ಸಾರಾಂಶ
ಪಾವಗಡದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯಿಂದ ನೇತ್ರ ತಪಾಸಣಾ ಶಿಬಿರ
ಕನ್ನಡಪ್ರಭ ವಾರ್ತೆ ಪಾವಗಡ
ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆಯಿಂದ ಗಡಿ ಭಾಗದ ರೋಗಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕೇಂದ್ರ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ತಾಲೂಕು ಕಾಂಗ್ರೆಸ್ ಹಿರಿಯ ಮುಖಂಡ ತಾಳೆಮರದಹಳ್ಳಿ ನರಸಿಂಹಯ್ಯ ಮೆಚ್ಚಿಗೆ ವ್ಯಕ್ತಪಡಿಸಿದರು.ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ, ತುಮಕೂರು ಜಿಲ್ಲಾ ಆಸ್ಪತ್ರೆ, ಮುಖಂಡರಾದ ಎಚ್.ವಿ. ಕುಮಾರಸ್ವಾಮಿ ಸಹಕಾರ ಸೇರಿದಂತೆ ಪಾವಗಡದ ಹೆಲ್ಪ್ ಸೊಸೈಟಿ, ಇವರ ವತಿಯಿಂದ ಗುರುವಾರ ಪಟ್ಟಣದ ಶ್ರೀ ಅಂಜನೇಯ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನೇತ್ರಾ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ಗಡಿ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆಯಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಇಂತಹ ಶಿಬಿರಗಳ ಪ್ರಯೋಜನವನ್ನು ರೋಗಿಗಳು ಉಪಯೋಗಿಸಿಕೊಳ್ಳುವ ಮೂಲಕ ಆರೋಗ್ಯ ಮುಕ್ತ, ಜೀವನ ನಡೆಸುವಂತೆ ಸಲಹೆ ನೀಡಿದರು.ನಿರಂತರ ಗಡಿ ತಾಲೂಕಿನಲ್ಲಿ ಉಚಿತ ಹೆಲ್ತ್ ಕ್ಯಾಂಪ್ ಆಯೋಜನೆಗೆ ಮುಂದಾದ ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ಹೆಲ್ಪ್ ಸೊಸೈಟಿಯ ಕಾರ್ಯಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ಮಾತನಾಡಿ, ಆರೋಗ್ಯವೇ ಮಹಾ ಭಾಗ್ಯ. ಆರೋಗ್ಯ ಸದೃಢತೆಯಿಂದ ಏನನ್ನಾದರೂ ಸಾಧಿಸಬಹುದು. ಆರೋಗ್ಯದ ಸುಸ್ಥಿತಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಗಡಿ ಪ್ರದೇಶದ ಜನತೆಯ ಹಿತ ಬಯಸಿ, ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆಗೆ ಮುಂದಾದ ಇಲ್ಲಿನ ಹೆಲ್ಫ್ ಸೊಸೈಟಿ ಮತ್ತು ಇತರೆ ಸಂಘ ಸಂಸ್ಥೆಗಳ ಸೇವೆಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಇನ್ನು ಅತಿ ಹೆಚ್ಚು ಅರೋಗ್ಯ ಸಂಬಂಧಿಸಿದ ಶಿಬಿರ ಆಯೋಜನೆಗಳಿಗೆ ಆ ದೇವರು ಹೆಚ್ಚಿನ ಶಕ್ತಿ ನೀಡಲಿ ಶುಭ ಹಾರೈಸಿದರು.ಇದೇ ವೇಳೆ ಈ ಕಣ್ಣಿನ ಶಸ್ತ್ರಚಿಕಿತ್ಸೆಗೆ 75ಮಂದಿ ರೋಗಿಗಳು ಆಯ್ಕೆಯಾಗಿದ್ದು, ಇಲ್ಲಿನ ಶ್ರೀ ಆಂಜನೇಯ ಶೆಟ್ಟಿ ಕಲ್ಯಾಣ ಮಂಟಪದ ಉಪಾಧ್ಯಕ್ಷರಾದ ವಿಜಯಕುಮಾರ್, ಹೆಲ್ಪ್ ಸೊಸೈಟಿಯ ಮಾನಂ ಶಶಿಕಿರಣ್ ಮಾತನಾಡಿದರು.
ವೈದ್ಯಾಧಿಕಾರಿಗಳಾದ ಡಾ. ಅಶ್ವಿನಿ, ಡಾ. ಸುಮೇಶ್ ಹಾಗೂ ಶಂಕರ್ ಆಸ್ಪತ್ರೆಯ ಆಡಳಿತ ಅಧಿಕಾರಿ ನಾಗರಾಜು, ಶ್ರೀಕಾಂತ್ ಮೂರ್ತಿ, ತಿರುಮಣಿಯ ಸಮುದಾಯ ಆರೋಗ್ಯ ಕೇಂದ್ರದ ಪವಿತ್ರಾ, ಸಾರ್ವಜನಿಕ ಆಸ್ಪತ್ರೆಯ ನಂದೀಶ್ ಕುಮಾರ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಹನುಮಂತರಾಯ, ಮೆಹರ್ ಬಾಬ ಸೆಂಟರ್ ಅಧ್ಯಕ್ಷ ರಘುಪತಿ ನಾಯ್ಡು, ಬೇಕರಿ ನಾಗರಾಜು, ಸಂಧ್ಯಾ ಮಾನಂ ಶಶಿಕಿರಣ್, ಬ್ಲಡ್ ಶಶಿಕಲಾ, ರಾಕೇಶ್, ಎಚ್.ಆರ್. ನರಸಿಂಹ, ಇತರೆ ಹಲವಾರು ಮಂದಿ ಉಪಸ್ಥಿತರಿದ್ದರು.