ಸಾರಾಂಶ
ಹೋಬಳಿಯ ಕದಾಂಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್‌ಮುನಾಫ್ ಎಲ್. ಬಿಜಾಪುರ ಅವರು ಸಿಕ್ಕ ಪರ್ಸ್‌ನಲ್ಲಿ ಬಂಗಾರ ಹಾಗೂ ಹಣ ಎಟಿಎಂ ಕಾರ್ಡ್, ವಾಹನ ಚಾಲನೆ ಲೈಸೆನ್ಸ್ ಸಂಬಂಧಿಸಿದ ವ್ಯಕ್ತಿಗೆ ಮರಳಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಡಂಬಳ: ಹೋಬಳಿಯ ಕದಾಂಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್‌ಮುನಾಫ್ ಎಲ್. ಬಿಜಾಪುರ ಅವರು ಸಿಕ್ಕ ಪರ್ಸ್‌ನಲ್ಲಿ ಬಂಗಾರ ಹಾಗೂ ಹಣ ಎಟಿಎಂ ಕಾರ್ಡ್, ವಾಹನ ಚಾಲನೆ ಲೈಸೆನ್ಸ್ ಸಂಬಂಧಿಸಿದ ವ್ಯಕ್ತಿಗೆ ಮರಳಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಮುಖ್ಯೋಪಾಧ್ಯಾಯ ಬಿಜಾಪುರ ಅವರು ಕರ್ತವ್ಯವನ್ನು ಮುಗಿಸಿಕೊಂಡು ಸಂಜೆ ಮನೆಗೆ ತೆರಳುವಾಗ ಅಡವಿಸೋಮಾಪುರ ಹತ್ತಿರ ಗದಗ ನಗರ ಪ್ರವೇಶ ರಸ್ತೆಯಲ್ಲಿ ಅ. 28ರಂದು ಒಂದು ಪರ್ಸ್ ಸಿಕ್ಕಿದೆ. ಶಿಕ್ಷಕ ತೆರೆದು ನೋಡಿದಾಗ ಕಳಸಾಪುರ ಗ್ರಾಮದ ಕೃಷ್ಣಾ ಲಮಾಣಿ ಎಂಬವರ ಪರ್ಸ್ ಆಗಿದ್ದು, ಅದರಲ್ಲಿದ್ದ ಬಂಗಾರದ ಸಮೇತ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿ ಒಪ್ಪಿಸಿದ್ದಾರೆ.ಪರ್ಸ್‌ನಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಪೊಲೀಸರು ಇವರ ಸಮ್ಮುಖದಲ್ಲಿಯೇ ಬೆಲೆ ಬಾಳುವ ವಸ್ತುಗಳನ್ನು ಕೆಲ ಸಮಯದಲ್ಲಿಯೆ ಸಂಬಂಧಿಸಿದವರಿಗೆ ಒಪ್ಪಿಸಿದ್ದಾರೆ. ಆಭರಣ ಪಡೆದುಕೊಂಡವರು ಹಾಗೂ ಪೊಲೀಸ್ ಅಧಿಕಾರಿಗಳು ಮುಖ್ಯ ಶಿಕ್ಷಕರ ಪ್ರಾಮಾಣಿಕತೆಯನ್ನು ಮೆಚ್ಚಿ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಾಮಾಣಿಕತೆ ಮೆರೆದು ವೃತ್ತಿಯ ಹಾಗೂ ಶಿಕ್ಷಕ ಸಮುದಾಯದ ಗೌರವ ಹೆಚ್ಚುವಂತೆ ಮಾಡಿದ ಮುಖ್ಯ ಶಿಕ್ಷಕರಾದ ಎ.ಎಲ್. ಬಿಜಾಪುರ ಅವರಿಗೆ ಶಿಕ್ಷಕರು ಕೂಡಾ ಅಭಿನಂದಿಸಿದ್ದಾರೆ.
)
;Resize=(128,128))
;Resize=(128,128))