ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು-ಅನಂತ ನಾಯಕ

| Published : Nov 27 2024, 01:02 AM IST

ಸಾರಾಂಶ

ಶಿಗ್ಗಾಂವಿ ವಿಧಾನಸಭೆಯ ಉಪ ಚುನಾವಣೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಬಸವ ತತ್ವದಡಿಯಲ್ಲಿ ಕಾಂಗ್ರೆಸ್‌ನ ಯಾಸೀರ್ ಖಾನ ಪಠಾಣ ಗೆದ್ದಿದ್ದಾರೆ ಎಂದು ಹೈಕೋರ್ಟ್‌ ವಕೀಲ ಹಾಗೂ ಶೋಷಿತ ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ ಅನಂತ ನಾಯಕ ಹೇಳಿದರು.

ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭೆಯ ಉಪ ಚುನಾವಣೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಬಸವ ತತ್ವದಡಿಯಲ್ಲಿ ಕಾಂಗ್ರೆಸ್‌ನ ಯಾಸೀರ್ ಖಾನ ಪಠಾಣ ಗೆದ್ದಿದ್ದಾರೆ ಎಂದು ಹೈಕೋರ್ಟ್‌ ವಕೀಲ ಹಾಗೂ ಶೋಷಿತ ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ ಅನಂತ ನಾಯಕ ಹೇಳಿದರು.ಶಿಗ್ಗಾಂವಿ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಶೋಷಿತರ ಸಮುದಾಯಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ತಾಲೂಕಿನ ಜನರ ನಾಡಿಮಿಡಿತ ಅರ್ಥ ಮಾಡಿಕೊಂಡು ಹಿನ್ನೆಲೆ ಗೆಲುವು ನಮ್ಮದಾಗಿಸಲು ಹಲವಾರು ತಂತ್ರಗಾರಿಕೆಯನ್ನು ಹೂಡಲಾಗಿತ್ತು. ಹೀಗಾಗಿ ನಾವು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಈ ಕ್ಷೇತ್ರದಲ್ಲಿ ಬಸವಾದಿ ಶರಣರ ಚಿಂತನೆಯನ್ನು ಎತ್ತರಕ್ಕೆ ಒಯ್ಯಲು ಇಲ್ಲಿ ಗೆಲ್ಲಲಾಗಿದೆ. ನಾಲ್ಕು ತಿಂಗಳ ಹಿಂದೆ ಇಲ್ಲಿ ಬಂದು ನಾವು ಕೆಲಸವನ್ನು ಮಾಡಿದ್ದೇವೆ, ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂಬ ಈ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ಮಹದಾಸೆಯಿಂದ ಬಸವ ತತ್ವ ಗೆಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಆದರ್ಶ ಎಲ್ಲಪ್ಪ, ವಿಭಾಗೀಯ ಸಂಚಾಲಕ ಧೂಳಿ ಭರಮಣ್ಣಾ, ಬಂಜಾರ ಸಮುದಾಯದ ರಾಜ್ಯಾಧ್ಯಕ್ಷ ಲಕ್ಷ್ಮಣ ರಮಾವತ್, ಸಹಕಾರಿ ಧುರೀಣ ಶಿವಾನಂದ ರಾಮಗೇರಿ, ವಿಭೂತಿ ಶೆಟ್ಟಿ, ಗಣೇಶ ದಸನಹಟ್ಟಿ, ಯಲ್ಲಪ್ಪ ವಾಲ್ಮೀಕಿ, ಬಸಲಿಂಗಪ್ಪ ಇಂಟೆತ್ತಿನವರ ಸೇರಿದಂತೆ ಶಿಗ್ಗಾಂವಿ ಕಾಂಗ್ರೆಸ್ ಮುಖಂಡರುಗಳು ಇದ್ದರು.