ಸಾರಾಂಶ
ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮುಖ್ಯಪೇದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮುಖ್ಯಪೇದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಕಾಂತರಾಜ್ (45) ಮೃತ ಮುಖ್ಯಪೇದೆ. ಬಾರ್ ಲೈನ್ ರಸ್ತೆಯಲ್ಲಿರುವ ಪೊಲೀಸ್ ಕ್ವಾಟ್ರಸ್‌ನಲ್ಲಿ ಕಾಂತರಾಜ್ ವಾಸ ವಾಗಿದ್ದರು. ಈ ಹಿಂದೆ ಅವರು ಎಎನ್‌ಎಫ್ ಹಾಗೂ ಕಳಸ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ 4 ವರ್ಷಗಳ ಹಿಂದೆ ಅಪಘಾತದಲ್ಲಿ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು. ಅವರಿಗೆ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಅಂದಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಕಂಪ್ಯೂಟರ್ ವಿಭಾಗದಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಮೂಲದ ಕಾಂತರಾಜ್ ಅವರ ಪತ್ನಿ ಸಂಬಂಧಿಕರು ಕಳೆದ ಮೂರು ದಿನಗಳ ಹಿಂದೆ ಮೃತ ಪಟ್ಟಿದ್ದರಿಂದ ಕಾಂತರಾಜ್ ಹೊರತುಪಡಿಸಿ ಇನ್ನುಳಿದವರು ಊರಿಗೆ ತೆರಳಿದ್ದರು. ಹಾಗಾಗಿ ಕಾಂತರಾಜ್ ಓರ್ವರೇ ಮನೆ ಯಲ್ಲಿದ್ದರು. ಮನೆ ಬಾಗಿಲು ಮಧ್ಯಾಹ್ನವಾದರೂ ತೆಗೆದಿರಲಿಲ್ಲ, ಕರ್ತವ್ಯಕ್ಕೂ ಹಾಜರಾಗಿರಲಿಲ್ಲ ಅದ್ದರಿಂದ ಅನುಮಾನ ಗೊಂಡು ಬಾಗಿಲು ತೆಗೆದು ನೋಡಿದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.18 ಕೆಸಿಕೆಎಂ 4