ಚಾಕು ತೋರಿಸಿ ಚಿನ್ನದ ಗುಂಡಿನ ಸರ ಕಿತ್ತು ಪರಾರಿ

| Published : May 22 2025, 12:47 AM IST

ಚಾಕು ತೋರಿಸಿ ಚಿನ್ನದ ಗುಂಡಿನ ಸರ ಕಿತ್ತು ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ವೃದ್ಧೆಗೆ ಚಾಕು ನಿನ್ನ ಕೊರಳಿನಲ್ಲಿರುವ ಚಿನ್ನದ ಸರ, ಓಲೆವನ್ನು ಕೊಡು ಎಂದು ಕೇಳಿದ್ದು ವೃದ್ಧೆ ಕೊಡದೇ ಇದ್ದಾಗ ಕುತ್ತಿಗೆಗೆ ಕೈ ಹಾಕಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ದಾಬಸ್‍ಪೇಟೆ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಗೆ ಚಾಕು ತೋರಿಸಿ ಆಕೆಯ ಕುತ್ತಿಗೆಯಲ್ಲಿದ್ದ 35- 40 ಗ್ರಾಂನ ಸುಮಾರು 2 ಲಕ್ಷದ ಮೌಲ್ಯದ ಚಿನ್ನದ ಗುಂಡಿನ ಸರವನ್ನು ಕಳ್ಳನೊಬ್ಬ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಂಪುರ ಹೋಬಳಿಯ ಬಿಲ್ಲಿನಕೋಟೆ ಹೊಸಹಳ್ಳಿ ನಿವಾಸಿ ರಂಗಮ್ಮ ಇವರು ಮೇ 20 ರಂದು ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ತಮ್ಮ ತಂಗಿಯ ಮನೆಗೆ ಹೋಗಲು ಬಿಲ್ಲಿನಕೋಟೆ ಗ್ರಾಮಕ್ಕೆ ಬರುವಾಗ ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ಬಂದು ನಿಲ್ಲಿಸಿ ನಿಡವಂದ ಗ್ರಾಮಕ್ಕೆ ಹೇಗೆ ಹೋಗಬೇಕು ಎಂದು ಕೇಳಿದ್ದಾನೆ. ಆಗ ವೃದ್ಧೆ ದಾರಿ ತೋರಿಸಿ ಬರುವಾಗ, ಸ್ವಲ್ಪ ದೂರ ಹೋಗಿದ ಅಪರಿಚಿತ ಕಳ್ಳ ವಾಪಸ್ಸು ಬಂದು ವೃದ್ಧೆಗೆ ಚಾಕು ನಿನ್ನ ಕೊರಳಿನಲ್ಲಿರುವ ಚಿನ್ನದ ಸರ, ಓಲೆವನ್ನು ಕೊಡು ಎಂದು ಕೇಳಿದ್ದು ವೃದ್ಧೆ ಕೊಡದೇ ಇದ್ದಾಗ ಕುತ್ತಿಗೆಗೆ ಕೈ ಹಾಕಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.ಸರ ಕಿತ್ತುಕೊಂಡು ಪರಾರಿಯಾದ ಕಳ್ಳನು ಸುಮಾರು 30 ರಿಂದ 35 ವರ್ಷದವನಾಗಿದ್ದು, ಕಪ್ಪು ಬಣ್ಣದ ಬೈಕ್ ನಲ್ಲಿ ಬಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಚಿನ್ನದ ಸರ ಕದ್ದು ಪರಾರಿಯಾದ ಕಳ್ಳನನ್ನು ಪತ್ತೆ ಹಚ್ಚಿ ಚಿನ್ನದ ಸರವನ್ನು ಕೊಡಿಸುವಂತೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ದಾಬಸ್‍ಪೇಟೆ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.