳ ನಾಯಕರು ಬಹಳಷ್ಟು ಆರೋಪಗಳನ್ನು ಮಾಡಿದ್ದಾರೆ. ಚನ್ನಪಟ್ಟಣ, ರಾಮನಗರ ಎಷ್ಟು ಮುಖ್ಯವೋ ಮಂಡ್ಯ ಜಿಲ್ಲೆ ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು.
ಜಿಲ್ಲೆಯ ಯಶಸ್ವಿ ಜನನಾಯಕರಾಗಿ ಜನಮಾನಸದಲ್ಲಿ ಉಳಿದಿರುವ ದಿ.ಕೆ.ವಿ.ಶಂಕರೇಗೌಡರು, ಜಿ.ಮಾದೇಗೌಡರು,ಎಚ್.ಕೆ.ವೀರಣ್ಣಗೌಡರು, ಅಂಬರೀಶ್, ಆತ್ಮೀಯರಾಗಿದ್ದ ಎಸ್.ಡಿ.ಜಯರಾಮು, ಕೆ.ಎಸ್.ಪುಟ್ಟಣ್ಣಯ್ಯ ಇವರ ಆದರ್ಶಗಳನ್ನು ನಾವೆಂದೂ ಮರೆಯುವುದಿಲ್ಲ. ನಿಮ್ಮ ಮೇಲೆ ಇಟ್ಟಿದ್ದ ಪ್ರೀತಿಯನ್ನು ನಾನು ಮುಂದುವರೆಸಿಕೊಂಡು ಹೋಗಲು ಇಚ್ಛಿಸಿದ್ದೇನೆ. ನಿಮ್ಮ ಮನೆ ಮಗನನ್ನು ಎಂದಿಗೂ ಕೈಬಿಡಬೇಡಿ ಎಂದು ಮನವಿ ಮಾಡಿದರು.ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಸ್ವಾಮೀಗೌಡ, ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಅಣ್ಣೂರು ನವೀನ್, ಗುರುದೇವರಹಳ್ಳಿ ಅರವಿಂದ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಬಿಜೆಪಿ ಮುಖಂಡರಾದ ಮಳವಳ್ಳಿ ಅಶೋಕ್‌ಕುಮಾರ್, ಇಂದ್ರೇಶ್, ಗ್ರಾಪಂ ಅಧ್ಯಕ್ಷ ಡಿ.ಎಂ.ಮಂಚೇಗೌಡ, ಪ್ರದೀಪ್, ಅಣ್ಣೂರು ಯೋಗೇಂದ್ರ, ಸೇರಿ ಹಲವರಿದ್ದರು.