ಅರಕಲಗೂಡು: ಸರ್ಕಾರಿ ಯುನಾನಿ ಮತ್ತು ಆಯುರ್ವೇದ ಸಂಯುಕ್ತ ಚಿಕಿತ್ಸಾಲಯ ಅರಕಲಗೂಡು ಇಲ್ಲಿ ನ್ಯಾಮ್ ವತಿಯಿಂದ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಎಂ.ಎಸ್.ಡಿ ವಯೋಮಿತ್ರ ಮಾಸಿಕ ಆಯುಷ್ ವಯೋಸಹಜ ಕಾಯಿಲೆಗಾಗಿ ಇಂದು ಜರುಗಿದ ಶಿಬಿರವನ್ನು ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಅವರು ಉದ್ಘಾಟನೆ ಮಾಡಿದರು.

ಆರೋಗ್ಯ ಕಾಪಾಡುವಲ್ಲಿ ಕೀಲು, ಮೂಳೆ, ವ್ಯಾಧಿಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಬಗ್ಗೆ ಪ್ರಸಾವಿಕ ನುಡಿಯನ್ನು ಆಸ್ಪತ್ರೆ ಆಡಳಿತ ಅಧಿಕಾರಿ ಡಾ. ಧನಂಜಯ. ಕೆ ನಿರ್ವಹಿಸಿದರು. ತಜ್ಞವೈದ್ಯರಾದ ಡಾ. ಜಯಶ್ರೀ ಕೆ ಹಾಗೂ ಡಾ. ಮೊಹ್ಮದ್‌, ಮುಸ್ತಫಾ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆ ನೀಡಿದರು. ಶಿರದಲ್ಲಿ ರೋಗಿಗಳಿಗೆ ವಯೋಸಹಜ ಕಾಯಿಲೆ ಬಗ್ಗೆ ಡಾ. ಜಯಶ್ರೀ ವಿವರಿಸಿ ಜೀವನಶೈಲಿ ಬದಲಾವಣೆ ಹಾಗೂ ಔಷಧಿ, ಪಥ್ಯಗಳ ಬಗ್ಗೆ ಮಾಹಿತಿ ನೀಡಿದರು.

ರಘು ಯೋಗ ಶಿಕ್ಷಣವನ್ನು ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಒದಗಿಸಿ ಸುಲಭ ಆಸನ, ಮುದ್ರೆ ಹಾಗೂ ಧ್ಯಾನ ಮಾಡುವ ಕ್ರಮಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ರಕ್ತ ಪರೀಕ್ಷೆ ಮಾಡಲಾಯಿತು.