ಸಾರಾಂಶ
ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರೆದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಕೆ.ಎಲ್.ಉದಪುಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರೆದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಕೆ.ಎಲ್.ಉದಪುಡಿ ಹೇಳಿದರು.ಪಟ್ಟಣದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಇವರಿಂದ ದಿ.ಮಹಾಂತೇಶ ಉದಪುಡಿ ಇವರ ಜನ್ಮದಿನದ ಪ್ರಯುಕ್ತ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಉಪಯುಕ್ತವಾಗಲಿ ಮತ್ತು ಅವರ ಆರೋಗ್ಯ ಸಮಸ್ಯೆ ಪರಿಹರಿಸಿಕೊಳ್ಳಲೆಂದು ತಜ್ಞ ವೈದ್ಯರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೀಲು, ರೋಗ ತಪಾಸಣೆ, ಚರ್ಮರೋಗ, ಮೂತ್ರ ಪಿಂಡ, ಕಣ್ಣು, ಮೂಗು, ಕಿವಿ ಹಾಗೂ ಸಾಮಾನ್ಯ ರೋಗಿಗಳಿಗೆ ಒಳಪಟ್ಟ ೫೦೦ ಜನ ಹೆಚ್ಚಿನ ಉಚಿತ ಆರೋಗ್ಯ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದರು.
ದಿವ್ಯ ಸಾನ್ನಿಧ್ಯ ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಅಂಗಡಿ, ಅತಿಥಿಗಳಾಗಿ ನಿವೃತ್ತ ಶಿಕ್ಷಕ ನಾಮದೇವ ಪಾಟೀಲ, ಕಲ್ಲಪ್ಪ ಸಬರದ, ಎಸ್.ಆರ್.ಹುಂಡೇಕಾರ, ವ್ಹಿ.ಎಂ.ತೆಗ್ಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಉದಪುಡಿ ಆಸ್ಪತ್ರೆ ಮುಧೋಳ ಹಾಗೂ ಐಎಂಎ ಮುಧೋಳ ಇವರ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ತಜ್ಞ ವೈದ್ಯ ಪಾಲ್ಗೊಂಡು ಸೂಕ್ತ ತಪಾಸಣೆ, ಸಲಹೆ ನೀಡಿದರು.
ಮುಖಂಖಡರಾದ ಎಸ್.ಎನ್.ಹಿರೇಮಠ, ಷಣ್ಮೂಖಪ್ಪ ಕೋಲ್ಹಾರ, ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ರವಿ ಬೋಳಿಶೆಟ್ಟಿ, ಮಲ್ಲಪ್ಪ ಅಂಗಡಿ, ಬಸವರಾಜ ಅಂಗಡಿ, ನಿಲೇಶ ಬನ್ನೂರ, ಸುಭಾಸ ಗಸ್ತಿ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಕಾತರಕಿ, ಸದಾಶಿವ ಉದಪುಡಿ, ಸಂಗಮೇಶ ಬಟಕುರ್ಕಿ, ಪ್ರಭು ಬೋಳಿಶೆಟ್ಟಿ, ಈರಣ್ಣಾ ನಿಜಗುಳಿ, ಚನ್ನಬಸು ಹುಬ್ಬಳ್ಳಿ, ಶಿಕ್ಷಕ ಸಂಗಮೇಶ ನಿಲಗುಂದ, ರವಿ ಕೋಲ್ಹಾರ, ಬಣಜಿಗ ಸಮಾಜದ ಮುಖಂಡರು, ಮಹಿಳಾ ಪ್ರತಿನಿಧಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.